Tecno: ಈ 5G ಫೋನ್ ಬೆಲೆ 14,000 ಇಳಿಕೆ; 512GB ಸ್ಟೋರೇಜ್, 108MP ಕ್ಯಾಮೆರಾ.. ಯಾವುದು?
ಹೊಸ 5G ಫೋನ್ ಖರೀದಿಸುವವರಿಗೆ ಇದು ಒಳ್ಳೆಯ ಸುದ್ದಿ. ಕಡಿಮೆ ಬೆಲೆಯಲ್ಲಿ 512GB ಸ್ಟೋರೇಜ್ ಹೊಂದಿರುವ ಈ 5G ಮೊಬೈಲ್ ಅನ್ನು ನೀವು ಖರೀದಿಸಬಹುದು. ಹೌದು, ಟೆಕ್ನೋ ಕಂಪನಿಯು ಕಳೆದ ವರ್ಷ ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G (Tecno Camon 20 Premier 5G) ಅನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆ 29,999 ರೂ. ಆಗಿದೆ. ಪ್ರಸ್ತುತ, ಈ ಫೋನ್ 14,000 ರೂ.ಗಳ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಜೊತೆಗೆ, ಬ್ಯಾಂಕ್ ಆಫರ್‌ಗಳು, ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್‌ಗಳು ಲಭ್ಯವಿದೆ.
ನೀವು ಹೊಸ ಮತ್ತು ಕಡಿಮೆ ಬೆಲೆಯ ಪವರ್‌ಫುಲ್ ಫೋನ್ ಖರೀದಿಸಲು ಬಯಸಿದರೆ, ಈ ಮೊಬೈಲ್ ಉತ್ತಮ ಆಯ್ಕೆಯಾಗಲಿದೆ. ಈ ಫೋನ್ 16GB RAM ಮತ್ತು 512GB ವರೆಗೆ ಸ್ಟೋರೇಜ್ ಒಳಗೊಂಡಿದೆ. 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ, 5000mAh ಬ್ಯಾಟರಿ, 108 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು, ಈ 5G ಮೊಬೈಲ್ ಅನ್ನು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದು. ಇತರೆ ಚಿಲ್ಲರೆ ಮಳಿಗೆಗಳಲ್ಲಿಯೂ ಲಭ್ಯವಿರಲಿದೆ.

ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಫೋನಿನ ಬೆಲೆ ಮತ್ತು ಆಫರ್‌ಗಳು
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಫೋನಿನ ಖರೀದಿ ಮೇಲೆ ಕಂಪನಿಯು ಶೇ.62 ರಷ್ಟು ಅಂದರೆ 14,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಈ ದೊಡ್ಡ ರಿಯಾಯಿತಿಯೊಂದಿಗೆ, ಮೊಬೈಲ್ ಅನ್ನು ಕೇವಲ 15,999 ರೂ.ಗಳಲ್ಲಿ ಖರೀದಿಸಬಹುದು. ಜೊತೆಗೆ, ಎಸ್‌ಬಿಐ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ 1,250 ರೂ.ಗಳ ವರೆಗೆ ರಿಯಾಯಿತಿ ಲಭ್ಯವಿರುತ್ತದೆ.
ಇದರೊಂದಿಗೆ, ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 1,500 ರೂ.ಗಳ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಬ್ಯಾಂಕ್ ಆಫರ್‌ಗಳ ಜೊತೆಗೆ, ನೀವು ನೋ ಕಾಸ್ಟ್ ಇಎಂಐ ಸೌಲಭ್ಯದ ಪ್ರಯೋಜನ ಪಡೆಯಬಹುದು. ಈ ಮೂಲಕ ಫೋನನ್ನು 3 ರಿಂದ 6 ತಿಂಗಳ ಸುಲಭ ಕಂತುಗಳಲ್ಲಿ ಖರೀದಿಸಬಹುದು. ಈ ಫೋನಿನಲ್ಲಿ 15,050 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ನೀಡಲಾಗುತ್ತದೆ.
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಫೋನ್ 6.67 ಇಂಚಿನ ಎಫ್‌ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1080 x 2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ.
ಪ್ರೊಸೆಸರ್: ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8050 6nm ಪ್ರೊಸೆಸರ್ ಅನ್ನು ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ ARM G77 MC9 GPU ಅನ್ನು ಹೊಂದಿದೆ. ಈ ಟೆಕ್ನೋ ಫೋನ್ 8GB LPDDR4X RAM ಮತ್ತು 512GB ವರೆಗಿನ ಆಂತರಿಕ ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಇದು 8 GB ವಿಸ್ತೃತ RAM ತಂತ್ರಜ್ಞಾನವನ್ನು ಸಹ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ಆಧಾರಿತ HiOS 13 ನಲ್ಲಿ ಬಂದಿದೆ. ಇದರೊಂದಿಗೆ ಓಎಸ್ ಮತ್ತು ಭದ್ರತಾ ನವೀಕರಣಗಳು ಸಹ ಲಭ್ಯವಿದೆ.
ಈ ಸುದ್ದಿ ಓದಿದ್ದೀರಾ?: iQOO Z9 Turbo+ ಗ್ರ್ಯಾಂಡ್ ಎಂಟ್ರಿ: ದೊಡ್ಡ ಬ್ಯಾಟರಿ, ಸೋನಿ ಕ್ಯಾಮೆರಾ.. ಬೆಲೆ ಎಷ್ಟು?
ಕ್ಯಾಮೆರಾ: ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 6P + 1G ಲೆನ್ಸ್, 50 ಮೆಗಾಪಿಕ್ಸೆಲ್ ಪ್ರಾಥಮಿಕ RGBW ಕ್ಯಾಮೆರಾ ಇದೆ. 108 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, PDAF ಮತ್ತು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸಂವೇದಕ ಲಭ್ಯವಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
ಬ್ಯಾಟರಿ: ಕಂಪನಿಯು ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಮೊಬೈಲ್ ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 45W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಕನೆಕ್ಟಿವಿಟಿ ಆಯ್ಕೆಗಳು: ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು 5G SA/NSA, ಡ್ಯುಯಲ್ 4G VoLTE, Wi-Fi, ಬ್ಲೂಟೂತ್ 5.2, USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ.


Click it and Unblock the Notifications








