Subscribe to Gizbot

9,999 ರೂ 'ಲೆನೊವೋ ಕೆ6 ಪವರ್' ಇಂದಿನಿಂದ ಖರೀದಿಗೆ: 4000mAh, 3GB RAM

Written By:

'ಲೆನೊವೋ ಕೆ6 ಪವರ್' ಚೀನಾ ಕಂಪನಿಯ ದೊಡ್ಡ ಬ್ಯಾಟರಿ ಸಾಮರ್ಥ್ಯದ ಲೇಟೆಸ್ಟ್‌ ಸ್ಮಾರ್ಟ್‌ಫೋನ್ ಆಗಿದ್ದು, ಭಾರತದಲ್ಲಿ ಇಂದಿನಿಂದ ಬೆಲೆ ರೂ.9,999 ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ. ಅಂದಹಾಗೆ ಈ ಲೇಟೆಸ್ಟ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಕಳೆದ ವಾರ ಅನಾವರಣಗೊಂಡಿತ್ತು.

9,999 ರೂ 'ಲೆನೊವೋ ಕೆ6 ಪವರ್' ಇಂದಿನಿಂದ ಖರೀದಿಗೆ: 4000mAh, 3GB RAM

ವಿಶೇಷ ಅಂದ್ರೆ 'ಲೆನೊವೋ ಕೆ6 ಪವರ್' ಲಾಂಚ್‌ ಡೇ ಆಫರ್‌ ಆಗಿ ಗ್ರಾಹಕರು ರೂ.8,000 ಕ್ಕೆ ಖರೀದಿಸುವ ಅವಕಾಶ ನೀಡಿದೆ. ಈ ಆಫರ್ ಹಳೆಯ ಸ್ಮಾರ್ಟ್‌ಫೋನ್‌ಗಳ ಎಕ್ಸ್‌ಚೇಂಜ್‌ ಡಿಸ್ಕೌಂಟ್ ಆಧಾರಿತವಾಗಿದೆ. ಲೆನೊವೋ ಕೆ6 ಪವರ್ ಮಾರಾಟದ ಆರಂಭದೊಂದಿಗೆ 100 ನೋಂದಾಯಿತ ಗ್ರಾಹಕರಲ್ಲಿ ಯಾರಾದರೂ 10,000 ಫ್ಲಿಪ್‌ಕಾರ್ಟ್ ಗಿಫ್ಟ್‌ ವೋಚರ್ ಅನ್ನು ಗೆಲ್ಲುವ ಅವಕಾಶ ನೀಡಿದೆ.

'ಲೆನೊವೊ ವೈಬ್ ಕೆ6 ಪವರ್' ನವೆಂಬರ್ 29 ಕ್ಕೆ ಲಾಂಚ್‌: 'ಶ್ಯೋಮಿ ರೆಡ್ಮಿ ನೋಟ್ 3' ಗತಿಯೇನು?

ಸ್ಮಾರ್ಟ್‌ಫೋನ್‌ ಲಾಂಚ್‌ ಆಫರ್‌ ಖರೀದಿಯೊಂದಿಗೆ ಮೊಟೊ ಪಲ್ಸ್‌2 ಹೆಡ್‌ಫೋನ್‌ಗಳನ್ನು ಹೊಂದಿದ್ದು, ರೂ.1,499 ಪಾವತಿಗೆ ಬದಲಾಗಿ ರೂ.499 ಗೆ ಖರೀದಿಸಬಹುದು. ಗ್ರಾಹಕರು ತಿಂಗಳಿಗೆ EMI ಪೇಮೆಂಟ್ ರೂ.485 ಆಪ್ಶನ್‌ ಆಯ್ಕೆ ಮಾಡಿ 'ಲೆನೊವೋ ಕೆ6 ಪವರ್' ಖರೀದಿಸಬಹುದು. 'ಲೆನೊವೋ ಕೆ6 ಪವರ್ ಸ್ಮಾರ್ಟ್‌ಫೋನ್‌ ಖರೀದಿಸಲು ವಿಶೇಷ ಫೀಚರ್‌ಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಫೀಚರ್

ಡಿಸ್‌ಪ್ಲೇ ಫೀಚರ್

'ಲೆನೊವೋ ಕೆ6 ಪವರ್' 5 ಇಂಚಿನ ಪೂರ್ಣ ಎಚ್‌ಡಿ (1080x1920 pixels) IPS ಡಿಸ್‌ಪ್ಲೇ ಹೊಂದಿದೆ. 1.4GHz ಆಕ್ಟಾ ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 430 SoC ಮತ್ತು ಅಡ್ರೆನೊ 505 ಜಿಪಿಯು ಪ್ರೊಸೆಸರ್ ಹೊಂದಿದೆ.

