Subscribe to Gizbot

6GB RAM, ಸ್ನಾಪ್‌ಡ್ರಾಗನ್ 821 'ಲೆನೊವೋ ಜುಕ್ ಎಡ್ಜ್' ಫೋನ್ ನಾಳೆ ಲಾಂಚ್‌: ವಿಶೇಷತೆಗಳು!

Written By:

ಲೆನೊವೋ(Lenovo) ಕಳೆದ ವಾರವಷ್ಟೇ ಭಾರತದಲ್ಲಿ ತನ್ನ 'ಕೆ6 ಪವರ್' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಆದರೆ ಈಗ ಕಂಪನಿ ಇತರೆ ಸ್ಮಾರ್ಟ್‌ಫೋನ್‌ ಅನ್ನು ಈಗಾಗಲೇ ಲಾಂಚ್‌ ಮಾಡಲು ಯೋಜನೆ ರೂಪಿಸಿದೆ. ಲೆನೊವೋ ಡಿಸೆಂಬರ್ 7 ರಂದು (ನಾಳೆ) ಜುಕ್ ಎಡ್ಜ್‌ ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಲಾಂಚ್ ಮಾಡುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಲೆನೊವೋ ಈ ಹಿಂದೆ ಭಾರತದಲ್ಲಿ ಜುಕ್ ಸೀರೀಸ್ ಫೋನ್‌ ಅನ್ನು ಲಾಂಚ್‌ ಮಾಡಿತ್ತು. ಜುಕ್‌ ಎಡ್ಜ್‌ ಅನ್ನು ಮುಂದಿನ ದಿನಗಳಲ್ಲಿ ಕಂಪನಿ ಭಾರತದಲ್ಲೂ ಲಾಂಚ್‌ ಮಾಡುವ ನಿರೀಕ್ಷೆ ಇದೆ.

ಜುಕ್‌ ಸಿಇಓ 'ಚಾಂಗ್ ಚೆಂಗ್' ಇತ್ತೀಚೆಗಷ್ಟೇ ಜುಕ್ ಎಡ್ಜ್‌(ZUK Edge) ಫೋನ್‌ ಅನ್ನು ಈ ವಾರದಲ್ಲಿ ಲಾಂಚ್‌ ಮಾಡುವ ಬಗ್ಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಫೋನ್‌ ಫೀಚರ್‌ ಮತ್ತು ಹಲವು ಇಮೇಜ್‌ಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದವು. ಜುಕ್‌ ಎಡ್ಜ್‌ ಸ್ಮಾರ್ಟ್‌ಫೋನ್ ಹೇಗಿರಲಿದೆ, ಯಾವ ಫೀಚರ್‌ಗಳನ್ನು ಹೊಂದಿರಲಿದೆ ಎಂಬ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

6.4ಇಂಚು ಡಿಸ್‌ಪ್ಲೇ ಲೆನೊವೋ ಫ್ಯಾಬ್ 2 ಬಜೆಟ್ ಬೆಲೆಯಲ್ಲಿ ನಾಳೆ ಲಾಂಚ್‌: ವಿಶೇಷತೆಗಳೇನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೊಸೆಸರ್ ಮತ್ತು ಮೆಮೊರಿ ಸಾಮರ್ಥ್ಯ

ಪ್ರೊಸೆಸರ್ ಮತ್ತು ಮೆಮೊರಿ ಸಾಮರ್ಥ್ಯ

ಲೆನೊವೋ ಎಡ್ಜ್‌ ಸ್ಮಾರ್ಟ್‌ಫೋನ್ ಕ್ವಾಲ್ಕಂ ಲೇಟೆಸ್ಟ್ ಸ್ನಾಪ್‌ಡ್ರಾಗನ್ 821 ಪ್ರೊಸೆಸರ್‌'ನೊಂದಿಗೆ ಬರಲಿದೆ. ಪ್ರೊಸೆಸರ್ 6GB RAM ಮತ್ತು 128GB ಆಂತರಿಕ ಶೇಖರಣಾ ಸಾಮರ್ಥ್ಯ ಹೊಂದಿರಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸ್‌ಪ್ಲೇ ಮತ್ತು ಗ್ಲಾಸ್

