Subscribe to Gizbot

ಜುಲೈ 12 ಕ್ಕೆ ಲೀ 2 ನ ಮೂರನೇ ಫ್ಲ್ಯಾಶ್‌ಸೇಲ್

Written By:

ಅತಿ ಕಡಿಮೆ ಸಮಯದಲ್ಲೇ ಲೀಕೊ ಭಾರತದಲ್ಲಿ ಹೆಸರು ಮಾಡಿದೆ. ಜನವರಿ 2016 ರಂದು ತಾಂತ್ರಿಕ ದೈತ್ಯ ಭಾರತಕ್ಕೆ ಕಾಲಿಟ್ಟಿದ್ದು ತನ್ನ ಲೀ 1 ಎಸ್ ಲಾಂಚ್‌ನೊಂದಿಗೆ ಮಧ್ಯಮ ಕ್ರಮಾಂಕಿತ ಉತ್ತಮ ಫೋನ್‌ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಓದಿರಿ: 2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್

ಲೀ 2 ಮತ್ತು ಲೀ ಮ್ಯಾಕ್ಸ್ ಡಿವೈಸ್‌ಗಳು ತಮ್ಮ ಶ್ರೇಣಿಗೆ ಅನುಸಾರವಾಗಿ ಅನೂಹ್ಯವಾಗಿದೆ. ಲೀ ಮ್ಯಾಕ್ಸ್ 2 ಫ್ಲ್ಯಾಗ್‌ಶಿಪ್ ಕಿಲ್ಲರ್ ಎಂದೆನಿಸಿದ್ದು, ಲೀ 2 ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬಲಿಷ್ಟ ಡಿವೈಸ್ ಎಂದೆನಿಸಿದೆ. ಎರಡೂ ಫೋನ್‌ಗಳು ಆರಂಭದಲ್ಲಿ ಪ್ರಥಮ ಫ್ಲ್ಯಾಶ್ ಸೇಲ್‌ನಲ್ಲೇ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದ್ದು 61,000 ಯೂನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇಂದಿನ ಲೇಖನದಲ್ಲಿ ಈ ಎರಡೂ ಡಿವೈಸ್‌ಗಳ ಕುರಿತು ಮತ್ತಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.

ಓದಿರಿ: ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಲೀ 1 ಎಸ್ ಬಜೆಟ್ ಫೋನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೀಕೊ ಲೀ 2

ಲೀಕೊ ಲೀ 2

ಲೀಕೊ ಲೀ 2 ಮೆಟಲ್ ಯೂನಿಬಾಡಿ ಡಿಸೈನ್ ಅನ್ನು ಪಡೆದುಕೊಂಡಿದ್ದು ಸೂಪರ್ ಪವರ್ ಫುಲ್ ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 652, ಹೆಚ್ಚು ವಿಸ್ತರಿತ 32 ಜಿಬಿ ಆಂತರಿಕ ಸಂಗ್ರಹಣೆ ಮತ್ತು 3 ಜಿಬಿ RAM ಅನ್ನು ಪಡೆದುಕೊಂಡಿದೆ.

ಹೆಚ್ಚು ವೇಗದ ಚಾರ್ಜಿಂಗ್

ಹೆಚ್ಚು ವೇಗದ ಚಾರ್ಜಿಂಗ್

ಲೀ 2, 5.5 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್ ಮತ್ತು ಇನ್‌ಸೆಲ್ ಡಿಸ್‌ಪ್ಲೇ ಸ್ಕ್ರೀನ್ ಅನ್ನು ಹೊಂದಿದೆ. ಲೀ 2 ಯುಎಸ್‌ಬಿ ಟೈಪ್ ಸಿನೊಂದಿಗೆ ಬಂದಿದ್ದು ಹೆಚ್ಚು ವೇಗದ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ.

ಶಕ್ತಿಶಾಲಿ ಪ್ರೊಸೆಸರ್

ಶಕ್ತಿಶಾಲಿ ಪ್ರೊಸೆಸರ್

ಲೀ ಮ್ಯಾಕ್ಸ್ 2 ಶಕ್ತಿಶಾಲಿ ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಇದರಲ್ಲಿದೆ. ಅಂತೆಯೇ 4ಜಿಬಿ RAM ಅನ್ನು ಡಿವೈಸ್ ಹೊಂದಿದೆ ಮತ್ತು 32 ಜಿಬಿ ಆನ್‌ಬೋರ್ಡ್ ಮೆಮೊರಿ ಇದರಲ್ಲಿದೆ.

ಸಿಡಿಎಲ್‌ಎ

ಸಿಡಿಎಲ್‌ಎ

ಈ ಎರಡೂ ಫೋನ್‌ಗಳು ಸಿಡಿಎಲ್‌ಎ (ಕಂಟಿನ್ಯುವಲ್ ಸ್ನ್ಯಾಪ್‌ಡ್ರ್ಯಾಗನ್ 820 (MSM8996) ಅನ್ನು ಒಳಗೊಂಡಿದ್ದು, 4 ಜಿಬಿ RAM ಮತ್ತು 32 ಜಿಬಿ ಆನ್‌ಬೋರ್ಡ್ ಮೆಮೊರಿಯನ್ನು ಪಡೆದುಕೊಂಡಿದೆ.

ಉತ್ತಮ ಮನರಂಜನೆ

ಉತ್ತಮ ಮನರಂಜನೆ

ಲೀಕೊ ಕೂಡ ಲೀ 2 ಮತ್ತು ಲೀ ಮ್ಯಾಕ್ಸ್2 ನೊಂದಿಗೆ ಉತ್ತಮ ಮನರಂಜನೆಯನ್ನು ಒದಗಿಸುತ್ತಿದ್ದು, 2000+ ಚಲನ ಚಿತ್ರಗಳನ್ನು ಇದರಲ್ಲಿ ವೀಕ್ಷಿಸಬಹುದಾಗಿದೆ. 1.9 ಮಿಲಿಯನ್ ಹಾಡುಗಳು, 3000 ಗಂಟೆಗಳ ಪ್ರದರ್ಶನಗಳು ಮತ್ತು ಬಳಕೆದಾರರ ಆಯ್ಕೆಗೆ ಅನುಗುಣವಾಗಿ 150 + ಲೈವ್ ಟಿವಿ ಚಾನಲ್‌ಗಳನ್ನು ಬಳಕೆದಾರರ ಆಯ್ಕೆಗೆ ಅನುಗುಣವಾಗಿ ಒದಗಿಸುತ್ತಿದೆ.

ಎರಡು ಫ್ಲ್ಯಾಶ್ ಸೇಲ್

ಎರಡು ಫ್ಲ್ಯಾಶ್ ಸೇಲ್

ಲೀ 2 ಮತ್ತು ಲಿ ಮ್ಯಾಕ್ಸ್‌ಗಾಗಿ ಲೀಕೊ ಯಶಸ್ವಿಯಾಗಿ ಎರಡು ಫ್ಲ್ಯಾಶ್ ಸೇಲ್ ಅನ್ನು ಆಯೋಜಿಸಿದ್ದು, ಲೀ ಮ್ಯಾಕ್ಸ್‌ಗಾಗಿ ಫ್ಲ್ಯಾಶ್ ಸೇಲ್ ಲಭ್ಯವಿಲ್ಲ. ನಿಮಗೆ ಯಾವಾಗ ಬೇಕೂ ಅಂದಿಗೆ ಈ ಡಿವೈಸ್ ಅನ್ನು ಖರೀದಿಸಬಹುದಾಗಿದೆ.

ಲೀಕೊ ನೀಡುತ್ತಿರುವ ಆಫರ್‌

ಲೀಕೊ ನೀಡುತ್ತಿರುವ ಆಫರ್‌

ಲೀಕೊ ನೀಡುತ್ತಿರುವ ಆಫರ್‌ಗಳನ್ನು ಈ ಕೆಳಗೆ ನೀವು ನೋಡಬಹುದಾಗಿದೆ
ರೂ 1990 ರ ಉಚಿತ ಸಿಡಿಎಲ್‌ಎ ಇಯರ್ ಫೋನ್ಸ್

  • * ಸಿಡಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಜುಲೈ 6 ರಿಂದ 8 ರವರೆಗೆ (ನೀವು ಫ್ಲಿಪ್‌ಕಾರ್ಟ್‌ನಿಂದ ಡಿವೈಸ್ ಖರೀದಿಸಿದಲ್ಲಿ) 10% ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳುತ್ತೀರಿ.
  • * ಲೀಕೊ ಒಂದು ವರ್ಷದ ಮೆಂಬರ್‌ಶಿಪ್ ರೂ 4,990
  • * ವೋಡಾಫೋನ್‌ನಿಂದ ಡಬ್ಬಲ್ ಡೇಟಾ ಆಫರ್
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In January 2016 with the launch of Le 1s and has recently launched the second generation Superphones in India - Le 2 and Le Max2.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot