Home
ಮೊಬೈಲ್

ಈ ಸ್ಮಾರ್ಟ್‌ಫೋನ್‌ಗಳು ನಿಮ್ಮ ಜೇಬಿಗೂ ಭಾರವಿಲ್ಲ, ಕೈಯಲ್ಲಿಯೂ ತುಂಬಾ ಹಗುರ!

ಸದ್ಯ ಸ್ಮಾರ್ಟ್‌ಫೋನ್‌ಗಳು ಜನರಿಗೆ ಅಗತ್ಯ ಮತ್ತು ಅವಶ್ಯ ಡಿವೈಸ್‌ ಆಗಿವೆ. ಗ್ರಾಹಕರು ಅವರ ಬಜೆಟ್‌ಗೆ ಅನುಗುಣವಾಗಿ, ಸೂಕ್ತ ಮೊಬೈಲ್‌ ಅನ್ನು ಖರೀದಿ ಮಾಡುತ್ತಾರೆ. ಅನೇಕರು ಫೋನ್‌ ಖರೀದಿಸುವಾಗ ಬೆಲೆಯ ಜೊತೆಗೆ ಫೋನಿನ ಕ್ಯಾಮೆರಾ, ಬ್ಯಾಟರಿ ಹಾಗೂ ಕಾರ್ಯ ವೈಖರಿಯನ್ನು ಗಮನಿಸುತ್ತಾರೆ. ಅಂತೆಯೇ ಮತ್ತೆ ಕೆಲವರು ಡಿಸೈನ್‌, ಸ್ಕ್ರೀನ್‌ ಗಾತ್ರ, ಫೋನಿನ ತೂಕ ಗಳಂತಹ ಅಂಶಗಳನ್ನು ಗಮನಿಸುತ್ತಾರೆ.

ಹೌದು, ಕೆಲವು ಗ್ರಾಹಕರು ಫೋನ್‌ ಖರೀದಿಸುವಾಗ ಫೋನಿನ ತೂಕದ ಬಗ್ಗೆ ಹೆಚ್ಚು ಗಮನಿಸುತ್ತಾರೆ. ಸಾಮಾನ್ಯವಾಗಿ ಹೆಚ್ಚು ತೂಕ ಹೊಂದಿರುವ ಫೋನ್‌ಗಳನ್ನು ಖರೀದಿಸಲು ಹಿಂದೆಟು ಹಾಕುತ್ತಾರೆ. ಕೈಯಲ್ಲಿ ಹಗುರ ಎನಿಸುವ ಹಾಗೂ ಖರೀದಿ ಮಾಡುವ ಗ್ರಾಹಕರ ಜೇಬಿಗೂ ಭಾರ ಎನಿಸದ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಈ ಲೇಖನದಲ್ಲಿ ಕಡಿಮೆ ತೂಕದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಈ ಸ್ಮಾರ್ಟ್‌ಫೋನ್‌ಗಳು ನಿಮ್ಮ ಜೇಬಿಗೂ ಭಾರವಿಲ್ಲ, ಕೈಯಲ್ಲಿಯೂ ತುಂಬಾ ಹಗುರ!

ರಿಯಲ್‌ಮಿ ನಾರ್ಜೋ N53 ಫೋನ್‌ - 182ಗ್ರಾಂ ತೂಕ : ಈ ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಹಗುರ ಎನಿಸಲಿದೆ. ಹಾಗೆಯೇ ಈ ಫೋನ್‌ 6.74 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಆಕ್ಟಾ-ಕೋರ್ ಯುನಿಸೊಕ್ T612 SoC ಪ್ರೊಸೆಸರ್ ವೇಗವನ್ನು ಇದು ಪಡೆದುಕೊಂಡಿದ್ದು, ಇದು ಆಂಡ್ರಾಯ್ಡ್‌ 13 ಸಪೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನಿನ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಆಗಿದೆ.

ಮೊಟೊ G13 ಸ್ಮಾರ್ಟ್‌ಫೋನ್ - 184.25ಗ್ರಾಂ ತೂಕ : ಈ ಫೋನ್‌ 6.5 ಇಂಚಿನ IPS LCD ಹೆಚ್‌ಡಿ+ ರೆಸಲ್ಯೂಶನ್‌ ಡಿಸ್‌ಪ್ಲೇ ಪಡೆದಿದ್ದು, ಜೊತೆಗೆ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ನಲ್ಲಿ ರನ್ ಆಗುತ್ತದೆ. ಇದರೊಂದಿಗೆ ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 50 ಮೆಗಾ ಪಿಕ್ಸೆಲ್ ಪಡೆದಿದೆ. ಅಲ್ಲದೇ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ.

ವಿವೋ Y02 ಫೋನ್‌ - 186ಗ್ರಾಂ ತೂಕ : ವಿವೋ ಸಂಸ್ಥೆಯ ಈ ಫೋನ್ 6.51 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಡಿಸ್‌ಪ್ಲೇಯು 404 ppi ಪಿಕ್ಸೆಲ್ ಸಾಂದ್ರತೆ ಹಾಗೂ 2400 x 1080 ಪಿಕ್ಸೆಲ್‌ಗಳ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನು ಈ ಫೋನ್ ಮೀಡಿಯಾಟೆಕ್‌ ಹಿಲಿಯೋ P22 ಚಿಪ್‌ಸೆಟ್‌ ಪ್ರೊಸೆಸರ್‌ ಬಲ ಪಡೆದಿದೆ. ಜೊತೆಗೆ ಸಿಂಗಲ್‌ ರಿಯರ್‌ ಕ್ಯಾಮೆರಾ ರಚನೆ ಒಳಗೊಂಡಿದ್ದು, ಅದು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಸೆಲ್ಫಿ ಕ್ಯಾಮೆರಾ 5 ಮೆಗಾ ಪಿಕ್ಸಲ್‌ ಆಗಿದೆ.

ರೆಡ್ಮಿ 10A ಸ್ಮಾರ್ಟ್‌ಫೊನ್‌ - 194ಗ್ರಾಂ ತೂಕ : ರೆಡ್ಮಿ ಕಂಪನಿಯ ಈ ಸ್ಮಾರ್ಟ್‌ಫೋನ್‌ 6.53 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಹಾಗೆಯೇ ಈ ಫೋನ್ ಮೀಡಿಯಾ ಟೆಕ್‌ ಹಿಲಿಯೋ G25SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೇ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಈ ಫೋನ್‌ 3GB + 32GB ಮತ್ತು 4GB + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಪಡೆದುಕೊಂಡಿದೆ. ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ.

Best Mobiles in India

English summary
light weight Phones under Rs 10000 in India. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+