ಡಿಸ್‌ಪ್ಲೇ ಮತ್ತು ಗ್ಲಾಸ್

ಜುಕ್‌ ಎಡ್ಜ್ 5.5 ಇಂಚಿನ ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 2.5D ಗ್ಲಾಸ್ ಹೊಂದಿದೆ. ಅಲ್ಲದೇ ಫೋನ್‌ ತನ್ನ ಹೆಸರಿನಲ್ಲಿ ಎಡ್ಜ್‌ ಎಂಬುದನ್ನು ಕ್ಯಾರಿ ಮಾಡಿದೆ. ಆದರೆ ವಕ್ರ ಡಿಸ್‌ಪ್ಲೇ ಹೊಂದಿಲ್ಲ.

ಕ್ಯಾಮೆರಾ ಫೀಚರ್

ಕ್ಯಾಮೆರಾ ಫೀಚರ್

ಲೆನೊವೋ ಜುಕ್‌ ಎಡ್ಜ್‌ ಸ್ಮಾರ್ಟ್‌ಫೋನ್‌ 13MP ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಜುಕ್‌ ಎಡ್ಜ್‌ ಆಂಡ್ರಾಯ್ಡ್ 7.0 ನ್ಯೂಗಾ ಓಎಸ್ ಚಾಲಿತವಾಗಿದ್ದು, ಲೆನೊವೋದ ಸ್ವಂತ UI(User Interface). ಲೆನೊವೋ ಜುಕ್‌ ಎಡ್ಜ್‌ ಸ್ಮಾರ್ಟ್‌ಫೋನ್‌'ನ ಲೀಕ್‌ ಆದ ಇಮೇಜ್‌ಗಳ ಪ್ರಕಾರ ಸ್ಲಿಮ್ ರೌಂಡೆಡ್ ಎಡ್ಜ್‌ ಹೊಂದಿದ್ದು, ಡಿವೈಶ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದಲ್ಲಿ ಹೊಂದಿದೆ. ಫೋನ್ ಯುಎಸ್‌ಬಿ ಟೈಪ್‌ ಸಿ ಪೋರ್ಟ್ ಅನ್ನು ಚಾರ್ಜಿಂಗ್‌ಗಾಗಿ ಹೊಂದಿದ್ದು, 3.5mm ಆಡಿಯೋ ಜಾಕ್‌ ಹೊಂದಿದೆ.

2 ಭಿನ್ನತೆಯಲ್ಲಿ ಸ್ಮಾರ್ಟ್‌ಫೋನ್‌

2 ಭಿನ್ನತೆಯಲ್ಲಿ ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌ ಲೀಕ್ ಇಮೇಜ್‌ಗಳು ಇತರೆ ಸ್ಮಾರ್ಟ್‌ಫೋನ್‌ ತಯಾರಕರು ಲಾಂಚ್‌ ಮಾಡಿದ ಇಮೇಜ್‌ಗಳಾಗಿದ್ದು, ಫೋನ್ 6GB RAM 128GB ಆಂತರಿಕ ಮೆಮೊರಿ ಜೊತೆಗೆ, 4GB RAM, 64GB ಆಂತರಿಕ ಮೆಮೊರಿ ಭಿನ್ನತೆಯಲ್ಲಿ ಲಾಂಚ್‌ ಆಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಖರೀದಿ ಬೆಲೆ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ, ಫೋನ್‌ ಚೀನಾದಲ್ಲಿ ಲಾಂಚ್‌ ಆದ ನಂತರದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಲಾಂಚ್‌ ಆಗುವ ಸಾಧ್ಯತೆ ಇದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Lenovo ZUK Edge with Snapdragon 821 to launch tomorrow. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot