ಮಾರುಕಟ್ಟೆಗೆ ಕಾಲಿಡುತ್ತಿದೆ 5100mAh ಬ್ಯಾಟರಿಯ "ಲೆನೊವೋ ಪಿ2" ಸ್ಮಾರ್ಟ್‌ಫೋನ್!!

Written By:

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಹೇಗಾದರೂ ತನ್ನ ಕೈವಶ ಮಾಡಿಕೊಳ್ಳಬೇಕು ಎಂದು ಪಣತೊಟ್ಟಿರುವ ಲೆನೊವೋ ಕಂಪೆನಿ ಅತ್ಯದ್ಬುತ ಫೀಚರ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಮಾಡುತ್ತಿದೆ. ಇನ್ನು ಲೆನೊವೋ ಕೆ6 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಸಮಯದಲ್ಲಿಯೇ ಲೆನೊವೂ ಮತ್ತೊಂದು ಅತ್ಯುತ್ತಮ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ.

ಲೆನೊವೋ ಕಂಪೆನಿ ಬಿಡುಗಡೆ ಮಾಡಲಿರುವ "ಲೆನೊವೋ ಪಿ2" ಅತ್ಯಾಧುನಿಕ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ. ಇನ್ನು 2017 ನೇ ವರ್ಷದಲ್ಲಿ ರಲ್ಲಿ "ಪಿ" ಸೀರಿಸ್‌ ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಗೆ ಲೆನೊವೋ ಎಂಟ್ರಿ ನೀಡುತ್ತದೆ.

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಿಲೀಸ್ ಡೇಟ್ ಫಿಕ್ಸ್!..ಆದಷ್ಟು ಬೇಗ!!

ಹಾಗಾದರೆ ಲೆನೊವೋದ ನೂತನ ಸ್ಮಾರ್ಟ್‌ಫೋನ್ "ಲೆನೊವೋ ಪಿ2" ಏನೆಲ್ಲಾ ಫೀಚರ್‌ಗಳನ್ನು ಹೊಂದಿದೆ ಮತ್ತು ಅದರ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಹೇಗಿದೆ.?

ಡಿಸ್‌ಪ್ಲೇ ಹೇಗಿದೆ.?

"ಲೆನೊವೋ ಪಿ2" 5.5 ಇಂಚ್ AMOLED ಡಿಸ್‌ಪ್ಲೇ . (1920*1080) ರೆಸ್ಯುಲೇಶನ್ ಹೊಂದಿದೆ ಈ ಮೂಲಕ ಅತ್ಯುತ್ತಮ ವಿಡಿಯೋ ನೋಡುವ ಗುಣಮಟ್ಟವನ್ನು ನೀಡಲಿದೆ.

ಪ್ರೊಸೆಸರ್ ಮತ್ತು ಆಪರೇಟಿಂಗ್ ಸಿಸ್ಟಮ್ ಯಾವುದು?

ಪ್ರೊಸೆಸರ್ ಮತ್ತು ಆಪರೇಟಿಂಗ್ ಸಿಸ್ಟಮ್ ಯಾವುದು?

ಲೆನೋವೋ ಪಿ ಸೀರಿಸ್ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸಂಸ್ಥೆಯ ಅತ್ಯುತ್ತಮ ಸ್ನಾಪ್‌ಡ್ರಾಗನ್ 625 ಪ್ರೊಸೆಸರ್ ಹೊಂದಿದೆ. ಮತ್ತು ಆಂಡ್ರಾಯ್ಡ್ ಮಾರ್ಶಮಲ್ಲೊ 6.0 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

RAM ಮತ್ತು ROM

RAM ಮತ್ತು ROM"

ಲೆನೊವೋ ಪಿ2" 3GB ಮತ್ತು 4GB RAMನ ಎರಡು ಮಾದರಿಯಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ. ಇನ್ನು 32GB ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.

5100mAh ಬ್ಯಾಟರಿ!!

5100mAh ಬ್ಯಾಟರಿ!!

ಲೆನೊವೋ ತನ್ನ "ಪಿ" ಸೀರಿಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಬ್ಯಾಟರಿ ಸಮಸ್ಯೆಯನ್ನು ನೀಗಿಸಲು 5100mAh ಶಕ್ತಿಯ ಬ್ಯಾಟರಿಯನ್ನು ನೀಡುತ್ತಿದೆ. 4 ದಿನಗಳ ಸಪೂಂರ್ಣ ಬ್ಯಾಟರಿ ಬ್ಯಾಕಪ್‌ ನೀಡುತ್ತದೆ ಎಂದು ಲೆನೊವೋ ಹೇಳಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Lenovo P2 is the next smartphone from the company that will be launching in India.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot