ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ 'ಲಾವಾ'ದ ಹೊಸ 'Z40' ಆಂಡ್ರಾಯ್ಡ್ ಫೋನ್.!!
ಲಾವಾ ಮೊಬೈಲ್ ಕಂಪನಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮೊಬೈಲ್‌ಗಳನ್ನು ಪರಿಚಯಿಸಿ ಭಾರತೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಕಂಪನಿ ಇದೀಗ ಮತ್ತೊಂದು ಅಗ್ಗದ ದರದ ರೆಡಿ ಗೋ ಎಡಿಷನ್ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಿದೆ. ಕಂಪನಿಯು ಈ ಮೂಲಕ ಕಂಪನಿಯು ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಹೌದು, ಲಾವಾ 'Z40' ಹೆಸರಿನ ರೆಡಿ ಗೋ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದ್ದು, 3,499ರೂ.ಗಳ ಕಡಿಮೆ ಬೆಲೆಯ ಪ್ರೈಸ್ ಟ್ಯಾಗ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಈ ಸ್ಮಾರ್ಟ್‌ಫೋನ್, '4 ಇಂಚಿನ' ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. 1 GB ಸಾಮರ್ಥ್ಯದ RAM ನೊಂದಿಗೆ, 8 GB ಆಂಗರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ.

ಹೊಸ ಲಾವಾ Z40' ರೆಡಿ ಗೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅತ್ಯುತ್ತಮ ಸೌಂಡ್ ಒದಗಿಸಲು K7 ಎಕ್ಸ್‌ಟ್ರನಲ್ ಆಡಿಯೋ ಸ್ಪೀಕರ್ಸ್ ನೀಡಲಾಗಿದೆ. ಹಾಗಾದರೇ ಲಾವಾ Z40' ಸ್ಮಾರ್ಟ್‌ಫೋನ್ ಹೊಂದಿರುವ ಇತರೆ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ
ಲಾವದ ಈ ಸ್ಮಾರ್ಟ್‌ಫೋನ್, 400x800 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥದಲ್ಲಿ 4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಅನುಪಾತವು 223 ಆಗಿದೆ. ಸ್ಕ್ರೀನ್ ರಕ್ಷಣೆಗಾಗಿ 2.5D ಕರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ನೀಡಲಾಗಿದೆ.

ಪ್ರೊಸೆಸರ್
ಲಾವಾ Z40 ಸ್ಮಾರ್ಟ್‌ಫೋನ್, 1.4 ಗಿಗಾಹರ್ಡ್ಸ್ ಕ್ವಾಡ್‌ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 1 GB ಸಾಮರ್ಥ್ಯದ RAM ನೊಂದಿಗೆ, 8GB ಆಂಗರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ತನ್ನ ವರ್ಗದಲ್ಲಿಯೇ ಉತ್ತಮ ಕಾರ್ಯದಕ್ಷತೆ ಒದಗಿಸಬಲ್ಲ ಶಕ್ತಿಯನ್ನು ಹೊಂದಿದೆ.

ಕ್ಯಾಮೆರಾ
ಹಿಂಬದಿಯಲ್ಲಿ 2 ಮೆಗಾಪಿಕ್ಸಲ್ ಸಾಮರ್ಥ್ಯ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ತೆಗೆಯಲು ಸಹ 2 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ. ಎರಡು ಕ್ಯಾಮೆರಾಗಳಿಗೆ ಫ್ಲ್ಯಾಶ್ ಲೈಟ್ ನೀಡಲಾಗಿದೆ. ಇದರೊಂದಿಗೆ ಹೆಚ್‌ಡಿ ವಿಡಿಯೋ ರೆಕಾರ್ಡಿಂಗ ಮಾಡಬಹುದಾಗಿದೆ.

ಬ್ಯಾಟರಿ
2250 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಲಾವಾ Z40 ಸ್ಮಾರ್ಟ್‌ಫೋನ್ 239 ಗಂಟೆಗಳ ಬಾಳಿಕೆ ಶಕ್ತಿ ಹೊಂದಿದೆ. ಗ್ಲಾಸಿ ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.


Click it and Unblock the Notifications








