ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಿಲೀಸ್ ಡೇಟ್ ಫಿಕ್ಸ್!..ಆದಷ್ಟು ಬೇಗ!!

ನೋಕಿಯಾ ಪಿ (Nokia P) ಮತ್ತು ನೋಕಿಯಾ ಡಿ1ಸಿ (Nokia d1c) ಸ್ಮಾರ್ಟ್‌ಫೋನ್‌ಗಳು ಮೊದಲು ಬಿಡುಗಡೆಯಾಗುವ ನೋಕಿಯಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಎನ್ನಲಾಗಿದೆ.

|

ಹಲವು ದಿವಸಗಳಿಂದ ಹೆಚ್ಚು ಸುದ್ದಿಯಲ್ಲಿರುವ ಬಹು ನಿರೀಕ್ಷಿತ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಈ ವರ್ಷದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆಯಾಗುವುದು ನಿಚ್ಚಳವಾಗಿದೆ.! ಹೌದು, ನೋಕಿಯಾ ಕಂಪೆನಿ ತನ್ನ ನೂತನ ಸ್ಮಾರ್ಟ್‌ಫೋನ್‌ಗಳಾದ ನೋಕಿಯಾ ಪಿ (Nokia P) ಮತ್ತು ನೋಕಿಯಾ ಡಿ1ಸಿ (Nokia d1) ಸ್ಮಾರ್ಟ್‌ಫೋನ್‌ಗಳನ್ನು ಚೀನಾದ "ಕಡ್ಡಾಯ ಪ್ರಮಾಣೀಕರಣ" (3C) ಸಂಸ್ಥೆಗೆ ದೃಡೀಕರಣ ನೀಡಿದೆ.!!

ಸುದ್ದಿಯ ಪ್ರಕಾರ 2017 ರಲ್ಲಿ ನೋಕಿಯಾ 5 ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ನೋಕಿಯಾ ಪಿ (Nokia P) ಮತ್ತು ನೋಕಿಯಾ ಡಿ1ಸಿ (Nokia d1c) ಸ್ಮಾರ್ಟ್‌ಫೋನ್‌ಗಳು ಮೊದಲು ಬಿಡುಗಡೆಯಾಗುವ ನೋಕಿಯಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಎನ್ನಲಾಗಿದೆ.

2017 ರಲ್ಲಿ ಬಿಡುಗಡೆಯಾಗಲಿರುವ ಶ್ಯೋಮಿ ಸ್ಮಾರ್ಟ್‌ಫೋನ್‌ಗಳು ಯಾವುವು?

ಇನ್ನು ಮಾರ್ಚ್‌ 21 ಕ್ಕೆ ವಿಶ್ವದಾದ್ಯಂತ ಏಕಕಾಲದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತವೆ ಎಂದು ಆನ್‌ಲೈನ್ ಸ್ಮಾರ್ಟ್‌ಫೋನ್‌ ತಂತ್ರಜ್ಞಾನ ಬರಹಗಾರ ಮೂಲಗಳಿಂದ ತಿಳಿದುಬಂದಿದೆ.!! ಮೊದಲು ಬಿಡುಗಡೆಯಾಗಲಿರುವ ನೋಕಿಯಾ ಡಿ1ಸಿ ಸ್ಮಾರ್ಟ್‌ಫೋನ್ 5.5 ಇಂಚ್‌ ಡಿಸ್‌ಪ್ಲೇ, ಡ್ಯುವಲ್ ಸಿಮ್ ಮತ್ತು 16 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದ್ದು, ಇನ್ನು ಬೆಲೆ ಎಷ್ಟು ಮತತ್ತು ಯಾವೆಲ್ಲಾ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನೋಕಿಯಾ ಡಿಸಿ1 ಪ್ರೊಸೆಸರ್ ಯಾವುದು?

ನೋಕಿಯಾ ಡಿಸಿ1 ಪ್ರೊಸೆಸರ್ ಯಾವುದು?

ಇದೇ ಮೊದಲ ಭಾರಿಗೆ ಮಾರುಕಟ್ಟೆಗೆ ಬರುತ್ತಿರುವ ನೋಕಿಯಾ ಇ1 ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಹೊಂದಿದೆ ಎಂದು ವರದಿಯಾಗಿದೆ.

ಡಿಸ್‌ಪ್ಲೇ ಮತ್ತು ಬ್ಯಾಟರಿ ಹೇಗಿದೆ?

ಡಿಸ್‌ಪ್ಲೇ ಮತ್ತು ಬ್ಯಾಟರಿ ಹೇಗಿದೆ?

ನೋಕಿಯಾ ಡಿಸಿ1 ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ 5.5 ಇಂಚ್ ಡಿಸ್‌ಪ್ಲೇ ಹೊಂದಿದ್ದು, 1080*1920 ಪಿಕ್ಸೆಲ್ ಡೆನ್‌ಸಿಟಿ ಹೊಂದಿದೆ. ಇನ್ನು ಉತ್ತಮವಾದ 3500Mah ಬ್ಯಾಟರಿಯನ್ನು ಒಳಗೊಂಡಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಅತ್ಯುತ್ತಮ ಗುಣಮಟ್ಟದ 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೋಕಿಯಾ ಡಿಸಿ1 ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಹೊಂದಿದೆ.

Ram ಮತ್ತು Rom

Ram ಮತ್ತು Rom

ನೋಕಿಯಾ ಡಿಸಿ1 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿರುತ್ತದೆ ಎನ್ನಲಾಗಿದೆ. ಪ್ರಸ್ತುತ ಇರುವ ಸ್ಮಾರ್ಟ್‌ಫೋನ್‌ಗ ಳಿಗಿಂತಲು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಫೀಚರ್‌ಗಳು ಸಿಗಲಿವೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ನೋಕಿಯಾ Dc1 ಸ್ಮಾರ್ಟ್‌ಫೋನ್ ಬೆಲೆ 9,999 ರೂಪಾಯಿಗಳು ಎಂದು ಬಹುತೇಕ ಖಚಿತವಾಗಿದೆ.

Best Mobiles in India

English summary
According to online reports, Nokia plans to launch five smartphones in march 2017.to know visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X