ಲಂಬೋರ್ಗಿನಿ ಐಷಾರಾಮಿ ಸ್ಮಾರ್ಟ್‌ಫೋನ್ ಲಾಂಚ್: ಬೆಲೆ ಎಷ್ಟು..?
ದುಬಾರಿ ಬೆಲೆಯ ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಲಂಬೋರ್ಗಿನಿ ನಿರ್ಮಿಸಿರುವ ಐಷಾರಾಮಿ ಫೋನಿಗೆ ಆಲ್ಫಾ ಓನ್ ಎಂದು ಹೆಸರಿಡಲಾಗಿದೆ.
ಇಟಲಿ ಮೂಲದ ಆಟೋ ಮೊಬೈಲ್ ಬ್ರಾಂಡ್ ಲಂಬೋರ್ಗಿನಿ ಐಷಾರಾಮಿ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಿದ್ದು, ಸದ್ಯ ಈ ಸ್ಮಾರ್ಟ್‌ಫೋನ್ ಯುನಿಟೆಡ್ ಕಿಂಡಮ್ ಮತ್ತು ಯುನಿಟೆಡ್ ಅರಬ್ ಎರಿಮೇಟ್ಸ್ ನಲ್ಲಿ ಮಾರಾಟಕ್ಕಿದೆ ಎನ್ನಲಾಗಿದೆ.

ಓದಿರಿ: ಕಲರ್ ಕಲರ್ ವಾಟ್ಸ್‌ಆಪ್
ದುಬಾರಿ ಬೆಲೆಯ ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಲಂಬೋರ್ಗಿನಿ ನಿರ್ಮಿಸಿರುವ ಐಷಾರಾಮಿ ಫೋನಿಗೆ ಆಲ್ಫಾ ಓನ್ ಎಂದು ಹೆಸರಿಡಲಾಗಿದ್ದು, ಫೋನಿನ ಬೆಲೆಯೂ $2,450 ಆಗಿದ್ದು, ಭಾರತೀಯ ರೂಪಾಯಿಗಳಲ್ಲಿ ರೂ.1.57 ಲಕ್ಷ ಆಗಲಿದೆ.

ಆಲ್ಫಾ ಓನ್ ಸ್ಮಾರ್ಟ್‌ಫೋನ್:
ಇಟಲಿಯನ್ ಲೆದರ್ ಅನ್ನು ಬಳಸಿ ಮಾಡಿರುವ ಈ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್, 20 MP ಹಿಂಭಾಗದ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗದೆ. ಡ್ಯುಯಲ್ ಸಿಮ್ ಸ್ಲಾಟ್ ನೀಡಲಾಗಿದ್ದು, ಡಾಲ್ಬಿ ಸ್ಪೀಕರ್ ಗಳನ್ನು ಹೊಂದಿದೆ.

ವೇಗದ ಪ್ರೋಸೆಸರ್:
ಈ ದುಬಾರಿ ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 820 ಪ್ರೋಸೆಸರ್ ಮತ್ತು 4GB RAM ನೀಡಲಾಗಿದ್ದು, 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.

5.5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ:
ಲಂಬೋರ್ಗಿನಿ ಆಲ್ಫಾ ಓನ್ ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 3250 mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಆನ್‌ಲೈನಿನಲ್ಲಿ ಲಭ್ಯ:
ಈ ಸ್ಮಾರ್ಟ್‌ಫೋನ್ ಆನ್‌ಲೈನಿನಲ್ಲಿ ಲಭ್ಯವಿದ್ದು, ಅದನ್ನು ಬಿಟ್ಟರೇ ಲಂಡನ್ ಮತ್ತು ದುಬೈ ನಗರಗಳಲ್ಲಿ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.


Click it and Unblock the Notifications