'ಲೆನೊವೊ Z6' ಯೂತ್‌ ಎಡಿಷನ್ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಮೂಹೂರ್ತ ಫಿಕ್ಸ್‌!

|

ಪ್ರಸ್ತುತ ಲ್ಯಾಪ್‌ಟಾಪ್‌ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿರುವ ಲೆನೊವೊ ಕಂಪನಿಯು, ಸ್ಮಾರ್ಟ್‌ಪೋನ್‌ ವಲಯದಲ್ಲಿ ಇತ್ತೀಚಿಗೆ ಹೆಚ್ಚಾಗಿ ಗುರುತಿಸಿಕೊಂಡಿಲ್ಲ. ಆದರೆ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದ ಲೆನೊವೊ ಕಂಪನಿಯನ್ನು ಗ್ರಾಹಕರು ಇಂದಿಗೂ ಮರೆತಿಲ್ಲ ತನ್ನ ಗ್ರಾಹಕರಿಗೆ ಮತ್ತೆ ಖುಷಿ ಸುದ್ದಿಯನ್ನು ನೀಡಿದ್ದು, ಇದೀಗ ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ ಒಂದನ್ನು ಪರಿಚಯಿಸಲು ದಿನಾಂಕ ಫಿಕ್ಸ್‌ ಮಾಡಿಕೊಂಡಿದೆ.

'ಲೆನೊವೊ Z6' ಯೂತ್‌ ಎಡಿಷನ್ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಮೂಹೂರ್ತ ಫಿಕ್ಸ್‌!

ಹೌದು, ಲೆನೊವೊ ಕಂಪನಿಯು ಲೆನೊವೊ Z6 ಹೆಸರಿನ ಯೂತ್‌ ಎಡಿಷನ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಅದಕ್ಕೆ ಇದೇ ಮೇ 22ರಂದು ಮೂಹೂರ್ತವನ್ನು ಫಿಕ್ಸ್ ಮಾಡಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಸಂಪೂರ್ಣ ಆಕರ್ಷಕ ಡಿಸೈನ್‌ ಮತ್ತ ಬಣ್ಣಗಳ ಆಯ್ಕೆಯನ್ನು ಹೊಂದಿರಲಿದ್ದು, ತ್ರಿವಳಿ ಕ್ಯಾಮೆರಾ ಫೀಚರ್ ನಿಂದ ಯುವ ಸಮೂಹದ ಮನಗೆಲ್ಲಲಿದೆ. ಹಾಗೆಯೇ ವಾಟರ್‌ ನಾಚ್‌, ಟಾಪ್‌ ಬೆಜಲ್‌ನಲ್ಲಿ ಕಾಣಬಹುದು.

'ಲೆನೊವೊ Z6' ಯೂತ್‌ ಎಡಿಷನ್ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಮೂಹೂರ್ತ ಫಿಕ್ಸ್‌!

ಈ ಹಿಂದೆ ಕಂಪನಿಯು ಪರಿಚಯಿಸಿದ್ದ 'ಲೆನೊವೊ Z6 ಪ್ರೊ' ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ ಮಾದರಿಯಲ್ಲಿ ಹಮನ ಸೆಳೆದಿತ್ತು. ಅದೇ ನಿಟ್ಟಿನಲ್ಲಿ ಈಗ 'ಲೆನೊವೊ Z6' ಯೂತ್‌ ಎಡಿಷನ್ ಯೂವ ಸಮೂಹವು ನಿರೀಕ್ಷಿಸುವ ಅಗತ್ಯ ಫ್ಲ್ಯಾಗ್‌ಶಿಪ್ ಹೋಲುವ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಹಾಗಾದರೇ ಲೆನೊವೊ Z6 ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್

ಡಿಸೈನ್

ಲೆನೊವೊ Z6 ಸ್ಮಾರ್ಟ್‌ಫೋನ್ ಆಕರ್ಷಕ ಎರಡು ಬಣ್ಣಗಳ ಆಯ್ಕೆಯಲ್ಲಿರಲಿದ್ದು, ಬ್ಲ್ಯಾಕ್‌ ಮತ್ತು ಗ್ರೀನ್ ಹಾಗೂ ಪರ್ಪಲ್ ಬಣ್ಣಗಳ ಮಿಶ್ರಣದಲ್ಲಿರಲಿದೆ. ಫೋನ್‌ ಹಿಂಬದಿಯ ತ್ರಿವಳಿ ಕ್ಯಾಮೆರಾವು ಬ್ಲ್ಯಾಕ್‌ ಮತ್ತು ಗೋಲ್ಡ್‌ ಸಮ್ಮಿಶ್ರಣದ ಬಣ್ಣಗಳ ರಚನೆಯನ್ನು ಹೊಂದಿರಲಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್‌ ರಿಂಗ್‌ ಸಹ ಗೋಲ್ಡ್‌ ಬಣ್ಣದಲ್ಲಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

