Subscribe to Gizbot

ಲೀ 2 ಮತ್ತು ಲೀ ಮ್ಯಾಕ್ಸ್2 ಮೆಟಲ್ ಬಾಡಿ ವಿಶೇಷತೆ ಏನು?

Written By:

ಸ್ಮಾರ್ಟ್‌ಫೋನ್ ವಿನ್ಯಾಸ ವಿಷಯದಲ್ಲಿ, ಲೀಕೊ ಭಾರತೀಯ ಬಳಕೆದಾರರನ್ನು ಮೆಚ್ಚಿಸಿದೆ. ಕಂಪೆನಿಯು ಸೂಪರ್ ಫೋನ್‌ಗಳಾದ ಲೀ 2 ಮತ್ತು ಲೀ ಮ್ಯಾಕ್ಸ್ 2 ವನ್ನು ಲಾಂಚ್ ಮಾಡಿದ್ದು ಇವೆರಡೂ ಒಂದೇ ಸಂಪ್ರದಾಯವನ್ನು ಅನುಸರಿಸುತ್ತಿದೆ. ಲೀ 2 ಪಾಕೆಟ್ ಗಾತ್ರದ ಸೂಪರ್ ಫೋನ್ ಆಗಿದ್ದು ಮೆಟಲ್ ಯೂನಿಬಾಡಿ ವಿನ್ಯಾಸವನ್ನು ಪಡೆದುಕೊಂಡಿದೆ, ಇದೇ ಬೆಲೆಯಲ್ಲಿ ಬರುವ ಇತರ ಫೋನ್‌ಗಳು ಪ್ಲಾಸ್ಟಿಕ್ ಅಥವಾ ಪೋಲಿಕಾರ್ಬೊನೇಟ್ ವಿನ್ಯಾಸವನ್ನು ಪಡೆದುಕೊಂಡಿದೆ. ಫೋನ್ ಇನ್ ಸೆಲ್ ಡಿಸ್‌ಪ್ಲೇ ಸ್ಕ್ರೀನ್ ಅನ್ನು ಹೊಂದಿದ್ದು, ಹೆಚ್ಚಿನ ಬೆಲೆಯ ಫೋನ್‌ಗಳಲ್ಲಿ ಮಾತ್ರವೇ ಈ ವಿಶೇಷತೆಯನ್ನು ನಿಮಗೆ ಕಾಣಬಹುದಾಗಿದೆ.

ಓದಿರಿ: ಜುಲೈ 12 ಕ್ಕೆ ಲೀ 2 ನ ಮೂರನೇ ಫ್ಲ್ಯಾಶ್‌ಸೇಲ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತೆಳು ಮತ್ತು ಹಗುರ

ತೆಳು ಮತ್ತು ಹಗುರ

ಇನ್ ಸೆಲ್ ಸ್ಕ್ರೀನ್ ಡಿವೈಸ್‌ಗಳನ್ನು ತೆಳು ಮತ್ತು ಹಗುರವಾಗಿಸಿರುತ್ತದೆ. ಇದಕ್ಕೆ ಪ್ರತಿಯಾಗಿ ಐಫೋನ್ 6ಎಸ್ ಪ್ಲಸ್‌ಗಿಂತ ಲೀ 2, 39 ಗ್ರಾಮ್‌ಗಳಷ್ಟು ಹಗುರವಾಗಿದೆ.

ವಿಶ್ವದಲ್ಲೇ ಹೆಚ್ಚು ಶಕ್ತಿಯುತ ಕ್ವಾಲ್‌ಕಾಮ್

ವಿಶ್ವದಲ್ಲೇ ಹೆಚ್ಚು ಶಕ್ತಿಯುತ ಕ್ವಾಲ್‌ಕಾಮ್

ಲೀ ಮ್ಯಾಕ್ಸ್ 2 ಫ್ಲ್ಯಾಗ್‌ಶಿಪ್ ಸೂಪರ್ ಫೋನ್ ಎಂದೆನಿಸಿದ್ದು ವಿಶ್ವದಲ್ಲೇ ಹೆಚ್ಚು ಶಕ್ತಿಯುತ ಕ್ವಾಲ್‌ಕಾಮ್ ® SnapdragonTM 820 ಅನ್ನು ಹೊಂದಿದೆ. ಲೀ ಮ್ಯಾಕ್ಸ್ 2 ಪೂರ್ಣ ಮೆಟಲ್ ಯೂನಿಬಾಡಿಯನ್ನು ಪಡೆದುಕೊಂಡಿದ್ದು ಉತ್ತಮ ಪ್ರೊಸೆಸರ್ ಅನ್ನು ಉತ್ಪಾದಿಸುತ್ತಿದೆ.

ಮೆಟಲ್ ಯೂನಿಬಾಡಿ ವಿನ್ಯಾಸ

ಮೆಟಲ್ ಯೂನಿಬಾಡಿ ವಿನ್ಯಾಸ

ಲೀ 2 ಮತ್ತು ಲೀ ಮ್ಯಾಕ್ಸ್2 ನ ಮೆಟಲ್ ಯೂನಿಬಾಡಿ ವಿನ್ಯಾಸ ಪ್ರೀಮಿಯಮ್ ನೋಟವನ್ನು ಫೋನ್‌ಗಳಿಗೆ ಒದಗಿಸಿವೆ. ಲೀ 2 ಮತ್ತು ಲೀ ಮ್ಯಾಕ್ಸ್2 ಮಿನಿಮಾಲಿಸ್ಟಿಕ್ ವಿನ್ಯಾಸವನ್ನು ಹೊಂದಿದ್ದು ಹೆಚ್ಚುವರಿ ವಿನ್ಯಾಸವನ್ನು ಡಿವೈಸ್‌ಗಳಿಗೆ ನೀಡಿ ಅವನ್ನು ಸುಂದರಗೊಳಿಸಿವೆ.

ರೋಸ್ ಗೋಲ್ಡ್ ಕಲರ್

ರೋಸ್ ಗೋಲ್ಡ್ ಕಲರ್

ಈ ಎರಡೂ ಫೋನ್‌ಗಳು ಸ್ಟೈಲಿಶ್ ಆದ ರೋಸ್ ಗೋಲ್ಡ್ ಕಲರ್ ಆಯ್ಕೆಯಲ್ಲಿ ಲಭ್ಯವಿದ್ದು, ಇತರ ಬ್ರ್ಯಾಂಡ್‌ಗಳು ಒದಗಿಸುವ ಬಣ್ಣಕ್ಕಿಂತಲೂ ಇದು ಹೆಚ್ಚು ಅತ್ಯಾಕರ್ಷವಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಲೀ 2 ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ TM 652 ನೊಂದಿಗೆ ಬಂದಿದೆ. ಡಿವೈಸ್ 16 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು 8 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. ಲೀ ಮ್ಯಾಕ್ಸ್ 2 ಹೆಚ್ಚು ಕಾರ್ಯಕ್ಷಮತೆಯ 4ಜಿಬಿ RAM + 32 ಜಿಬಿ ಮೆಮೊರಿಯನ್ನು ಅಥವಾ 6ಜಿಬಿ RAM + 64 ಜಿಬಿ ಮೆಮೊರಿಯನ್ನು ಹೊಂದಿದೆ.

ಹೆಚ್ಚು ಫೋಕಸಿಂಗ್ ವಿಶೇಷತೆ

ಹೆಚ್ಚು ಫೋಕಸಿಂಗ್ ವಿಶೇಷತೆ

21 ಎಮ್‌ಪಿ ರಿಯರ್ ಕ್ಯಾಮೆರಾ ಹೆಚ್ಚು ಫೋಕಸಿಂಗ್ ವಿಶೇಷತೆಯೊಂದಿಗೆ ಬಂದಿದ್ದು ಪಿಡಿಎಫ್ ತಂತ್ರಜ್ಞಾನಕ್ಕೆ ಧನ್ಯವಾದವನ್ನು ಅರ್ಪಿಸಬೇಕಾಗಿದೆ. ಲೀ ಮ್ಯಾಕ್ಸ್ 2 ಕೂಡ 8 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The internet and technology conglomerate has recently launched the second generation Superphones - Le 2 and Le Max2 and both of them follow the same tradition.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot