ಸ್ವದೇಶಿ ಬ್ರ್ಯಾಂಡ್‌ನ ಈ ಫೋನಿಗೆ ಈಗ ಸಖತ್ ಡಿಸ್ಕೌಂಟ್!..ಕಡಿಮೆ ಬೆಲೆಗೆ ಲಭ್ಯ!
ಲಾವಾ ಮೊಬೈಲ್ ಸಂಸ್ಥೆಯ ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ ಅಗ್ಗದ ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್ ಇದೀಗ ಜನಪ್ರಿಯ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಆಕರ್ಷಕ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದ್ದು, ಅಗ್ಗದ ಬೆಲೆಯ ಮೊಬೈಲ್ ವಿಭಾಗದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ಫೋನಿನ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸಲ್ ಆಗಿದೆ.
ಹೌದು, ಲಾವಾ ಕಂಪೆನಿಯ ಲಾವಾ ಯುವ 2 ಪ್ರೊ ಫೋನ್ ಅಮೆಜಾನ್‌ನಲ್ಲಿ 20% ರಷ್ಟು ರಿಯಾಯಿತಿ ಪಡೆದಿದೆ. 4GB RAM + 64GB ವೇರಿಯಂಟ್ ಫೋನ್ 9,999 ರೂ. ದರ ಹೊಂದಿದ್ದು, ಆದ್ರೆ, ಆಫರ್‌ನಲ್ಲಿ ಗ್ರಾಹಕರು 7,999 ರೂ. ಗಳಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್ ಸಹ ದೊರೆಯುತ್ತದೆ.

ಅಂದಹಾಗೆ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G37 SoC ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ರಚನೆ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಗ್ಲಾಸ್ ವೈಟ್, ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಲ್ಯಾವೆಂಡರ್ ಕಲರ್ ಆಯ್ಕೆ ಹೊಂದಿದೆ. ಇನ್ನುಳಿದಂತೆ ಲಾವಾ ಯುವ 2 ಪ್ರೊ ಫೋನಿನ ಇತರೆ ಫೀಚರ್ಸ್ ಮುಂದೆ ತಿಳಿಯೋಣ ಬನ್ನಿರಿ.
ಲಾವಾ ಯುವ 2 ಪ್ರೊ ಡಿಸ್‌ಪ್ಲೇ ವಿನ್ಯಾಸ ಏನಿದೆ : ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 269 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, 60Hz ರಿಫ್ರೆಶ್ ರೇಟ್ ಅನ್ನು ನೀಡಲಿದೆ. ಇನ್ನು ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯ ವಿನ್ಯಾಸವನ್ನು ಹೊಂದಿದೆ.
ಲಾವಾ ಯುವ 2 ಪ್ರೊ ಪ್ರೊಸೆಸರ್ ಯಾವುದು : ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G37 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4 GB RAM ಮತ್ತು 64 GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ 3 GB ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ.
ಲಾವಾ ಯುವ 2 ಪ್ರೊ ಕ್ಯಾಮೆರಾ ಸೆಟ್‌ಅಪ್ ಏನಿದೆ : ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಬ್ಯೂಟಿ, HDR, ನೈಟ್‌ಮೋಡ್, ಫೋರ್ಟ್ರೆಟ್ ಮೋಡ್, AI, ಪ್ರೊ, ಪನೋರಮಾ, ಸ್ಲೋ ಮೋಷನ್, ಫಿಲ್ಟರ್‌ಗಳು, GIF, ಟೈಮ್‌ಲ್ಯಾಪ್ಸ್ ನಂತಹ ಫೀಚರ್ಸ್ ಗಳನ್ನು ಒಳಗೊಂಡಿದೆ.
ಲಾವಾ ಯುವ 2 ಪ್ರೊ ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ : ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB-C ಪೋರ್ಟ್ ಮೂಲಕ 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, 4G VoLTE, Wi-Fi 802.11ac, ಬ್ಲೂಟೂತ್ 5.1, GPS, ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.
ಲಾವಾ ಯುವ 2 ಪ್ರೊ ಕಲರ್ ಹಾಗೂ ಮೆಮೊರಿ ಆಯ್ಕೆ : ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ 4 GB RAM ಮತ್ತು 64 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಭಾರತದಲ್ಲಿ ಈ ಫೋನ್ 7,999ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಗ್ಲಾಸ್ ವೈಟ್, ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಲ್ಯಾವೆಂಡರ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