6.3 ಇಂಚಿನ ಡಿಸ್‌ಪ್ಲೇ ನೀಡಬಹುದು ಎನ್ನಲಾಗುತ್ತಿದ್ದು, ಆದರೆ ಕಂಪನಿಯು ಡಿಸ್‌ಪ್ಲೇಯ ಗಾತ್ರ ಮತ್ತು ಪಿಕ್ಸಲ್ ಸಾಮರ್ಥ್ಯದ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಹಾಕಿಲ್ಲ. ಡಿಸ್‌ಪ್ಲೇಯು ಕಡಿಮೆ ಅಂಚಿನಿಂದ ಕೂಡಿರಲಿದ್ದು, ಸುತ್ತಲೂ ಅರ್ಧ ಕರ್ವ್‌ ಆಕಾರದ ರಚನೆಯನ್ನು ಪಡೆದಿರಲಿದೆ. ಹಾಗಾಯೇ ಡಿಸ್‌ಪ್ಲೇಯು HDR10 ಬೆಂಬಲಿಸಲಿದ್ದು, ಗೊರಿಲ್ಲಾ ಗ್ಲಾಸ್‌ ಇರುವ ಸಾಧ್ಯತೆಗಳಿವೆ

ಕ್ಯಾಮೆರಾ

ಕ್ಯಾಮೆರಾ

ಪ್ರಸ್ತುತ ತ್ರಿವಳಿ ಕ್ಯಾಮೆರಾ ಫೀಚರ್ ಭಾರಿ ಟ್ರೆಂಡ್‌ನಲ್ಲಿದ್ದು, ಲೊನೊವೊ Z6 ಸ್ಮಾರ್ಟ್‌ಫೋನ್ ಸಹ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ನೀಡಿದೆ. ಪ್ರಮುಖ ಕ್ಯಾಮೆರಾ ಹೈ ಮೆಗಾಪಿಕ್ಸಲ್‌ನಲ್ಲಿರಬಹುದು ಎನ್ನಲಾಗುತ್ತಿದೆ. ಆದರೆ ಅಧಿಕೃತವಾಗಿ ಕ್ಯಾಮೆರಾ ಎಷ್ಟು ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಎಂಬುದನ್ನು ತಿಳಿಸಿಲ್ಲ.

ಬ್ಯಾಟರಿ

ಬ್ಯಾಟರಿ

ಲೆನೊವೊ Z6 ಸ್ಮಾರ್ಟ್‌ಫೋನ್ 4050mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿರಲಿದ್ದು, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದ ಕುರಿತು ಮಾಹಿತಿ ನೀಡಿಲ್ಲ. ಇದರೊಂದಿಗೆ ಡಾಲ್ಬಿ ಆಟೊಮ್ ಸೌಂಡ್‌ ಆಯ್ಕೆಯನ್ನು ಹೊಂದಿರುವ ಜೊತೆಗೆ ಯುಎಸ್‌ಬಿ ಸಿ ಪೋರ್ಟ್‌ ಆಯ್ಕೆ ಸಹ ಇರಲಿದೆ ಎನ್ನಲಾಗಿದೆ.

ಲಭ್ಯತೆ

ಲಭ್ಯತೆ

ಲೆನೊವೊ Z6 ಯೂತ್‌ ಎಡಿಷನ್ ಸ್ಮಾರ್ಟ್‌ಫೋನ್ ಇದೇ ಮೇ 22ರಂದು ಅಧಿಕೃತವಾಗಿ ಲಾಂಚ್ ಆಗಲಿದ್ದು, ಇದೇ ಮೇ 28 ಸೇಲ್ ಆರಂಭಿಸಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಕಂಪನಿಯು ಗ್ರಾಹಕರಿಗೆ ಪ್ರೀ ಆರ್ಡರ್‌ ಅವಕಾಶವನ್ನು ಸಹ ಒದಗಿಸಿಕೊಟ್ಟಿದೆ.

Best Mobiles in India

English summary
Lenovo Z6 Youth Edition launching May 22, pre-order page reveals key specs and design.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X