ಸದ್ದಿಲ್ಲದೆ Lava Blaze 3 5G ಲಾಂಚ್: 50MP ಕ್ಯಾಮೆರಾ, 5000mAh ಬ್ಯಾಟರಿ.. ಅಗ್ಗದ ಬೆಲೆ!
Lava Blaze 3 5G Launched: ಲಾವಾ ತನ್ನ ಭಾರತೀಯ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ. ಸದ್ದಲ್ಲದೆ ಹೊಸ 5G ಫೋನನ್ನು ಪರಿಚಯಿಸಿದೆ. ಹೌದು, ಕಂಪನಿಯು ತನ್ನ ಬ್ಲೇಜ್ ಸರಣಿಯ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಲಾವಾ ಬ್ಲೇಜ್ 3 5G (Lava Blaze 3 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಮಾರಾಟವಾಗಲಿದೆ. ಬನ್ನಿ, ಈ ಹೊಸ ಫೊನಿನ ಬೆಲೆ, ಕೊಡುಗೆಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ನೂತನ ಲಾವಾ ಬ್ಲೇಜ್ 3 5G ಮೊಬೈಲ್ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಪ್ರೀಮಿಯಂ ಗ್ಲಾಸ್ ವಿನ್ಯಾಸ ಹೊಂದಿದೆ. ಈ ಫೋನ್ 6.56 ಇಂಚಿನ ಹೆಚ್‌ಡಿ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಹೊಂದಿದೆ. 6GB RAM ಮತ್ತು 128GB ಸ್ಟೋರೇಜ್, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಈ ಫೋನ್ 5,000mAh ಬ್ಯಾಟರಿ, 18 ವ್ಯಾಟ್ ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಲಾವಾ ಬ್ಲೇಜ್ 3 5G ಫೋನಿನ ಬೆಲೆ
ಲಾವಾ ಬ್ಲೇಜ್ 3 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಕೇವಲ 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 11,499 ರೂ. ಇದೆ. ಕಂಪನಿಯು ಲಾಂಚ್ ಭಾಗವಾಗಿ 1,500 ರೂ.ಗಳ ಬ್ಯಾಂಕ್ ಆಫರ್ ಘೋಷಿಸಿದೆ. ರಿಯಾಯಿತಿಯೊಂದಿಗೆ ನೀವು ಕೇವಲ 9,999 ರೂ.ಗೆ ಈ ಫೋನ್ ಖರೀದಿಸಬಹುದು. ಇದೇ ಸೆಪ್ಟೆಂಬರ್ 18 ರಿಂದ ಅಮೆಜಾನ್ ಮತ್ತು ಇತರ ಚಿಲ್ಲರೆ ಅಂಗಡಿಗಳ ಮೂಲಕ ಈ ಮೊಬೈಲ್ ಮಾರಾಟವಾಗಲಿದೆ.
ಲಾವಾ ಬ್ಲೇಜ್ 3 5G ವಿನ್ಯಾಸ ಹೇಗಿದೆ?
ಲಾವಾ ಬ್ಲೇಜ್ 3 5G ಫೋನ್ ಪ್ರೀಮಿಯಂ ಗಾಜಿನ ವಿನ್ಯಾಸವನ್ನು ಹೊಂದಿದೆ. ಫೋನಿನ ಹಿಂಭಾಗದ ಫಲಕದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಕಾಣಬಹುದು. ಇದರಲ್ಲಿ ಹೊಸ ವೈಬ್ ಎಲ್ ಇಡಿ ಲೈಟ್ ಅಳವಡಿಸಲಾಗಿದೆ. ಈ ಮೊಬೈಲ್ ಕಡಿಮೆ ಬಜೆಟ್‌ನಲ್ಲಿ ಆಕರ್ಷಕವಾಗಿ ಕಾಣುತ್ತದೆ. ಮುಂಭಾಗದ ಫಲಕದಲ್ಲಿ ಪಂಚ್ ಹೋಲ್ ನಾಚ್ ಮತ್ತು ಫ್ಲಾಟ್ ಸ್ಕ್ರೀನ್ ಬರುತ್ತದೆ. ಈ ಫೋನ್ ಗ್ಲಾಸ್ ಗೋಲ್ಡ್ ಮತ್ತು ಗ್ಲಾಸ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.
ಈ ಸುದ್ದಿ ಓದಿದ್ದೀರಾ?: Samsung: ಬಂತು ಹೊಸ 5G ಫೋನ್: ಕೇವಲ 7,999 ರೂ.! 5000mAh ಬ್ಯಾಟರಿ, 50MP ಕ್ಯಾಮೆರಾ ಇದೆ
ಲಾವಾ ಬ್ಲೇಜ್ 3 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಲಾವಾ ಬ್ಲೇಜ್ 3 5G ಸ್ಮಾರ್ಟ್‌ಫೋನ್ 6.56 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಕಟೌಟ್ ವಿನ್ಯಾಸ ಮತ್ತು 90Hz ರಿಫ್ರೆಶ್ ದರದೊಂದಿಗೆ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿದೆ.
ಪ್ರೊಸೆಸರ್: ನೂತನ ಲಾವಾ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಅನ್ನು ಹೊಂದಿದೆ. Antutu ಸೈಟ್‌ನಲ್ಲಿ ಈ ಫೋನ್ 410K ಗಿಂತ ಹೆಚ್ಚಿನ ಸ್ಕೋರ್ ಪಡೆದಿದೆ ಎಂದು ಕಂಪನಿ ಹೇಳಿದೆ. ಈ ಸ್ಮಾರ್ಟ್‌ಫೋನ್ ಕ್ಲೀನ್ ಸಾಫ್ಟ್‌ವೇರ್ ಅನುಭವದೊಂದಿಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್: ಲಾವಾ ಬ್ಲೇಜ್ 3 5G ಫೋನ್ 6GB RAM ಮತ್ತು 128GB UFS 2.2 ಇಂಟರ್ನಲ್ ಸ್ಟೋರೇಜ್ ಹೊಂದಿದೆ. ವರ್ಚುವಲ್ ತಂತ್ರಜ್ಞಾನದ ಸಹಾಯದಿಂದ ಫೋನ್ 6GB ಬೆಂಬಲವನ್ನು ಸಹ ಹೊಂದಿದೆ. ಇದರ ಸಹಾಯದಿಂದ ನೀವು 12GB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ: ಲಾವಾ ಬ್ಲೇಜ್ 3 5G ಹಿಂಭಾಗದ ಪ್ಯಾನೆಲ್‌ನಲ್ಲಿ ವೈಬ್ ಎಲ್‌ಇಡಿ ಲೈಟ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯಮತ್ತು 2 ಮೆಗಾಪಿಕ್ಸೆಲ್ ಎಐ (AI) ಕ್ಯಾಮೆರಾವನ್ನು ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಲಾವಾ ಬ್ಲೇಜ್ 3 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 18 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ.
ಇತರೆ ವೈಶಿಷ್ಟ್ಯಗಳು: ಈ ಮೊಬೈಲ್ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಉತ್ತಮ ಆಡಿಯೋ ಅನುಭವಕ್ಕಾಗಿ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇದು ಡ್ಯುಯಲ್ ಸಿಮ್ 5G, 4G, ವೈಫೈ, ಬ್ಲೂಟೂತ್ ನಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








