Subscribe to Gizbot

ಮ್ಯಾಕ್ಸ್‌ ಮೊಬೈಲ್‌ನಿಂದ 4400mAh ಬ್ಯಾಟರಿ ಫೋನ್‌ ಬಿಡುಗಡೆ

Posted By:

ಫೀಚರ್‌ ಫೋನಲ್ಲಿ ಶಕ್ತಿಶಾಲಿ ಬ್ಯಾಟರಿ ಇರುವ ‌ಫೋನ್‌ ಖರೀದಿಸಬೇಕು ಎಂದು ಯೋಚನೆ ಮಾಡಿದವರಿಗಾಗಿ ಮ್ಯಾಕ್ಸ್ ಮೊಬೈಲ್‌ ಹೊಸ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.4400mAh ಬ್ಯಾಟರಿ ಇರುವ ಡ್ಯುಯಲ್‌ ಸಿಮ್‌ ಫೋನನ್ನು ಮ್ಯಾಕ್ಸ್‌ ಬಿಡುಗಡೆ ಮಾಡಿದೆ.

ನವದೆಹಲಿಯಲ್ಲಿ ನಡೆಯುತ್ತಿರುವ ಟೆಲಿಕಾಂ ಪದರ್ಶನದಲ್ಲಿ ದೂರ ಸಂಪರ್ಕ ಸಚಿವ ಕಪಿಲ್‌ ಸಿಬಲ್‌ ಈ ಫೀಚರ್‌ ಫೋನನ್ನು ಬಿಡುಗಡೆ ಮಾಡಿದ್ದಾರೆ. ಗ್ರಾಮೀಣ ಭಾರತದ ಜನರಿಗೆ ಕಡಿಮೆ ಬೆಲೆಯಲ್ಲಿ ಫೋನ್‌ ವಿತರಿಸುವ ಉದ್ದೇಶದಿಂದ ಈ ಫೋನ್‌ ಪರಿಚಯಿಸುತ್ತಿದ್ದೇವೆ ಎಂದು ಮ್ಯಾಕ್ಸ್‌ ಮೊಬೈಲ್‌ನ ಸಿಇಒ ಅಜಯ್‌ ಅಗರ್‌ವಾಲ್‌ ಹೇಳಿದ್ದಾರೆ.

ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಮ್ಯಾಕ್ಸ್‌ ಮೊಬೈಲ್‌ನಿಂದ 4400mAh ಬ್ಯಾಟರಿ ಫೋನ್‌ ಬಿಡುಗಡೆ

ಮ್ಯಾಕ್ಸ್‌ ಎಂಎಕ್ಸ್‌ 100 ಫೋನಿಗೆ 1,932 ಬೆಲೆಯನ್ನು ಕಂಪೆನಿ ನಿಗದಿ ಮಾಡಿದೆ.ಫೀಚರ್‌ ಫೋನ್‌, 4400mAh ಬ್ಯಾಟರಿ ವಿಜಿಎ ಕ್ಯಾಮೆರಾ,ಎಲ್‌ಇಡಿ, ಟಾರ್ಚ್‌‌,ಬ್ಲೂಟೂತ್‌‌‌,ಜಿಪಿಆರ್‌ಎಸ್‌‌, 16GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: ನೋಕಿಯಾದ ಆರು ಸಾವಿರದೊಳಗಿರುವ ಹತ್ತು ಫೀಚರ್‌ ಫೋನ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot