ಲಾವಾದಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ
ಲಾವಾ ಕಂಪೆನಿ ಸದ್ಯದಲ್ಲೇ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಲಾವಾ ಐರಿಸ್ 402+ ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದ್ದು ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ಪ್ರಕಟಿಸಿದ್ದು,5499 ಬೆಲೆಯನ್ನು ನಿಗದಿ ಪಡಿಸಿದೆ.
62.5x116.9x11.4 ಮಿ.ಮೀ ಗಾತ್ರ,124 ಗ್ರಾಂ ತೂಕದ ಸ್ಮಾರ್ಟ್‌ಫೋನಲ್ಲಿ, ಪ್ರಾಕ್ಸಿಮಿಟಿ ಸೆನ್ಸರ್,ಜಿ ಸೆನ್ಸರ್,ಲೈಟ್ ಸೆನ್ಸರ್,ಎಕ್ಸಲರೋಮೋಟರ್ ಸೆನ್ಸರ್‌ಗಳಿವೆ.1.2 GHz ಡ್ಯುಯಲ್ ಕೋರ್ ಪ್ರೊಸೆಸರ್,512 ಎಂಬಿ ರ್‍ಯಾಮ್,4 GB ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.
ಸ್ಮಾರ್ಟ್‌ಪೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ WVGAಕೆಪಾಸಿಟಿವ್ ಟಚ್‌ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
512 ಎಂಬಿ ರ್‍ಯಾಮ್
4 GB ಆಂತರಿಕ ಮೆಮೊರಿ
3ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ಇದನ್ನೂ ಓದಿ: ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು


Click it and Unblock the Notifications