ಕ್ಯಾಮೆರಾ ಫೀಚರ್

ಕ್ಯಾಮೆರಾ ಫೀಚರ್

ಸ್ಮಾರ್ಟ್‌ಫೋನ್‌ 13MP ಹಿಂಭಾಗ ಕ್ಯಾಮೆರಾ ಜೊತೆಗೆ ಸೋನಿ IMX258 ಸೆನ್ಸಾರ್, ಪಿಡಿಎಎಫ್ ಮತ್ತು ಎಲ್‌ಇಡಿ ಫ್ಲ್ಯಾಶ್ ಹೊಂದಿದೆ. 8MP ಸೆಲ್ಫಿ ಕ್ಯಾಮೆರಾ ಜೊತೆಗೆ ಸೋನಿ IMX219 ಸೆನ್ಸಾರ್ ಮತ್ತು ವೈಡ್‌ ಆಂಗಲ್ ಲೆನ್ಸ್ ಫೀಚರ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಫ್ಟ್‌ವೇರ್‌ ಫೀಚರ್

ಸಾಫ್ಟ್‌ವೇರ್‌ ಫೀಚರ್

ಲೆನೊವೋ ಕೆ6 ಪವರ್ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್ ಚಾಲಿತವಾಗಿದ್ದು, ಕಂಪನಿಯ ಸ್ವಂತ ವೈಬ್ ಪ್ಯೂರ್ ಯೂಸರ್ ಇಂಟರ್‌ಫೇಸ್ ಹೊಂದಿದೆ.

ಮೆಮೊರಿ ಸಾಮರ್ಥ್ಯ ಮತ್ತು ಸಂಪರ್ಕ ಫೀಚರ್

ಮೆಮೊರಿ ಸಾಮರ್ಥ್ಯ ಮತ್ತು ಸಂಪರ್ಕ ಫೀಚರ್

ಲೆನೊವೋ ಕೆ6 ಪವರ್ ಬಿಲ್ಟ್‌ ಇನ್‌ ಸ್ಟೋರೇಜ್‌ 32GB ಹೊಂದಿದ್ದು, 128GB ವರೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸ್ಟೊರೇಜ್‌ ಸಾಮರ್ಥ್ಯ ವಿಸ್ತರಿಸಬಹುದು.

4G LTE, VoLTE, ವೈಫೈ 802.11 b/g/n, ಬ್ಲೂಟೂತ್ 4.2, ಎಫ್‌ಎಂ ರೇಡಿಯೊ, ಮೈಕ್ರೋ-USB, ಮತ್ತು ಜಿಪಿಎಸ್/ಎ-ಜಿಪಿಎಸ್ ಸಂಪರ್ಕ ಫೀಚರ್ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 96.5 ಗಂಟೆ ಮ್ಯೂಸಿಕ್ ಪ್ಲೇ ಬ್ಯಾಕ್‌ ಡೆಲಿವರ್, 48 ಗಂಟೆಗಳ ವಾಯ್ಸ್ ಕರೆ, 13.6 ಗಂಟೆ ವೀಡಿಯೊ ಪ್ಲೇ ಬ್ಯಾಕ್‌ ಸಪೋರ್ಟ್‌ ಮಾಡಬಲ್ಲದು.

145 ಗ್ರಾಂ ತೂಕವಿರುವ ಡಿವೈಸ್, ಅಕ್ಸೆಲೆರೊಮೀಟರ್, ಗೈರೋಸ್ಕೋಪಿ, ಪ್ರಾಕ್ಸಿಮಿಟಿ ಸೆನ್ಸಾರ್, ಮತ್ತು ಡಿಜಿಟಲ್ ದಿಕ್ಸೂಚಿ ಫೀಚರ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Lenovo K6 Power Goes on Sale in India at Rs. 9,999. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot