6.4ಇಂಚು ಡಿಸ್‌ಪ್ಲೇ ಲೆನೊವೋ ಫ್ಯಾಬ್ 2 ಬಜೆಟ್ ಬೆಲೆಯಲ್ಲಿ ನಾಳೆ ಲಾಂಚ್‌: ವಿಶೇಷತೆಗಳೇನು?

Written By:

ಲೆನೊವೋ ಮಂಗಳವಾರ(ಡಿಸೆಂಬರ್ 6) ಭಾರತದಲ್ಲಿ 'ಫ್ಯಾಬ್ 2' ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ. ಚೀನಾ ಕಂಪನಿ ಲೆನೊವೋ ಈಗಾಗಲೇ ವೆಬಿನಾರ್‌ಗೆ ಮಾಧ್ಯಮ ಆಹ್ವಾನ ನೀಡಿದ್ದು, ಬಿಡುಗಡೆ ಕಾರ್ಯಕ್ರಮ ಐಎಸ್‌ಟಿ 11am ಗೆ ಆರಂಭವಾಗಲಿದೆ. ಲೆನೊವೋ ಫ್ಯಾಬ್ 2 ಭಾರತದಲ್ಲಿ ಲಾಂಚ್ ಆದ ನಂತರ ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಖರೀದಿತಾಣದಲ್ಲಿ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಿರುತ್ತದೆ.

ಬಜೆಟ್ ಬೆಲೆಯಲ್ಲಿ ಲೆನೊವೋ ಕೆ6: ಖರೀದಿಸಲು ಐದು ಮುಖ್ಯಕಾರಣಗಳು?

6.4ಇಂಚು ಡಿಸ್‌ಪ್ಲೇ ಲೆನೊವೋ ಫ್ಯಾಬ್ 2 ಬಜೆಟ್ ಬೆಲೆಯಲ್ಲಿ ಲಾಂಚ್‌:ವಿಶೇಷತೆಗಳೇನು?

ಲೆನೊವೋ ಕಂಪನಿ ಈಗಾಗಲೇ ತನ್ನ ಲೆನೊವೋ ಫ್ಯಾಬ್ 2 ಪ್ಲಸ್ ಡಿವೈಸ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಆದರೆ ಲೆನೊವೋ ಫ್ಯಾಬ್ 2 ಪ್ರೊ ಡಿವೈಸ್‌ ಅನ್ನು ಯಾವಾಗ ಭಾರತದಲ್ಲಿ ಲಾಂಚ್‌ ಮಾಡುತ್ತದೆ ಎಂಬುದು ತಿಳಿದಿಲ್ಲ.

ಲೆನೊವೋ ಫ್ಯಾಬ್ 2 ಸ್ಮಾರ್ಟ್‌ಫೋನ್‌ ಲೆನೊವೋ ಫ್ಯಾಬ್ 2 ಪ್ಲಸ್‌ನ ವಿಭಿನ್ನತೆಯ ಫೀಚರ್‌ ಹೊಂದಿದೆ. ಲೆನೊವೋ ಫ್ಯಾಬ್ 2, ಪ್ಲಸ್‌ಗಿಂತ ಕಡಿಮೆ ಸ್ಕ್ರೀನ್‌ ರೆಸಲ್ಯೂಶನ್‌, ಕಡಿಮೆ ಕ್ಯಾಮೆರಾ ಫೀಚರ್ ಹೊಂದಿದೆ. ಲೆನೊವೋ ಫ್ಯಾಬ್ 2 ಪ್ಲಸ್ ಭಾರತದಲ್ಲಿ ರೂ.14,990 ಬೆಲೆಗೆ ಲಾಂಚ್‌ ಆಗಿತ್ತು. ಲೆನೊವೋ ಫ್ಯಾಬ್ 2 ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವು ಉತ್ತಮ ಫೀಚರ್‌ಗಳಲ್ಲಿ ಲಭ್ಯ.

6.4ಇಂಚು ಡಿಸ್‌ಪ್ಲೇ ಲೆನೊವೋ ಫ್ಯಾಬ್ 2 ಬಜೆಟ್ ಬೆಲೆಯಲ್ಲಿ ಲಾಂಚ್‌:ವಿಶೇಷತೆಗಳೇನು?

ಲೆನೊವೋ ಫ್ಯಾಬ್ 2 ಡಿವೈಸ್‌ ಅನ್ನು ಕಂಪನಿ ಜೂನ್ 'ಟೆಕ್‌ ವರ್ಲ್ಡ್‌ ಈವೆಂಟ್'ನಲ್ಲಿ $199 (ಸುಮಾರು Rs. 13,500) ಬೆಲೆಗೆ ಲಾಂಚ್‌ ಮಾಡಿತ್ತು. ಕಂಪನಿಯ ಅಮೆರಿಕ ಸೈಟ್‌ನಲ್ಲಿ ಫ್ಯಾಬ್ 2 $169 (roughly Rs. 11,500) ಬೆಲೆಗೆ ಮಾರಾಟ ಮಾಡುತ್ತಿದೆ. ಈಗ ಭಾರತದಲ್ಲೂ ಇದೇ ಬೆಲೆಗೆ ಲಾಂಚ್‌ ಮಾಡುವ ನಿರೀಕ್ಷೆ ಇದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

6.4ಇಂಚು ಡಿಸ್‌ಪ್ಲೇ ಲೆನೊವೋ ಫ್ಯಾಬ್ 2 ಬಜೆಟ್ ಬೆಲೆಯಲ್ಲಿ ಲಾಂಚ್‌:ವಿಶೇಷತೆಗಳೇನು?

ಲೆನೊವೋ ಫ್ಯಾಬ್ 2 ಡಿವೈಸ್‌ 6.4 ಇಂಚಿನ ಎಚ್‌ಡಿ (720x1280 ಪಿಕ್ಸೆಲ್) ಡಿಸ್‌ಪ್ಲೇ, 1.3GHz ಕ್ವಾಡ್ ಕೋರ್ MediaTek MT8735 ಪ್ರೊಸೆಸರ್ 3GB RAM ಚಾಲಿತವಾಗಿದೆ. 32GB ಇನ್‌ಬಿಲ್ಟ್ ಸ್ಟೋರೇಜ್ ಹೊಂದಿದ್ದು, 128GB ವರೆಗೂ ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ ವಿಸ್ತರಿಸಬಹುದು. 13MP ಹಿಂಭಾಗ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದ್ದು, 85ಡಿಗ್ರಿ ವೈಡ್ ಆಂಗಲ್ ಲೆನ್ಸ್ ಹೊಂದಿದೆ.

6.4ಇಂಚು ಡಿಸ್‌ಪ್ಲೇ ಲೆನೊವೋ ಫ್ಯಾಬ್ 2 ಬಜೆಟ್ ಬೆಲೆಯಲ್ಲಿ ಲಾಂಚ್‌:ವಿಶೇಷತೆಗಳೇನು?

ಲೆನೊವೋ ಫ್ಯಾಬ್ 2 ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 6.0 ಮಾರ್ಷ್‌ಮೊಲ್ಲೊ ಓಎಸ್‌ ಚಾಲಿತವಾಗಿದ್ದು, ಹೈಬ್ರಿಡ್ ಡ್ಯುಯಲ್ ಸಿಮ್‌ ಸ್ಲಾಟ್, ಮೈಕ್ರೋ ಸಿಮ್ಸ್‌ ಸ್ಲಾಟ್ ಹೊಂದಿದೆ. 175x88.5x9.6mm ಅಳತೆ, ಮತ್ತು 225 ಗ್ರಾಂ ತೂಕವಿದೆ. ವೈ-ಫೈ 802.11, ಬ್ಲೂಟೂತ್ 4.0, ಮತ್ತು ಜಿಪಿಎಸ್ ಬೆಂಬಲ ಜೊತೆಗೆ 4G VoLTE ಸಂಪರ್ಕ ಫೀಚರ್ ಹೊಂದಿದೆ. 4050mAh ಬ್ಯಾಟರಿ ಸಾಮರ್ಥ್ಯಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿRead more about:
English summary
Lenovo Phab 2 India Launch Set for TuesdayːKey Features and Specification. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot