ನಾಳೆ Lava Agni 3 5G ಲಾಂಚ್: ಬೆಲೆ, ಫೀಚರ್ಸ್ ಬಹಿರಂಗ.. ಹೇಗಿದೆ ಗೊತ್ತಾ?
ಲಾವಾ (Lava) ಕಂಪನಿಯು ತನ್ನ ಅಗ್ನಿ (Agni) ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಲಾವಾ ಅಗ್ನಿ 3 5G (Lava Agni 3 5G) ಹೆಸರಿನೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಂಪನಿಯು ನಾಳೆ (ಅಕ್ಟೋಬರ್ 4) ಅಧಿಕೃತವಾಗಿ ಈ ಸ್ಮಾರ್ಟ್‌ಫೋನ್ ಅನ್ನು ಲೋಕಾರ್ಪಣೆಗೊಳಿಸಲಿದೆ. ಈ ಮೊಬೈಲ್ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಡಲಿದೆ. ಬನ್ನಿ, ನೂತನ ಲಾವಾ ಅಗ್ನಿ 3 5G ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಲಾವಾ ಈಗಾಗಲೇ ಫೋನಿನ ಹೊಸ ಟೀಸರ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಲಾವಾ ಅಗ್ನಿ 3 5G ವಿನ್ಯಾಸವನ್ನು ಬಹಿರಂಗಪಡಿಸಿದೆ. ಮುಂಬರುವ ಫೋನ್ ಡ್ಯುಯಲ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರಲಿದೆ. ಯಾವ ಬೆಲೆ ಶ್ರೇಣಿಯಲ್ಲಿ ಬರಲಿದೆ ಎಂಬುದನ್ನು ಸಹ ದೃಢಪಡಿಸಿದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಅನ್ನು ಹೊಂದಿರಲಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 4,700mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಲಾವಾ ಅಗ್ನಿ 3 5G ಬೆಲೆ ಎಷ್ಟು?
ಕಂಪನಿಯು ಅಧಿಕೃತವಾಗಿ ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್‌ನ ಬೆಲೆ ಶ್ರೇಣಿಯನ್ನು ಟೀಸರ್ ವಿಡಿಯೋ ಪೋಸ್ಟ್‌ನಲ್ಲಿ ಹಂಚಿಕೊಂಡಿದೆ. ಮುಂಬರುವ ಈ 5G ಮೊಬೈಲ್, 30 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಇದು ಭಾರತದ ಮೊದಲ ಡ್ಯುಯಲ್ AMOLED ಡಿಸ್ಪ್ಲೇ ಫೋನ್ ಎಂದು ಕಂಪನಿ ತಿಳಿಸಿದೆ. ಬ್ಯಾಂಕ್ ಆಫರ್‌ನೊಂದಿಗೆ ಈ ಫೋನ್ ಕಡಿಮೆ ಬೆಲೆಗೆ ಮಾರಟವಾಗಲಿದೆ ಎಂದು ಹೇಳಲಾಗಿದೆ. ಇದನ್ನು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಮಾರಾಟ ಮಾಡಲಾಗುವುದು.
ಈ ಸುದ್ದು ಓದಿದ್ದೀರಾ?: ಸದ್ದಿಲ್ಲದೆ Realme C65s ಲಾಂಚ್: ಬಿಗ್ ಬ್ಯಾಟರಿ, 256GB ಸ್ಟೋರೇಜ್.. ಕಡಿಮೆ ಬೆಲೆ!
ಲಾವಾ ಅಗ್ನಿ 3 5G ಲಾಂಚ್ ಈವೆಂಟ್ ವೀಕ್ಷಣೆ ಹೇಗೆ?
ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್ ನಾಳೆ (ಅಕ್ಟೋಬರ್ 4) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ ಬಿಡುಗಡೆ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಲಾವಾ ಅಗ್ನಿ 3 5G ಬಿಡುಗಡೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಲಾವಾ ಕಂಪನಿಯ ವೆಬ್‌ಸೈಟ್, ಯೂಟ್ಯೂಬ್ ಪ್ಲಾಟ್‌ಫಾರ್ಮ್ ಮತ್ತು ಕಂಪನಿಯ ಎಲ್ಲಾ ಇತರೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಾಂಚ್ ಈವೆಂಟ್ ಅನ್ನು ಲೈವ್ ಆಗಿ ವೀಕ್ಷಿಸಬಹುದು.
ಲಾವಾ ಅಗ್ನಿ 3 5G ಫೋನಿನ ವೈಶಿಷ್ಟ್ಯಗಳು
ಲಾವಾ ಅಗ್ನಿ 3 5G ಫೋನ್ 6.78 ಇಂಚಿನ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1.5K ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗುತ್ತದೆ. ಇದರ ಗರಿಷ್ಠ ಗಡಿಯಾರದ ವೇಗ 2.5 GHz ಆಗಿದೆ.
ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು 8GB LPDDR4X RAM, 256GB UFS 3.1 ಸ್ಟೋರೇಜ್, 8GB ವರ್ಚುವಲ್ RAM ನೊಂದಿಗೆ ಪರಿಚಯಿಸಲಿದೆ. ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದು 50 ಮೆಗಾಪಿಕ್ಸೆಲ್ ಸೋನಿ OIS ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ 4,700mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಬೆಂಬಲ ಹೊಂದಿರಲಿದೆ.


Click it and Unblock the Notifications








