ಎಲ್‌ಜಿ ಜಿ2 4ಜಿ ಸ್ಮಾರ್ಟ್‌ಫೋನ್ ಬಿಡುಗಡೆ
ಮೊಬೈಲ್ ಸೇವಾ ಕಂಪೆನಿಗಳು ದೇಶದಲ್ಲಿ 4ಜಿ ಸೇವೆಯನ್ನು ಆರಂಭಿಸುತ್ತಿದ್ದಂತೆ ಸ್ಮಾರ್ಟ್‌ಫೋನ್ ಕಂಪೆನಿಗಳು ಇತ್ತ 4ಜಿ ಎಲ್‌ಟಿಇ ಸಂಪರ್ಕಕ್ಕೆ ಬೆಂಬಲ ನೀಡುವ ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗುತ್ತಿವೆ.
ವಿಶ್ವದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 4 ಸ್ಥಾನದಲ್ಲಿರುವ ಎಲ್‌ಜಿ 4ಜಿ ನೆಟ್‌ವರ್ಕ್‌ಗೆ ಬಂಬಲ ನೀಡುವ ತನ್ನ ದುಬಾರಿ ಬೆಲೆಯ ಎಲ್‌ಜಿ ಜಿ2 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು ಎರಡು ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಿದೆ.
ಎಲ್‌ಜಿ ಜಿ2 16 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ46 ಸಾವಿರ ರೂಪಾಯಿ, 32ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ 49 ಸಾವಿರ ಬೆಲೆಯನ್ನು ಎಲ್‌ಜಿ ನಿಗದಿ ಪಡಿಸಿದೆ.
3ಜಿಗೆ ಬೆಂಬಲ ನೀಡುವ ಈ ಸ್ಮಾರ್ಟ್‌ಫೋನನ್ನು ಎಲ್‌ಜಿ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು.16 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ 41,500 ರೂಪಾಯಿ,32 ಜಿಬಿ ಸ್ಮಾರ್ಟ್‌ಫೋನನ್ನು 43,500 ಬೆಲೆಯಲ್ಲಿ ಎಲ್‌ಜಿ ಬಿಡುಗಡೆ ಮಾಡಿತ್ತು.
ಫುಲ್ ಎಚ್‌ಡಿ ಸ್ಮಾರ್ಟ್‌ಫೋನ್ ಇದಾಗಿದ್ದು 70.9x138.5x8.9 ಮಿ.ಮೀಟರ್ ಗಾತ್ರ, 143 ಗ್ರಾಂ ತೂಕವನ್ನುಹೊಂದಿದೆ. ಈ ಸ್ಮಾರ್ಟ್‌ಫೋನಿನ ವಿಶೇಷತೆ ಏನೆಂದರೆ ವಾಲ್ಯೂಮ್ ಬಟನ್ ಹಿಂದುಗಡೆ ಕ್ಯಾಮೆರಾದ ಸಮೀಪ ನೀಡಿದ್ದಾರೆ.ಆದರೆ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸೌಲಭ್ಯವಿಲ್ಲ. ಆದರೆ ಸ್ಮಾರ್ಟ್‌ಫೋನ್ 3000 mAh ಶಕ್ತಿಶಾಲಿ ಬ್ಯಾಟರಿ ಹೊಂದಿದೆ.

ಎಲ್‌ಜಿ ಜಿ 2
ವಿಶೇಷತೆ:
ಸಿಂಗಲ್ ಸಿಮ್
5.2 ಇಂಚಿನ ಫುಲ್ ಎಚ್‌ಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್4.2.2 ಜೆಲ್ಲಿ ಬೀನ್ ಓಎಸ್
2.26 GHz ಕ್ವಾಡ್ ಕೋರ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
16/32ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್
3ಜಿ,ಜಿಪಿಎಸ್,ಎ-ಜಿಪಿಎಸ್,ವೈಫೈ,ಬ್ಲೂಟೂತ್,ಎನ್‌ಎಫ್‌ಸಿ
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್ ಇಲ್ಲ
3000 mAh ಬ್ಯಾಟರಿ


Click it and Unblock the Notifications








