90 ದಿನ ಉಚಿತ ಅನ್‌ಲಿಮಿಟೆಡ್‌ 4G ಡಾಟಾ ಆಫರ್ ನೀಡುವ 'ಮೈಫೈ ಡಿವೈಸ್‌'

By Suneel
|

ಕಳೆದ 2 ವಾರಗಳಿಂದ ಪ್ರತಿಯೊಬ್ಬರು ಸಹ 'ರಿಲಾಯನ್ಸ್ ಜಿಯೋ 4G ಸೇವೆ' ಬಗ್ಗೆ, 90 ದಿನಗಳ ಅನ್‌ಲಿಮಿಟೆಡ್‌ ಪ್ಲಾನ್‌ಗಳು ಮತ್ತು ಯಾವ ಸ್ಮಾರ್ಟ್‌ಫೋನ್ ರಿಲಾಯನ್ಸ್ ಜಿಯೋ ಸಿಮ್ ಸಪೋರ್ಟ್‌ ಮಾಡುತ್ತದೆ ಎಂಬುದರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ.

90 ದಿನ ಉಚಿತ ಅನ್‌ಲಿಮಿಟೆಡ್‌ 4G ಡಾಟಾ ಆಫರ್ ನೀಡುವ 'ಮೈಫೈ ಡಿವೈಸ್‌'

ನಿಮ್ಮ ಏರಿಯಾದಲ್ಲಿ 'ರಿಲಾಯನ್ಸ್ ಜಿಯೋ' ಸಿಮ್ ಸ್ಟೋರ್‌ ಪತ್ತೆ ಹೇಗೆ?

ಇದೇ ಸಂದರ್ಭದಲ್ಲಿ ರಿಲಾಯನ್ಸ್ ತನ್ನ ಗ್ರಾಹಕರ ಆಸಕ್ತಿ ಮೇರೆಗೆ ಜಿಯೋಫೈ ಮೈಫೈ ಡಿವೈಸ್‌ ಅನ್ನು ಬೆಲೆ ರೂ.2,899 ಕ್ಕೆ ಲಾಂಚ್‌ ಮಾಡಿದೆ. ಜಿಯೋಫೈ ಮೈಫೈ ಡಿವೈಸ್‌ನ ಅತ್ಯುತ್ತಮ ಉಪಯೋಗವೆಂದರೆ ಪ್ರಿವೀವ್‌ ಆಫರ್‌ನ ಅನ್‌ಲಿಮಿಟೆಡ್‌ 4G ಡಾಟಾ, ಅನ್‌ಲಿಮಿಟೆಡ್‌ ಕರೆ ಮತ್ತು ಅನ್‌ಲಿಮಿಟೆಡ್‌ ಮೆಸೇಜ್‌ ಆಫರ್‌ ಅನ್ನು 90 ದಿನಗಳವರೆಗೆ ಲೈಫ್‌ ಫೋನ್ಸ್‌ ರೀತಿಯಲ್ಲಿ ನೀಡುತ್ತದೆ.

ರಿಲಾಯನ್ಸ್ ಜಿಯೋಗೆ ಸ್ಪರ್ಧಿಯಾಗಿ ಬಿಎಸ್‌ಎನ್‌ಎಲ್‌ನಿಂದ ಅನ್‌ಲಿಮಿಟೆಡ್‌ 3G ಡಾಟಾ

ವಿಶೇಷವೆಂದರೆ ಜಿಯೋಫೈ ಮೈಫೈ ಡಿವೈಸ್‌ ಗರಿಷ್ಟ 31 ಡಿವೈಸ್‌ಗಳಿಗೆ ಒಂದೇ ಸಮಯದಲ್ಲಿ ಸಪೋರ್ಟ್‌ ಮಾಡುತ್ತದೆ. ಮೈಫೈ ಡಿವೈಸ್‌ ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ಗಳಲ್ಲಿ ಖರೀದಿಸಲು ಲಭ್ಯವಿದ್ದು, ಜಿಯೋ 4G ಸಿಮ್‌ ಕಾರ್ಡ್‌ ರೀತಿಯಲ್ಲಿ ಮಿನಿ ಎಕ್ಸ್‌ಪ್ರೆಸ್‌ ಸ್ಟೋರ್‌ ಆಗಿದೆ. ಜಿಯೋಫೈ ಮೈಫೈ ಡಿವೈಸ್‌ ಫೀಚರ್‌, ಬೆಲೆ ಮತ್ತು ಇತರೆ ಮಾಹಿತಿ ತಿಳಿಯಲು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಪೋರ್ಟೆಬಲ್‌ ಹಾಟ್‌ಸ್ಪಾಟ್‌ ಆಗಿ ಉಪಯೋಗಿಸಿ

ಪೋರ್ಟೆಬಲ್‌ ಹಾಟ್‌ಸ್ಪಾಟ್‌ ಆಗಿ ಉಪಯೋಗಿಸಿ

ಜಿಯೋಫೈ ಮೈಫೈ ಡಿವೈಸ್‌ ಅನ್ನು ವೈಫೈ ಹಾಟ್‌ಸ್ಪಾಟ್‌ ಆಗಿ ಉಪಯೋಗಿಸಿ. ಇದು 10 ವೈಫೈ ಡಿವೈಸ್‌ಗಳ ಸಾಮರ್ಥ್ಯ ಹೊಂದಿದೆ ಮತ್ತ ಒಂದು USB ಯಲ್ಲಿ.

