Subscribe to Gizbot

ಲೆನೊವೊ K8 ನೋಟ್ ಲಾಂಚ್: ಬೆಲೆ, ವಿಶೇಷತೆಗಳು.!!

Written By:

ಕೊನೆಗೂ ಭಾರಿ ಕೂತುಹಲವನ್ನು ಮೂಡಿಸಿದ್ದ ಲಿನೊವೊ K8 ನೋಟ್ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಲಾಂಚ್ ಆಗಿದ್ದು, ಲಿನೊವೊ K7 ನೋಟ್ ಬಿಟ್ಟು ನೇರವಾಗಿ K8 ನೋಟ್ ಬಿಡುಗಡೆ ಮಾಡಿದ್ದು, ಇದು K6 ನೋಟ್ ಗಿಂತಲೂ ಡಬ್ಬಲ್ ಕೆಲಸವನ್ನು ಮಾಡಲಿದೆ.

ಓದಿರಿ: ದೀಪಾವಳಿ ಧಮಾಕ: ಅಂಬಾನಿ ಸಿಡಿಸಿದ ಡೇಟಾ ಪಟಾಕಿ '1GBಗೆ ರೂ.5 ಮಾತ್ರ'.!!

ಲೆನೊವೊ K8 ನೋಟ್ ಲಾಂಚ್: ಬೆಲೆ, ವಿಶೇಷತೆಗಳು.!!

K8 ನೋಟ್ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಮಿಡಿಯಾ ಟೆಕ್ ಹೆಲಿಯೋ ಪ್ರೋಸೆಸರ್ ನೊಂದಿಗೆ ಬರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ನಲ್ಲಿ ಕಾರ್ಯಚರಣೆ ನಡೆಸಲಿದೆ. ಬನ್ನಿ ಈ ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ತಿಳಿಯುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸೈನ್ ಮತ್ತು ಡಿಸ್‌ಪ್ಲೇ:

ಡಿಸೈನ್ ಮತ್ತು ಡಿಸ್‌ಪ್ಲೇ:

ಲೆನೊವೊ K8 ನೋಟ್ ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ ಡಿಸ್‌ಪ್ಲೇ ಇದ್ದು, FHD ಗುಣಮಟ್ಟವನ್ನು ಹೊಂದಿದೆ. ಜೊತೆಗೆ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಒಳಗೊಂಡಿದೆ. ಅಲ್ಯೂಮಿನಿಯಮ್ ನಿಂದ ಈ ಫೋನ್ ನಿರ್ಮಾಣವಾಗಿಟ್ಟು ಗಟ್ಟಿಯಾಗಿದ್ದು, ಬಿದ್ದರು ಒಡೆಯುವುದಿಲ್ಲ ಎನ್ನಲಾಗಿದೆ.

ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್:

ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್:

ಲೆನೊವೊ K8 ನೋಟ್ ಫೋನಿನಲ್ಲಿ ಡಿಕಾ ಕೋರ್ ಮೀಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಅಳವಡಿಸಲಾಗಿದ್ದು, 3GB/4GB RAM ನೊಂದಿಗೆ ದೊರೆಯಲಿದೆ. ಇದರೊಂದಿಗೆ 32GB/64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ SD ಕಾರ್ಡ್ ಹಾಕಿಕೊಂಡು ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಲೆನೊವೊ K8 ನೋಟ್ ಫೋನಿನ ಹಿಂಭಾಗದಲ್ಲಿ 13MP + 5MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ ಜೊತೆಗೆ ಡ್ಯುಯಲ್ LED ಲೈಟ್ ಸಹ ಇದೆ. ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದು ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೊ ತೆಗೆಯಲು ಶಕ್ತವಾಗಿದೆ .

ಬ್ಯಾಟರಿ:

ಬ್ಯಾಟರಿ:

ಲೆನೊವೊ K8 ನೋಟ್ ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಅಲ್ಲದೇ ಈ ಫೋನಿನಲ್ಲಿ ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಅನ್ನು ಒಟ್ಟಾಗಿ ಬಳಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದಲ್ಲದೇ USB OTG ಸೌಲಭ್ಯ ಸಹ ಇದರಲ್ಲಿದೆ.

ಬೆಲೆ ಮತ್ತು ಲಭ್ಯತೆ:

ಬೆಲೆ ಮತ್ತು ಲಭ್ಯತೆ:

ಲೆನೊವೊ K8 ನೋಟ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಬಣ್ಣದಲ್ಲಿ ದೊರೆಯಲಿದ್ದು, ಬ್ಲಾಕ್ ಮತ್ತು ಗೋಲ್ಡ್ ಬಣ್ಣದಲ್ಲಿ ಲಭ್ಯವಿದೆ. ಒಟ್ಟು ಎರಡು ಆವೃತ್ತಿಯಿದ್ದು, ಇದು ಕ್ರಮವಾಗಿ ರೂ.12,999 ಮತ್ತು ರೂ.13,999 ಗೆ ದೊರೆಯುತ್ತಿದೆ. ಆಗಸ್ಟ್ 12ರಿಂದ ಅಮೆಜಾನ್‌ನಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Lenovo K8 Note has been announced officially. It is true! Lenovo has skipped the K7 Note and jumped to the K8 Note to make it a killer device with double the performance than the K6 Note. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot