ಕಲರ್ ಕಲರ್ ವಾಟ್ಸ್‌ಆಪ್
ಫೇಸ್‌ಬುಕ್ ನಲ್ಲಿದ್ದ ಕಲರ್ ಕಲರ್ ಸೆಟ್ಟಸ್ ಆಪ್‌ಡೇಟ್ ಮಾಡುವ ಅವಕಾಶವನ್ನು ತನ್ನಲ್ಲೂ ನೀಡಿದೆ. ಈ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಬಣ್ಣದಲ್ಲಿ ಸೆಟ್ಟಸ್ ಆಪ್‌ಡೇಟ್ ಮಾಡಬಹುದಾಗಿದೆ.
ಫೇಸ್‌ಬುಕ್ ಒಡೆತನದ ಸೋಶಿಯಲ್ ಮೇಸೆಂಜಿಗ್ ತಾಣ ವಾಟ್ಸ್ಆಪ್ ಹೊಸದೊಂದು ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಿದೆ. ಫೇಸ್‌ಬುಕ್ ನಲ್ಲಿದ್ದ ಕಲರ್ ಕಲರ್ ಸೆಟ್ಟಸ್ ಆಪ್‌ಡೇಟ್ ಮಾಡುವ ಅವಕಾಶವನ್ನು ತನ್ನಲ್ಲೂ ನೀಡಿದೆ. ಈ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಬಣ್ಣದಲ್ಲಿ ಸೆಟ್ಟಸ್ ಆಪ್‌ಡೇಟ್ ಮಾಡಬಹುದಾಗಿದೆ.

ಓದಿರಿ: ಜಿಯೋ ಫೋನ್‌ಗೆ ಮಾರಕವಾಗಲಿದೆ ಈ ಭಾರತೀಯ ಫೋನ್ : ಕೇವಲ ರೂ.299ಕ್ಕೆ ಮಾರಾಟ.!
ಈ ಹಿಂದೆಯೇ ಕಲರ್ ಆಯ್ಕೆಯನ್ನು ಬಿಡುಗಡೆ ಮಾಡಿದ್ದ ವಾಟ್ಸ್ಆಪ್, ಬೀಟಾ ಬಳಕೆದಾರರಿಗೆ ಮಾತ್ರವೇ ಅದನ್ನು ಬಳಸುವ ಅವಕಾಶವನ್ನು ಮಾಡಿಕೊಟ್ಟಿತ್ತು. ಸದ್ಯ ಈ ಆಯ್ಕೆಯನ್ನು ಎಲ್ಲಾ ಬಳಕೆದಾರರಿಗೂ ನೀಡಲು ಮುಂದಾಗಿದೆ.

ಕಲರ್ ಫುಲ್ ಬ್ಯಾಕ್‌ಗ್ರೌಂಡ್:
ವಾಟ್ಸ್‌ಆಪ್ ಸ್ಟೆಟಸ್ ಆಪ್‌ಡೇಟ್ ಮಾಡುವ ಸಂದರ್ಭದಲ್ಲಿ ಹಿಂಭಾಗದಲ್ಲಿ ಕಲರ್ ಫುಲ್ ಬ್ಯಾಕ್‌ಗ್ರೌಂಡ್ ಗಳನ್ನು ನೀವು ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಇಲ್ಲಿ ನೀವು ವಿವಿಧ ಫಾಂಟ್ ಗಳನ್ನು ಬಳಕೆ ಮಾಡಿಕೊಂಡು ಬರೆಯಬಹುದಾಗಿದ್ದು, ಎಮೋಜಿಗಳನ್ನು ಬಳಸಿಕೊಳ್ಳಬಹುದು.

ಆಂಡ್ರಾಯ್ಡ್ ಮತ್ತ ಐಫೋನ್‌ನಲ್ಲಿ ಲಭ್ಯ:
ವಾಟ್ಸ್‌ಆಪ್ ಕಲರ್ ಸೆಟ್ಟಸ್ ಆಪ್‌ಡೇಟ್ ಆಯ್ಕೆಯೂ ಆಂಡ್ರಾಯ್ಡ್ ಮತ್ತು ಐಪೋನ್ ಬಳಕೆದಾರರಿಗೆ ಲಭ್ಯವಿದೆ. ಈ ಎರಡು ಬಳಕೆದಾರರೂ ಇನ್ನು ಮುಂದೆ ತಮ್ಮ ಸ್ಟೆಟಸ್‌ಗಳನ್ನು ಕಲರ್ ಕಲರ್ ನಲ್ಲಿ ಆಪ್‌ಡೇಟ್ ಮಾಡಬಹುದಾಗಿದೆ.

ಫೇಸ್‌ಬುಕ್ ನಲ್ಲಿ ಮೊದಲು:
ಈ ಕಲರ್ ಫುಲ್ ಸ್ಟೆಟಸ್ ಆಪ್‌ಡೇಟ್ ಮಾಡುವ ಆಯ್ಕೆಯೂ ಮೊದಲಿಗೆ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿತ್ತು. ನಂತರದಲ್ಲಿ ಹೆಚ್ಚಿನ ಜನರು ಇದನ್ನು ಬಳಕಸಿಕೊಳ್ಳಲು ಮುಂದಾದ ಕಾರಣ ಫೇಸ್‌ಬುಕ್ ತನ್ನ ಒಡೆತನದ ವಾಟ್ಸ್‌ಆಪ್ ನಲ್ಲಿಯೂ ಈ ಆಯ್ಕೆಯನ್ನು ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಅಲ್ಲದೇ ವೆಬ್ ನಲ್ಲಿ ಯೂ ಶೇರ್ ಮಾಡಬಹುದು:
ಇದಲ್ಲದೇ ನೀವು ವಾಟ್ಸ್‌ಆಪ್ ಸ್ಟೆಟಸ್ ಅನ್ನು ಇನ್ನು ಮುಂದೆ ವಾಟ್ಸ್‌ಆಪ್ ವೆಬ್‌ನಲ್ಲಿಯೂ ನೀವು ಶೇರ್ ಮಾಡಬಹುದಾಗಿದೆ. ಇದು ಹೊಸ ಆಯ್ಕೆಯಾಗಿದೆ. ವೆಬ್ ವಾಟ್ಸ್‌ಆಪ್ ಬಳಕೆದಾರರಿಗೆ ಇದು ಸಹಾಯಕವಾಗಿದೆ.


Click it and Unblock the Notifications