ಉತ್ತಮ ವಿನ್ಯಾಸ ಮತ್ತು ನಿರ್ವಹಿಸಲು ಸುಲಭ

ಉತ್ತಮ ವಿನ್ಯಾಸ ಮತ್ತು ನಿರ್ವಹಿಸಲು ಸುಲಭ

ಜಿಯೋಫೈ ಮೈಫೈ ಉತ್ತಮ ವಿನ್ಯಾಸ ಮತ್ತು ಹಗುರ ತೂಕವಾಗಿದ್ದು, ಹೋದಲೆಲ್ಲಾ ತೆಗೆದುಕೊಂಡು ಹೋಗಬಹುದು. ಇನ್‌ಸ್ಟಾಲ್‌ ಮಾಡಲು ಮತ್ತು ಜಿಯೋಜಾಯಿನ್‌ ಆಪ್‌ನಲ್ಲಿ ಎನ್‌ರೋಲ್‌ ಮಾಡಲು ಸುಲಭ.

 ಜಿಯೋಫೈ ಡಿವೈಸ್‌ ಆಕ್ಟಿವೇಟ್ ಸುಲಭ

ಜಿಯೋಫೈ ಡಿವೈಸ್‌ ಆಕ್ಟಿವೇಟ್ ಸುಲಭ

ಜಿಯೋಫೈ ಡಿವೈಸ್‌ ಅನ್ನು ನಿಮ್ಮ ಹತ್ತಿರದ ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ನಲ್ಲಿ KYC ಡಾಕ್ಯುಮೆಂಟ್ ಮತ್ತು ಪಾಸ್‌ಪೋರ್ಟ್‌ ಸೈಜ್‌ ಫೋಟೋ ನೀಡಿ ಖರೀದಿಸಬಹುದು. ಜಿಯೋಫೈ ಡಿವೈಸ್‌ ಜೊತೆಗೆ ಜಿಯೋ 4G ಸಿಮ್‌ ಅನ್ನು ಉಚಿತವಾಗಿ ಪಡೆಯುತ್ತೀರಿ. ನಂತರ 1800-890-1977 ನಂಬರ್‌ಗೆ ರಿಜಿಸ್ಟರ್‌ ಮೊಬೈಲ್‌ ನಂಬರ್‌ನಿಂದ ಕರೆ ಮಾಡಿ ಆಕ್ಟಿವೇಟ್‌ ಮಾಡಬಹುದು.

ಡಾಟಾ ಮತ್ತು ಕರೆಗಳ ಎಂಜಾಯ್‌

ಡಾಟಾ ಮತ್ತು ಕರೆಗಳ ಎಂಜಾಯ್‌

ಮೈಫೈ ಡಿವೈಸ್‌ನಿಂದ 90 ದಿನಗಳು HD ವೀಡಿಯೊ, ವಾಯ್ಸ್‌ ಕರೆ ಮತ್ತು ಮೆಸೇಜ್‌ ಸೇವೆಯನ್ನು ಅನ್‌ಲಿಮಿಡೆಟ್ ಆಗಿ ಪಡೆಯಬಹುದು. ಜಿಯೋ ಸಿಮ್‌ ಆಕ್ಟಿವೇಟ್‌ ಆದ ನಂತರ ಡಾಟಾ ಸೇವೆ ಪಡೆಯುತ್ತೀರಿ. ಆದರೆ ಕರೆ ಸೇವೆಗಾಗಿ ಜಿಯೋಜಾಯಿನ್‌ ಆಪ್‌ಗೆ ಜಾಯಿನ್‌ ಆಗಬೇಕು.

ಆಕರ್ಷಕ ಬ್ಯಾಟರಿ ಸಾಮರ್ಥ್ಯ

ಆಕರ್ಷಕ ಬ್ಯಾಟರಿ ಸಾಮರ್ಥ್ಯ

ರಿಲಾಯನ್ಸ್ ಜಿಯೋಫೈ ಡಿವೈಸ್‌ ಇನ್‌ಬಿಲ್ಟ್‌ 2,300mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ 6 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ.

HP ಲ್ಯಾಪ್‌ಟಾಪ್‌ ಬಳಕೆದಾರರಿಗೆ ವಿಶೇಷವಲ್ಲ

HP ಲ್ಯಾಪ್‌ಟಾಪ್‌ ಬಳಕೆದಾರರಿಗೆ ವಿಶೇಷವಲ್ಲ

ಈ ಹಿಂದೆ ಮೈಫೈ ಡಿವೈಸ್‌ HP ಲ್ಯಾಪ್‌ಟಾಪ್‌ ಬಳಕೆದಾರರಿಗಾಗೆ ಇತ್ತು. ಆದರೆ ಪ್ರಸ್ತುತದಲ್ಲಿ ಈ ಡಿವೈಸ್‌ ರಿಲಾಯನ್ಸ್‌ ಸ್ಟೋರ್‌ಗಳಿಗೆ ಭೇಟಿ ನೀಡಿದ ಎಲ್ಲರಿಗೂ ಲಭ್ಯವಿದೆ.

Best Mobiles in India

Read more about:
English summary
Reliance JioFi: Get Free 4G Data and Calls for 90 Days with the Mi Fi Device That Costs Rs 2,899. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X