Home
ಮೊಬೈಲ್

Lava Agni 3 5G vs Lava Agni 2 5G: ಎರಡು ಫೋನ್‌ಗಳ ವ್ಯತ್ಯಾಸವೇನು? ಯಾವುದು ಬೆಸ್ಟ್‌? ಇಲ್ಲಿದೆ ಮಾಹಿತಿ

Lava Agni 3 5G vs Agni 2 5G: ಲಾವಾ ಕಂಪನಿಯು ತನ್ನ ಬಹುನಿರೀಕ್ಷಿತ ಲಾವಾ ಅಗ್ನಿ 3 5G (Lava Agni 3 5G) ಅನ್ನು ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಎರಡು OLED ಡಿಸ್ಪ್ಲೇಗಳನ್ನು ಹೊಂದಿದೆ. ಇದನ್ನು ಹೊರತುಪಡಿಸಿ, ಈ ಫೋನ್ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಹೊಸ ಫೋನ್ ಲಾವಾ ಅಗ್ನಿ 2 5G (Lava Agni 2 5G) ಉತ್ತರಾಧಿಕಾರಿಯಾಗಿದೆ. ಬನ್ನಿ, ಲಾವಾ ಅಗ್ನಿ 3 ಮತ್ತು ಹಳೆಯ ಲಾವಾ ಅಗ್ನಿ 2 ನಡುವಿನ ವ್ಯತ್ಯಾಸಗಳನ್ನು ತಿಳಿಯೋಣ.

ಕಂಪನಿಯು ಲಾವಾ ಅಗ್ನಿ 3 5G ಅನ್ನು 8GB + 128GB ಸ್ಟೋರೇಜ್ ಮತ್ತು 8GB + 256GB ಸ್ಟೋರೇಜ್ ರೂಪಾಂತರಗಳಲ್ಲಿ ಪರಿಚಯಿಸಿದೆ. ಚಾರ್ಜರ್‌ನೊಂದಿಗೆ ಈ ಫೋನನ್ನು ಖರೀದಿಸಿದರೆ, 128GB ರೂಪಾಂತರದ ಬೆಲೆ 22,999 ರೂ. ಆಗಿರುತ್ತದೆ ಮತ್ತು 256GB ರೂಪಾಂತರವು 24,999 ರೂ.ಗೆ ಲಭ್ಯವಿದೆ. ಆದರೆ, ಚಾರ್ಜರ್ ಇಲ್ಲದೆ, ಈ ಫೋನನ್ನು 20,999 ರೂ.ಗೆ ಖರೀದಿಸಬಹುದು. ಆದರೆ, ಲಾವಾ ಅಗ್ನಿ 2 ಆರಂಭಿಕ ಬೆಲೆ 16,999 ರೂ. ಆಗಿದೆ.

Lava Agni 3 vs Lava Agni 2: ಎರಡು ಫೋನ್‌ಗಳ ವ್ಯತ್ಯಾಸವೇನು? ಯಾವುದು ಬೆಸ್ಟ್‌?

ಲಾವಾ ಅಗ್ನಿ 3 vs ಲಾವಾ ಅಗ್ನಿ 2 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವಿರ

ಲಾವಾ ಅಗ್ನಿ 3 5G ಫೋನ್ 6.78 ಇಂಚಿನ 1.5K 3D ಕರ್ವ್ಡ್ ಪ್ರಾಥಮಿಕ ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಫೋನಿನ ಹಿಂಭಾಗದಲ್ಲಿ 1.74 ಇಂಚಿನ AMOLED ಡಿಸ್ಪ್ಲೇ ಇದೆ. ಇದು ಕ್ಯಾಮೆರಾ ಸಂವೇದಕದ ಹತ್ತಿರದಲ್ಲಿದೆ. ಆದರೆ, ಲಾವಾ ಅಗ್ನಿ 2 ಫೋನ್ 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಲಾವಾ ಅಗ್ನಿ 3 ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಶನ್ 7300 ಎಕ್ಸ್ ಪ್ರೊಸೆಸರ್ ಅಳವಡಿಸಲಾಗಿದೆ. ಲಾವಾ ಅಗ್ನಿ 2 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಸ್ಟೋರೇಜ್ ಆಯ್ಕೆ

ಲಾವಾ ಅಗ್ನಿ 3 5G ಫೋನ್ 8GB RAM ಮತ್ತು 256GB ವರೆಗೆ ಸ್ಟೋರೇಜ್ ಹೊಂದಿದೆ. 8GB ವರ್ಚುವಲ್ RAM ಸಹ ಇದೆ. ಲಾವಾ ಅಗ್ನಿ 2 5G ಫೋನ್ 8GB RAM ನ ಬೆಂಬಲವನ್ನು ಹೊಂದಿದೆ. ಇದರ RAM ಅನ್ನು ವಾಸ್ತವಿಕವಾಗಿ 16GB ವರೆಗೆ ವಿಸ್ತರಿಸಬಹುದು. ಇದು 256GB ವರೆಗೆ ಸ್ಟೋರೇಜ್ ಅನ್ನು ಹೊಂದಿದೆ.

ಈ ಸುದ್ದಿ ಓದಿದ್ದೀರಾ?: Tecno: ಈ 5G ಫೋನ್ ಬೆಲೆ 14,000 ಇಳಿಕೆ; 512GB ಸ್ಟೋರೇಜ್, 108MP ಕ್ಯಾಮೆರಾ.. ಯಾವುದು?

ಸಾಫ್ಟ್‌ವೇರ್ ಸಾಮರ್ಥ್ಯ

ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಲಾವಾ ಅಗ್ನಿ 2 5G ಮೊಬೈಲ್ ಆಂಡ್ರಾಯ್ಡ್ 13.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಮತ್ತು ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಕ್ಯಾಮೆರಾ ರಚನೆ

ಲಾವಾ ಅಗ್ನಿ 3 5G ಫೋನ್ OIS + EIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 3X ಆಪ್ಟಿಕಲ್ ಜೂಮ್ + EIS ಜೊತೆಗೆ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ EIS ಜೊತೆಗೆ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಲಾವಾ ಅಗ್ನಿ 2 5G ಫೋನ್ ನಾಲ್ಕು ಹಿಂಬದಿಯ ಕ್ಯಾಮೆರಾಗಳ ಬೆಂಬಲವನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ. ಸೆಲ್ಫಿಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಲಭ್ಯವಿದೆ.

ಬ್ಯಾಟರಿ ಬ್ಯಾಕಪ್

ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಲಾವಾ ಅಗ್ನಿ 2 5G ಫೋನ್ 4700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Lava Agni 3 5G vs Lava Agni 2 5G comparison: Know the differences between the two phones, see here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+