ಇಂದಿನಿಂದ Lava Blaze 3 ಸೇಲ್ ಶುರು: ಕೇವಲ 9,999 ರೂ.! ಸಖತ್ ಆಫರ್
ಕೈಗೆಟುಕುವ ಬೆಲೆಯಲ್ಲಿ ಹೊಸ 5G ಫೋನ್ ಖರೀದಿಸುವವರಿಗೆ ಸಂತಸದ ಸುದ್ದಿ ಇದೆ. ಅದರಲ್ಲೂ ಲಾವಾ ಮೊಬೈಲ್ ಕೊಳ್ಳುವ ಬಯಕೆ ಇದ್ದರೆ ಸಖತ್ ಆಫರ್ ಸಿಗುತ್ತದೆ. ಹೌದು, ಲಾವಾ ಕಂಪನಿಯು ಇತ್ತೀಚೆಗೆ ಲಾವಾ ಬ್ಲೇಜ್ 3 5G (Lava Blaze 3 5G) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಫೋನ್ ಇಂದು (ಸೆ.18) ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನಿನ ಖರೀದಿ ಮೇಲೆ ಯಾವೆಲ್ಲ ಆಫರ್‌ಗಳಿವೆ? ಬೆಲೆ ಎಷ್ಟು? ತಿಳಿಯೋಣ ಬನ್ನಿ.
ಲಾವಾ ತನ್ನ ಭಾರತೀಯ ಗ್ರಾಹಕರಿಗಾಗಿ ಬ್ಲೇಜ್ ಸರಣಿಯಲ್ಲಿ ಲಾವಾ ಬ್ಲೇಜ್ 3 5G ಅನ್ನು ಪರಿಚಯಿಸಿದೆ. ಇದು ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಹೊಂದಿದೆ. 6.56 ಇಂಚಿನ ಹೆಚ್‌ಡಿ ಡಿಸ್ಪ್ಲೇ, 6GB RAM ಮತ್ತು 128GB ಸ್ಟೋರೇಜ್ ಒಳಗೊಂಡಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 18 ವ್ಯಾಟ್ ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಕಂಪನಿಯು ಹೊಸ 5G ಫೋನನ್ನು ಪ್ರೀಮಿಯಂ ಗಾಜಿನ ವಿನ್ಯಾಸದೊಂದಿಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಗ್ಲಾಸ್ ಗೋಲ್ಡ್ ಮತ್ತು ಗ್ಲಾಸ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನ ಹಿಂಭಾಗದ ಫಲಕದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಇದೆ. ಇದರಲ್ಲಿ ಹೊಸ ವೈಬ್ ಎಲ್‌ಇಡಿ ಲೈಟ್ ಅಳವಡಿಸಲಾಗಿದೆ. ಮುಂಭಾಗದ ಫಲಕದಲ್ಲಿ ಪಂಚ್ ಹೋಲ್ ನಾಚ್ ಮತ್ತು ಫ್ಲಾಟ್ ಸ್ಕ್ರೀನ್ ಬರುತ್ತದೆ. ಒಟ್ಟಾರೆಯಾಗಿ, ಈ ಫೋನ್ ಅಗ್ಗದ ಬೆಲೆಯಲ್ಲಿ ಆಕರ್ಷಕವಾಗಿ ಕಾಣುತ್ತದೆ.
ಭಾರತದಲ್ಲಿ ಲಾವಾ ಬ್ಲೇಜ್ 3 5G ಬೆಲೆ ಎಷ್ಟಿದೆ?
ಕಂಪನಿಯು ಲಾವಾ ಬ್ಲೇಜ್ 3 5G ಅನ್ನು ಕೇವಲ 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಇದು 11,499 ರೂ.ಗಳ ಪ್ರಾರಂಭಿಕ ಬೆಲೆ ಹೊಂದಿದೆ. ಕಂಪನಿಯು ಮೊದಲ ಮಾರಾಟದ ಭಾಗವಾಗಿ 1,500 ರೂ.ಗಳ ಬ್ಯಾಂಕ್ ಆಫರ್ ನೀಡಲಿದೆ. ರಿಯಾಯಿತಿಯೊಂದಿಗೆ ಕೇವಲ 9,999 ರೂ.ಗೆ ಈ ಫೋನ್ ಖರೀದಿಸಬಹುದು. ಇಂದು (ಸೆ.18) ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಮತ್ತು ಇತರ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ.
ಈ ಸುದ್ದಿ ಓದಿದ್ದೀರಾ?: ಖುಷಿ ಸುದ್ದಿ: Lava Blaze Curve 5G ಬೆಲೆ ಕುಸಿತ: 2,500 ಡಿಸ್ಕೌಂಟ್.. ಜೊತೆಗೆ ಆಫರ್ ಕೂಡ ಸಿಗುತ್ತೆ
ಲಾವಾ ಬ್ಲೇಜ್ 3 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ನೂತನ ಲಾವಾ 5G ಫೋನಿನಲ್ಲಿ 6.56 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಇದೆ. ಡಿಸ್ಪ್ಲೇಯು 90Hz ರಿಫ್ರೆಶ್ ದರದೊಂದಿಗೆ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು ಇದು ಪಂಚ್ ಹೋಲ್ ಕಟೌಟ್ ವಿನ್ಯಾಸ ಒಳಗೊಂಡಿದೆ.
ಪ್ರೊಸೆಸರ್: ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಅನ್ನು ಹೊಂದಿದೆ. ಇದು ಕ್ಲೀನ್ ಸಾಫ್ಟ್‌ವೇರ್ ಅನುಭವದೊಂದಿಗೆಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6GB RAM ಮತ್ತು 128GB UFS 2.2 ಇಂಟರ್ನಲ್ ಸ್ಟೋರೇಜ್ ಹೊಂದಿದೆ. ವರ್ಚುವಲ್ ತಂತ್ರಜ್ಞಾನದ ಸಹಾಯದಿಂದ ಫೋನ್ 6GB ಬೆಂಬಲವನ್ನು ಸಹ ಹೊಂದಿದೆ. ಇದರ ಸಹಾಯದಿಂದ ನೀವು 12GB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ: ಕಂಪನಿಯು ಈ ಫೋನನ್ನು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ಹಿಂಭಾಗದ ಪ್ಯಾನೆಲ್‌ನಲ್ಲಿ ವೈಬ್ ಎಲ್‌ಇಡಿ ಲೈಟ್ ಇದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಫೋನ್ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಪಡೆದಿದೆ.
ಬ್ಯಾಟರಿ: ಕಂಪನಿಯು ಲಾವಾ ಬ್ಲೇಜ್ 3 5G ಫೋನಿನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. ಇದನ್ನು ತ್ವರಿತವಾಗಿ ಚಾರ್ಜ್ ಮಾಡಲು, 18 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿದೆ. ಈ ಮೊಬೈಲ್ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.


Click it and Unblock the Notifications








