ಮೀಝು ಯು10 ಮತ್ತು ಯು20: ಹೊಸ ಸ್ಮಾರ್ಟ್ ಫೋನಿನಲ್ಲಿರುವ 6 ಅರ್ಹ ಬದಲಾವಣೆಗಳು.

|

ಶಿಯೋಮಿಯ ಹೆಜ್ಜೆಯಲ್ಲೇ ಸಾಗುತ್ತಿರುವ ಮೀಝು ಕಂಪನಿ ಹಲವು ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುತ್ತಿದೆ. ಮೀಝು ಯು10 ಮತ್ತು ಮೀಝು ಯು20 ಹೊಸದಾಗಿ ಬರಲಿರುವ ಫೋನುಗಳು.

ಮೀಝು ಯು10 ಮತ್ತು ಯು20: ಹೊಸ ಸ್ಮಾರ್ಟ್ ಫೋನಿನಲ್ಲಿರುವ 6 ಅರ್ಹ ಬದಲಾವಣೆಗಳು.

ಈ ಎರಡೂ ಹೊಸ ಸ್ಮಾರ್ಟ್ ಫೋನುಗಳು ಕಂಪನಿಯ ಬ್ಲೂಚಾರ್ಮ್ ಸರಣಿಯ ಫೋನುಗಳು, ಎರಡರಲ್ಲೂ ಮೆಟಲ್ ಫ್ರೇಮ್ ಮತ್ತು ಹಿಂಬದಿ ಹಾಗೂ ಮುಂಬದಿಯಲ್ಲಿ ಗಾಜು ಇರಲಿದೆ.

ಓದಿರಿ: ರಿಲಯನ್ಸ್ ಜಿಯೋ ಮತ್ತು ಏರ್ ಟೆಲ್ 4ಜಿ ನಡುವಿನ ಬೆಚ್ಚಿಬೀಳಿಸುವ 7 ವ್ಯತ್ಯಾಸಗಳು.

ಹೆಸರೇ ಸೂಚಿಸುವಂತೆ ಮೀಝು ಯು10 ಕಡಿಮೆ ಆವೃತ್ತಿಯ ಫೋನ್. ಎರಡೂ ಸ್ಮಾರ್ಟ್ ಫೋನುಗಳು $200 ಗಿಂತ ಕಡಿಮೆಯದ್ದಾಗಿವೆ.

ಓದಿರಿ: 90 ದಿನ ಉಚಿತ ಅನ್‌ಲಿಮಿಟೆಡ್‌ 4G ಡಾಟಾ ಆಫರ್ ನೀಡುವ 'ಮೈಫೈ ಡಿವೈಸ್‌'

ಈ ಫೋನುಗಳ ಗುಣವೈಶಿಷ್ಟ್ಯಗಳು, ಲಭ್ಯವಾಗುವ ದಿನಾಂಕ, ಬೆಲೆಯ ಬಗ್ಗೆ ತಿಳಿಯಲು ಕೆಳಗಿನ ಚಿತ್ರಗಳತ್ತ ಒಮ್ಮೆ ಗಮನಹರಿಸಿ.

ವಿನ್ಯಾಸ ಮತ್ತು ಪರದೆ.

ವಿನ್ಯಾಸ ಮತ್ತು ಪರದೆ.

ಮೊದಲೇ ಹೇಳಿದಂತೆ, ಎರಡೂ ಸ್ಮಾರ್ಟ್ ಫೋನುಗಳಲ್ಲಿ ಮೆಟಲ್ ಫ್ರೇಮ್ ಮತ್ತು ಹಿಂಬದಿ ಹಾಗೂ ಮುಂಬದಿಯಲ್ಲಿ ಗಾಜು ಇರಲಿದೆ. ಮೀಝು ಯು10ರಲ್ಲಿ 5 ಇಂಚಿನ ಪರದೆಯಿದೆ, ಕಂಪನಿಯು ಈ ಪರದೆಯ ರೆಸಲ್ಯೂಷನ್ ಅನ್ನು ತಿಳಿಸಿಲ್ಲ. ಮೀಝು ಯು20 ಫೋನಿನಲ್ಲಿ 1080ಪಿಕ್ಸೆಲ್ಲಿನ 5.5 ಇಂಚಿನ ಪರದೆಯಿದೆ.

ಜೊತೆಗೆ, ಪರದೆಯ ಕೆಳಗೆ ಬೆರಳಚ್ಚು ಸಂವೇದಕವಿದೆ, ಹೋಮ್ ಬಟನ್ನಿನಲ್ಲೇ ಕಂಪನಿಯ 'ಎಮ್.ಟಚ್ 2.1' ಅಡಕವಾಗಿದೆ.

ಎರಡೂ ಸ್ಮಾರ್ಟ್ ಫೋನುಗಳಲ್ಲಿ ಒಂದೇ ಚಿಪ್ ಸೆಟ್.

ಎರಡೂ ಸ್ಮಾರ್ಟ್ ಫೋನುಗಳಲ್ಲಿ ಒಂದೇ ಚಿಪ್ ಸೆಟ್.

