ಲಾವಾ ಎ800 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By: Vijeth

ಲಾವಾ ಎ800 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ
ಭಾರತೀಯ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾದ ಲಾವಾ ಮೊಬೈಲ್ಸ್‌ ಇತ್ತೀಚೆಗೆ ತಾನೆ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಅಯರಿಸ್‌ ಸರಣಿಯಲ್ಲಿನ ಎನ್‌320, ಎನ್‌350 ಹಾಗೂ ಎನ್‌400 ಸ್ಮಾರ್ಟ್‌ಫೋನ್‌ಗಳೊಂದಿಗೆ ಕೆಲದಿನಗಳ ಹಿಂದೆಯಷ್ಟೇ Xolo ಎ700 ಸ್ಮಾರ್ಟ್‌ಫೋನ್‌ ಕೂಡಾ ಬಿಡುಗಡೆ ಮಾಡಿತ್ತು, ಅಂದಹಾಗೆ ಒಂದರ ನಂತರ ಒಂದರಂತೆ ನೂತನ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಲಾವಾ ಮೊಬೈಲ್ಸ್‌ ಇದೀಗ ಇಂಟೆಲ್‌ ಆಂಟೋಮ್‌ ಪ್ರೊಸೆಸರ್‌ ಹೊಂದಿರುವಂತಹ ನೂತನ ಆಂಡ್ರಾಯ್ಡ್‌ ಚಾಲಿತ ಲಾವಾ Xolo ಎ800 ಸ್ಮಾರ್ಟ್‌ಫೋನ್‌ ಅನ್ನು ರೂ. 11,999 ದರದಲ್ಲಿ ಬಿಡುಗಡೆ ಮಾಡಿದೆ.

ಆದರೆ ಕೆಲ ದಿನಗಳ ಹಿಂದೆ ಬಿಡುಗಡೆಯಾದ Xolo ಎ700 ಸ್ಮಾರ್ಟ್‌ಫೋನ್‌ ಹಾಗೂ ಇದೀಗ ಬಿಡುಗಡೆಯಾದ Xolo ಎ800 ಸ್ಮಾರ್ಟ್‌ಫೋನ್‌ ನಡುವೆ ಏನು ವೆತ್ಯಾಸ ಎಂದು ಆಲೋಚಿಸುತ್ತಿದ್ದೀರಾ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಈ ಎರಡೂ ನೂತನ ಲಾವಾ ಸ್ಮಾರ್ಟ್‌ಫೋಈನ್‌ಗಳ ನಡುವಿನ ಹೋಲಿಕೆಯನ್ನು ತಂದಿದೆ ಒಮ್ಮೆ ಓದಿ ನೋಡಿ. ನಂತರ ಯಾವ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದು ನೀವೇ ನಿರ್ಧರಿಸಿ ಆಯ್ಕೆ ಮಾಡಿಕೊಳ್ಳಿ.

ಸುತ್ತಳತೆ ಹಾಗೂ ತೂಕ: ಲಾವಾ ಎ800 ಸ್ಮಾರ್ಟ್‌ಫೋನ್‌ 133 x 67 x 10.5 mm ಸುತ್ತಳತೆಯೊಂದಿಗೆ 115 ಗ್ರಾಂ ತೂಕವಿದ್ದರೆ, ಲಾವಾ ಎ700 ಸ್ಮಾರ್ಟ್‌ಫೋನ್‌ 136 x 68.5 x 9.1 mm ಸುತ್ತಳತೆಯೊಂದಿಗೆ 115 ಗ್ರಾಂ ತೂಕವಿದ್ದು ಈ ವಿಚಾರದಲ್ಲಿ ಎರಡರ ನಡುವೆ ಅಷ್ಟೇನು ಅಂತರವಿಲ್ಲ.

ದರ್ಶಕ: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 4.5 ಇಂಚಿನ IPS HD ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ದರ್ಶಕ ನೀಡಲಾಗಿದ್ದು 960 x 540 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿವೆ.

ಪ್ರೊಸೆಸರ್‌: ಈ ವಿಚಾರದಲ್ಲಿಯೂ ಕೂಡಾ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಡ್ಯುಯೆಲ್‌ ಕೋರ್‌ 1GHz ಮೀಡಿಯಾ ಟೆಕ್‌ ಪ್ರೊಸೆಸರ್‌ ನೀಡಲಾಗಿದ್ದು ಉಳಿದೆಲ್ಲಾ ಪ್ರೊಸೆಸರ್‌ಗಳಿಗಿಂತಲೂ ಉತ್ತಮ ಬ್ರೌಸಿಂಗ್‌ ವೇಗ ಇದರದ್ದಾಗಿದೆ.

ಆಪರೇಟಿಂಗ್‌ ಸಿಸ್ಟಂ: ಈ ಸಾಲಿನ ಮಾರುಕಟ್ಟೆಯಲ್ಲಿನ ಉಳಿದೆಲ್ಲಾ ಸ್ಮಾರ್ಟ್‌ಫೋನ್‌ಗಳಂತೆಯೇ ಲಾವಾ ಎ700 ಹಾಗೂ ಲಾವಾ ಎ800 ಸ್ಮಾರ್ಟ್‌ನಲ್ಲಿಯೂ ಕೂಡಾ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ಕ್ಯಾಮೆರಾ ವಿಚಾರದಲ್ಲಿ, ಲಾವಾ ಎ800 ಸ್ಮಾರ್ಟ್‌ಫೋನ್‌ ಆಟೋ-ಫೋಕಸ್‌ ಹಾಗೂ ಎಲ್‌ಇಡಿ ಫ್ಲಾಷ್‌ ನೊಂದಿಗೆ ಹಿಂಬದಿಯ 8 MP ಕ್ಯಾಮೆರಾ ಹಾಗೂ ವಿಡಿಯೋ ಕಾಲಿಂಗ್‌ಗಾಗಿಮುಂಬದಿಯ 0.3 MP ಕ್ಯಾಮೆರಾ ಹೊಂದಿದೆ. ಮತ್ತೊಂದೆಡೆ ಲಾವಾ ಎ700 ಸ್ಮಾರ್ಟ್‌ಫೋನ್‌ನಲ್ಲಿಯೂ ಕೂಡಾ ಎಲ್‌ಇಡಿ ಫ್ಲಾಷ್‌ ಹಾಗೂ ಆಟೋ ಫೋಕಸ್‌ ಹೊಂದಿರುವ ಹಿಂಬದಿಯ 5MP ದೊಂದಿಗೆ ವಿಡಿಯೋ ಕರೆಗಾಗಿ ಮುಂಬದಿಯ 0.3MP ಕ್ಯಾಮೆರಾ ನೀಡಲಾಗಿದೆ.

ಸ್ಟೋರೇಜ್‌: ಎರಡೂ ಹ್ಯಾಂಡ್‌ಸೆಟ್‌ಗಳಲ್ಲಿ 4GB ಆಂತರಿಕ ಸ್ಟೋರೇಜ್‌, 512MB RAM ಹಾಗೂ ಮೈಕ್ರೋ ಯುಎಸ್‌ಬಿ ಕಾರ್ಡ್‌ ಸ್ಲಾಟ್‌ ನೀಡಲಾಗಿದ್ದು 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ: 3ಜಿ, ಬ್ಲೂಟೂತ್‌, ಜಿಪಿಎಸ್‌ ಹಾಗೂ ಎಜಿಪಿಎಸ್‌, ಯುಎಸ್‌ಬಿ 2.0 ಸೇರಿದಂತೆ ವೈ-ಫೈ ಫೀಚರ್ಸ್‌ಗಳನ್ನು ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗಿದೆ.

ಬ್ಯಾಟರಿ: ಲಾವಾ ಎ800 ಸ್ಮಾರ್ಟ್‌ಫೋನ್‌ 1,600 mAh ಬ್ಯಾಟರಿ ನೀಡಲಾಗಿದ್ದು 2 ಗಂಟೆಗಳ ಟಾಕ್‌ಟೈಮ್ ನೀಡುತ್ತದೆ ಹಾಗೂ ಲಾವಾ ಎ700 ಸ್ಮಾರ್ಟ್‌ಫೋನ್‌ನಲ್ಲಿ ಕೊಂಚ ಹೆಚ್ಚಿನ ಸಾಮರ್ತ್ಯದ ಅಂದರೆ 1,700 mAh ಬ್ಯಾಟರಿ ನೀಡಲಾಗಿದ್ದು ಗಂಟೆಗಳ ಟಾಕ್‌ಟೈಮ್‌ ನೀಡಬಲ್ಲದ್ದಾಗಿದೆ.

ಬೆಲೆ: ಖರೀದಿಸುವುದಾದರೆ ಲಾವಾ ಎ800 ಸ್ಮಾರ್ಟ್‌ಫೋನ್‌ ರೂ. 11,999 ದರದಲ್ಲಿ ಲಭ್ಯವಿದ್ದರೆ, ಲಾವಾ ಎ700 ಸ್ಮಾರ್ಟ್‌ಫೋನ್‌ ರೂ. 9,999 ದರದಲ್ಲಿ ಲಭ್ಯವಿದೆ.

ಒಟ್ಟಾರೆ

ಅಂದಹಾಗೆ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಅಷ್ಟೇನು ವೆತ್ಯಾಸಗಳಿಲ್ಲ ಆದ್ದರಿಂದ ಕೊಂಚ ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ ಬೇಕೆಂದಲ್ಲಿ ಮಾತ್ರವಷ್ಟೇ ಲಾವಾ ಎ800 ಖರೀದಿಸಿ ಇಲ್ಲವಾದಲ್ಲಿ ಲಾವಾ ಎ700 ಸ್ಮಾರ್ಟ್‌ಫೋನ್‌ ನಿಮ್ಮ ಬಜೆಟ್‌ಗೆ ಉತ್ತಮ ಆಯ್ಕೆಯಾಗಬಲ್ಲದು.

Read In English...

ಕಡಿಮೆ ಬೆಲೆಯ ಟಾಪ್‌ 10 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು

ದರ ಇಳಿಕೆ ಕಾಣಲಿರುವ ಗ್ಯಾಲಾಕ್ಸಿ ಸ್ಮಾರ್ಟ್‌ಫೋನ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot