ಆಡುವ ವಯಸ್ಸಿನಲ್ಲೇ ಆಪ್‌ ಕಂಪೆನಿ ಸ್ಥಾಪಿಸಿದ ಸಹೋದರರು

By Ashwath
|

ಇಬ್ಬರು ಸಹೋದರರ ವಯಸ್ಸು ಇನ್ನೂ 18 ಅಗಿಲ್ಲ.ಆದರೇ ಈಗಾಗಲೇ ಭಾರತದಲ್ಲಿ ಒಂದು ಕಂಪೆನಿಯನ್ನು ಹುಟ್ಟು ಹಾಕಿದ್ದಾರೆ.ಭಾರತದ ಅತೀ ಕಿರಿಯ ವಯಸ್ಸಿನಲ್ಲೇ ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ ಪಟ್ಟವನ್ನು ಆಲಂಕರಿಸುವ ಮೂಲಕ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ.

ಹೌದು.ಆಟ ಆಡುವ ಮಕ್ಕಳ ವಯಸ್ಸಿನನಲ್ಲಿ ಇಬ್ಬರು ಸಹೋದರರು ಈಗ ಮೊಬೈಲ್‌ ಆಪ್‌ ತಯಾರಿಸುವ ಕಂಪೆನಿಯನ್ನು ಸ್ಥಾಪಿಸಿದ್ದಾರೆ. ಈ ಚೆನ್ನೈನ ಇಬ್ಬರು ಸಹೋದರರ ಸಾಧನೆಯ ಮೇಲೆ ಈಗ ಐಟಿ ಕಂಪೆನಿಗಳ ಕಣ್ಣು ಬಿದ್ದಿದೆ.ಚೆನ್ನೈನ Vael's Billabong International ಶಾಲೆಯ 8ನೇ ತರಗತಿ ಓದುತ್ತಿರುವ ಶ್ರವಣ್‌(12)6ನೇ ತರಗತಿ ಓದುತ್ತಿರುವ ಸಂಜಯ್‌‌(10) Go Dimensions ಹೆಸರಿನ ಆಪ್‌ ಕಂಪೆನಿಯನ್ನು ಸ್ಥಾಪಿಸುವ ಮೂಲಕ ಭಾರತದ ಅತೀ ಕಿರಿಯ ವಯಸ್ಸಿನ ಅಧ್ಯಕ್ಷ ಮತ್ತು ಸಿಇಒರಾಗಿದ್ದಾರೆ.

ಸಹೋದರರ ಸಾಧನೆಗೆ ಐಟಿ ದಿಗ್ಗಜರು ಭೇಷ್‌ ಎಂದಿದ್ದಾರೆ.ಭಾರತದ ಐಟಿ ಸಮ್ಮೇಳನದಲ್ಲಿ ಭಾಗವಹಿಸಿ ಒಂದು ಕಂಪೆನಿ ಸ್ಥಾಪಿಸುವುದು ಹೇಗೆ?ಅಪ್ಲಿಕೇಶನ್ ಹೇಗೆ ತಯಾರಿಸಿದ್ದೇವ ಎನ್ನುವುದರ ಬಗ್ಗೆ ಮಾತನಾಡುತ್ತಿದ್ದಾರೆ.ಹೀಗಾಗಿ ಈ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಿರುವ ಈ ಸಹೋದರರ ಬಗ್ಗೆ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ:15ರ ಕೇರಳ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು


ಕಂಪ್ಯೂಟರ್‌ ಪ್ರೊಗ್ರಾಮಿಂಗ್‌ ಭಾಷೆ QBasicನ್ನು ಶ್ರವಣ್‌ ಐದನೇ ತರಗತಿಯಲ್ಲಿ ಕಲಿತರೆ ಸಂಜಯ್‌ ಮೂರನೇ ತರಗತಿಯಲ್ಲಿ ಕಲಿತಿದ್ದಾನೆ. ಇಂಟರ್‌ನೆಟ್‌ ಮತ್ತು ಪುಸ್ತಕವನ್ನು ಓದಿ ಜಾವಾ ಭಾಷೆ, ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪ್‌ಗಳನ್ನು ತಯಾರಿಸುವ ಬಗೆಯನ್ನು ಇಬ್ಬರು ಸಹೋದರರು ತಿಳಿದಿದ್ದಾರೆ.

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು


ಇಬ್ಬರು ಸೇರಿ ಆಂಡ್ರಾಯ್ಡ್ ಪ್ಲೇಸ್ಟೋರ್‌ ಮತ್ತು ಆಪ್‌ ಸ್ಟೋರ್‌ನಲ್ಲಿ 11ಅಪ್ಲಿಕೇಶನ್‌ಗಳನ್ನು ತಯಾರಿಸಿದ್ದಾರೆ. ಇದುವರೆಗೆ 35 ಸಾವಿರ ಕ್ಕೂ ಹೆಚ್ಚು ಬಾರಿ ಇವರು ತಯಾರಿಸಿದ ಆಪ್‌‌ಗಳು ಡೌನ್‌ಲೋಡ್‌ ಆಗಿವೆ.

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಮೊದಲ ಆಪ್‌ ಬಿಡುಗಡೆ ಮಾಡುವ ಮೊದಲು 150 ಸಲ ಆಪ್‌ನ್ನು ಇವರಿಬ್ಬರು ಪರೀಕ್ಷಿಸಿದ್ದರಂತೆ.ಈ ವಯಸ್ಸಿನಲ್ಲೇ ಆಪ್‌ ತಯಾರಿಸಿಲು ಇವರಿಗೆ ಸ್ಟೀವ್‌ ಜಾಬ್ಸ್‌ ಮತ್ತು ಬಿಲ್‌ ಗೇಟ್ಸ್‌ ಪ್ರೇರಣೆಯಂತೆ.

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು


ಇವರು ತಯಾರಿಸಿದ Catch Me Cop ವಿಡಿಯೋ ಗೇಮಿಂಗ್‌‌ ಆಪ್‌ ಇದುವರೆಗೂ ಹತ್ತು ಸಾವಿರಕ್ಕೂ ಹೆಚ್ಚುಬಾರಿ ಆಪ್‌ ಸ್ಟೋರ್‌ನಿಂದ ಡೌನ್‌ ಲೋಡ್‌ ಆಗಿದೆ.

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು


ಹೆಚ್ಚಾಗಿ ವಿದ್ಯಾರ್ಥಿ‌ಗಳಿಗೆ ಸಹಾಯವಾಗುವ ಆಪ್‌ ತಯಾರಿಸುತ್ತಿದ್ದು,ಅಧ್ಯಯನದ ಜೊತೆಗೆ ಬಿಡುವಿನ ಸಮಯದಲ್ಲಿ ಆಪ್‌ನ್ನು ತಯಾರಿಸುತ್ತಿದ್ದಾರೆ. ಭವಿಷ್ಯದಲ್ಲಿ ವಿಶ್ವದ ಅತೀ ಹಗುರದ ಟ್ಯಾಬ್ಲೆಟ್‌ನ್ನು ತಮ್ಮ ಕಂಪೆನಿಯಿಂದಲೇ ಅಭಿವೃದ್ಧಿಪಡಿಸಬೇಕು ಎನ್ನುವ ಕನಸನ್ನು ಇಬ್ಬರು ಕಾಣುತ್ತಿದ್ದಾರೆ.

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು


ಭಾರತದಲ್ಲಿ 18 ವರ್ಷ‌ದ ಒಳಗಿನ ವ್ಯಕ್ತಿಗಳಿಗೆ ಕಂಪೆನಿ ಆರಂಭಿಸಲು ಅವಕಾಶ ಇಲ್ಲದ ಕಾರಣ ಶ್ರವಣ್‌ ಮತ್ತು ಸಂಜಯ್‌ ಹೆಸರಿನಲ್ಲಿ ಕಂಪೆನಿಯನ್ನು ರಿಜಿಸ್ಟರ್‍ ಮಾಡಿಲ್ಲ. ಬದಲಾಗಿ ಇವರ ಕುಟುಂಬದ ಏಳು ಜನರ ಹೆಸರಿನಲ್ಲಿ Go Dimensions ಕಂಪೆನಿಯನ್ನು ರಿಜಿಸ್ಟರ್‌ ಮಾಡಲಾಗಿದೆ.

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಭಾರತದ ಕಿರಿಯ ಮೊಬೈಲ್‌ ಆಪ್‌ ತಯಾರಕ ಸಹೋದರರು

ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ ಸಹೋದರರ ತಂದೆ
ತಂದೆ ಕುಮಾರನ್‌ ಸುರೇಂದ್ರನ್‌.ಪ್ರಖ್ಯಾತ ಆಂಟಿ ವೈರಸ್‌‌ ಕಂಪೆನಿ Symantec ನಿರ್ದೇಶಕರಾಗಿದ್ದರೆ,ತಾಯಿ ಜ್ಯೋತಿ ಲಕ್ಷ್ಮೀ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.
ಇವರ ಕಂಪೆನಿಯ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಬಹುದು:www.godimensions.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X