ಎರಡೂ ಸ್ಮಾರ್ಟ್ ಫೋನುಗಳಲ್ಲಿ ಆಕ್ಟಾ ಕೋರ್ ಚಿಪ್ ಸೆಟ್ ಇದೆ. ಕಂಪನಿಯು ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿಸಿಲ್ಲ. ಎರಡೂ ಫೋನುಗಳು ಎರಡು ಆವೃತ್ತಿಯಲ್ಲಿ ಬರಲಿದೆ, ಒಂದರಲ್ಲಿ 2ಜಿಬಿ ರ್ಯಾಮ್/16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದ್ದರೆ ಮತ್ತೊಂದರಲ್ಲಿ 3ಜಿಬಿ ರ್ಯಾಮ್/32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುತ್ತದೆ.

ಒಂದೇ ರೀತಿಯ ಕ್ಯಾಮೆರ.

ಒಂದೇ ರೀತಿಯ ಕ್ಯಾಮೆರ.

ಮೀಝು ಯು10 ಮತ್ತು ಮೀಝು ಯು20ರಲ್ಲಿ ಪಿ.ಡಿ.ಎ.ಎಫ್ ಮತ್ತು ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಇದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ಲಿನ ಕ್ಯಾಮೆರ ಇದೆ.

ಸಂಪರ್ಕದ ಆಯ್ಕೆಗಳು.

ಸಂಪರ್ಕದ ಆಯ್ಕೆಗಳು.

ಎರಡೂ ಫೋನುಗಳಲ್ಲಿರುವ ಸಂಪರ್ಕದ ಆಯ್ಕೆಗಳು ಒಂದೇ. ಎರಡರಲ್ಲೂ 4ಜಿ ಎಲ್.ಟಿ.ಇ, 3ಜಿ, ಡುಯಲ್ ಹೈಬ್ರಿಡ್ ಸಿಮ್, ವೈಫೈ, ಬ್ಲೂಟೂಥ್, ಜಿಪಿಎಸ್ ಮತ್ತು ಮೈಕ್ರೋ ಯು.ಎಸ್.ಬಿ ಪೋರ್ಟ್ ಇದೆ.

ಮೀಝು ಯು20ಯಲ್ಲಿ ದೊಡ್ಡ ಬ್ಯಾಟರಿ.

ಮೀಝು ಯು20ಯಲ್ಲಿ ದೊಡ್ಡ ಬ್ಯಾಟರಿ.

ಮೀಝು ಯು10ನಲ್ಲಿ 2,760 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದ್ದರೆ, ಮೀಝು ಯು20ಯಲ್ಲಿ 3,260ಎಂ.ಎ.ಹೆಚ್ ಸಾಮರ್ಥ್ಯದ ಬ್ಟಾಟರಿ ಇದೆ.

ಎರಡರಲ್ಲೂ ಕಂಪನಿಯೇ ತಯಾರಿಸಿರುವ ಫ್ಲೈಮ್ ಯುಐ ಇರುವ ಯುನ್ ಒ.ಎಸ್ ಇದೆ.

ಬೆಲೆ ಮತ್ತು ಲಭ್ಯತೆ.

ಬೆಲೆ ಮತ್ತು ಲಭ್ಯತೆ.

2ಜಿಬಿ ರ್ಯಾಮ್/16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಮೀಝು ಯು10 ಫೋನಿನ ಬೆಲೆ ಸಿ.ಎನ್.ವೈ 999 (ಅಂದಾಜು 10,000 ರುಪಾಯಿ), 3ಜಿಬಿ ರ್ಯಾಮ್/32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಮೀಝು ಯು10ರ ಬೆಲೆ ಸಿ.ಎನ್.ವೈ 1,119 (ಅಂದಾಜು 11,500 ರುಪಾಯಿ). ಚೀನಾದಲ್ಲಿ ಮೀಝು ಆನ್ ಲೈನ್ ಸ್ಟೋರ್ ನಲ್ಲಿ ಸೆಪ್ಟೆಂಬರ್ 18ರಿಂದ ಮೀಝು ಯು10 ಲಭ್ಯವಾಗಲಿದೆ.

2ಜಿಬಿ ರ್ಯಾಮ್/16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಮೀಝು ಯು20 ಫೋನಿನ ಬೆಲೆ ಸಿ.ಎನ್.ವೈ 1,099 (ಅಂದಾಜು 11,200 ರುಪಾಯಿ), 3ಜಿಬಿ ರ್ಯಾಮ್/32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಮೀಝು ಯು20ರ ಬೆಲೆ ಸಿ.ಎನ್.ವೈ 1,299 (ಅಂದಾಜು 13,500 ರುಪಾಯಿ). ಚೀನಾದಲ್ಲಿ ಮೀಝು ಆನ್ ಲೈನ್ ಸ್ಟೋರ್ ನಲ್ಲಿ ಆಗಷ್ಟ್ 28ರಿಂದ ಮೀಝು ಯು10 ಲಭ್ಯವಾಗಲಿದೆ.

Best Mobiles in India

English summary
Following the footsteps in Xiaomi, Meizu is also launching a good number of smartphones these days. And, the latest ones to arrive are the Meizu U10 and the Meizu U20.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X