ಈ ಫೋನಿನಲ್ಲಿ ಎರಡು ಭಾಗದಲ್ಲಿ ಸೆಲ್ಪಿ ತೆಗೆಯಬಹುದಂತೆ..!! ವಿಚಿತ್ರ..!!
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮಿಜು, ಡ್ಯುಯಲ್ ಕ್ಯಾಮೆರಾದೊಂದಿಗೆ ತನ್ನ ಮಿಜು ಪ್ರೋ 7 ಸ್ಮಾರ್ಟ್‌ಫೋನಿನಲ್ಲಿ ಸೆಕೆಂಡರಿ ಡಿಸ್‌ಪ್ಲೇಯನ್ನು ಅಳವಡಿಸಿದೆ. ಇದು ಸ್ಮಾರ್ಟ್‌ಫೋನ್ ತಯಾರಿಕೆಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹೆಜ್ಜೆ
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಗೆ ಮಿಜು ಹೊಸ ಭಾಷ್ಯ ಬರೆದಿದೆ. ಡ್ಯುಯಲ್ ಕ್ಯಾಮೆರಾ ಮಾದರಿಯಲ್ಲಿಯೇ ಡ್ಯುಯಲ್ ಸ್ಕ್ರಿನ್ ಹೊಂದಿರುವ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಅಧ್ಯಾಯ ಶುರು ಮಾಡಿದೆ.

ಓದಿರಿ: 4G ಸ್ಮಾರ್ಟ್‌ಫೋನ್ ಇದ್ಯಾ..? ಹಾಗಿದ್ರೆ ಜಿಯೋ ಬೇಡವೇ ಬೇಡ.!!
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮಿಜು, ಡ್ಯುಯಲ್ ಕ್ಯಾಮೆರಾದೊಂದಿಗೆ ತನ್ನ ಮಿಜು ಪ್ರೋ 7 ಸ್ಮಾರ್ಟ್‌ಫೋನಿನಲ್ಲಿ ಸೆಕೆಂಡರಿ ಡಿಸ್‌ಪ್ಲೇಯನ್ನು ಅಳವಡಿಸಿದೆ. ಇದು ಸ್ಮಾರ್ಟ್‌ಫೋನ್ ತಯಾರಿಕೆಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.

ಹಿಂಭಾಗದಲ್ಲೂ ಸ್ಕ್ರಿನ್:
5.2 ಇಂಚಿನ FHD ಡಿಸ್‌ಪ್ಲೇ ಹೊಂದಿರುವ ಮಿಜು ಪ್ರೋ 7 ಸ್ಮಾರ್ಟ್‌ಫೋನಿನಲ್ಲಿ ಸುಪರ್ ಅಮೊಲೈಡ್ ಡಿಸ್‌ಪ್ಲೇ ಕಾಣಬಹುದಾಗಿದ್ದು, ಇದಲ್ಲದೇ ಪೋನಿನ ಹಿಂಭಾಗದಲ್ಲಿ 1.9 ಇಂಚಿನ ಮತ್ತೊಂದು ಅಮೊಲೈಡ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ಈ ಫೋನಿನ ಹಿಂಭಾಗದಲ್ಲೂ ಸೆಲ್ಪಿ:
ಸದ್ಯ ಹೆಚ್ಚಿನ ಜನರು ಸೆಲ್ಪಿ ಕ್ರೆಜ್ ಹತ್ತಿಸಿಕೊಂಡಿದ್ದಾರೆ ಅವರಿಗಾಗಿಯೇ ಈ ಫೋನ್ ತಯಾರಿಸಲಾಗಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ. ಕಾರಣ ಈ ಫೋನಿನ ಎರಡು ಕಡೆಯಲ್ಲಿಯೂ ನೀವು ಸೆಲ್ಫಿ ತೆಗೆಯಬಹುದು. ಇದಕ್ಕಾಗಿಯೇ ಹಿಂಭಾಗದಲ್ಲಿಯೂ ಪರದೆಯನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ:
ಈ ಫೋನಿನ ಹಿಂಭಾಗದಲ್ಲಿ 12 MP + 12MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ LED ಫ್ಲಾಷ್ ಲೈಟ್ ಇದ್ದು, ಅಲ್ಲದೆ ಮುಂಭಾಗದಲ್ಲಿ 16 MP ಕ್ಯಾಮೆರಾ ನೀಡಲಾಗಿದೆ.

6GB RAM:
ಮಿಜು ಪ್ರೋ 7 ಸ್ಮಾರ್ಟ್‌ಫೋನಿನಲ್ಲಿ 6GB RAM ಕಾಣಬಹುದಾಗಿದೆ. ಅಲ್ಲದೇ 3000 mAh ಬ್ಯಾಟರಿಯನ್ನು ನೀಡಲಾಗಿದ್ದು, ಕ್ವೀಕ್ ಚಾರ್ಜರ್ ಸಹ ಲಭ್ಯವಿದೆ. 64 GB ಮತ್ತು 128GB ಆವೃತ್ತಿಯಲ್ಲಿ ಈ ಫೋನ್ ದೊರೆಯುತ್ತಿದೆ.


Click it and Unblock the Notifications