ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ ವಿಶ್ವದ ಮೊದಲ ಬಟನ್ ರಹಿತ ಸ್ಮಾರ್ಟ್‌ಫೋನ್.!

|

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಚೀನಾ ಕಂಪನಿಗಳ ಅಬ್ಬರ ಜೋರಾಗಿಯೇ ಇದ್ದು, ಈ ಸಾಲಿಗೆ ಮತ್ತೊಂದು ಚೀನಾ ಮೂಲದ ಮೊಬೈಲ್ ಕಂಪನಿ ಸೇರಲಿದೆ. ಹೌದು, 'ಮೀಜು ಜೀರೊ' ಎಂಬ ನೂತನ ಮೊಬೈಲ್ ಕಂಪೆನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಆಗಿಯೇ ರಂಗಪ್ರವೇಶ ಮಾಡಲು ಸಜ್ಜಾಗಿದೆ. ಸ್ಮಾರ್ಟ್‌ಫೋನ್ ಪ್ರಿಯರನ್ನು ತನ್ನತ್ತ ಸೆಳೆಯಲು ಹೊಚ್ಚ ಹೊಸ ಲುಕ್ ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಾಗಿದೆ.

ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ ವಿಶ್ವದ ಮೊದಲ ಬಟನ್ ರಹಿತ ಸ್ಮಾರ್ಟ್‌ಫೋನ್.!

ಮಾರುಕಟ್ಟೆಗೆ ಹೊಸದಾಗಿ ಬರುತ್ತಿರುವ ಮೀಜು ಜೀರೊ ಮೊಟ್ಟ ಮೊದಲ ಬಾರಿಗೆ ಯಾವುದೇ ಬಟನ್ ಮತ್ತು ಪೋರ್ಟ್‌ ಹೊಂದಿರದ ಸ್ಮಾರ್ಟ್‌ಫೋನ್‌ವೊಂದನ್ನು ಗ್ರಾಹಕರಿಗೆ ಪರಿಚಯಿಸುವ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆಯಲು ತಯಾರಾಗಿ ಬರುತ್ತಿದೆ. ಮೀಜು ಜೀರೊನ ಈ ಸ್ಮಾರ್ಟ್‌ಪೋನ್ ಪವರ್ ಬಟನ್, ವ್ಯಾಲ್ಯೂಮ್ ಬಟನ್, ಆಡಿಯೋ ಜಾಕ್, ಸ್ಪೀಕರ್‌ ರಂಧ್ರಗಳು ಇವ್ಯಾವವೂ ಹೊಂದಿಲ್ಲ ಎಂಬುದು ಮೊಬೈಲ್ ಮಾರುಕಟ್ಟೆಯಲ್ಲಿ ಗುಲ್ಲೆಬ್ಬಿಸಿದೆ.

ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ ವಿಶ್ವದ ಮೊದಲ ಬಟನ್ ರಹಿತ ಸ್ಮಾರ್ಟ್‌ಫೋನ್.!

ಮೊಬೈಲ್ ಲೋಕದಲ್ಲಿ ಇಂತಹದೊಂದು ಹೊಸ ಪ್ರಯತ್ನವನ್ನು ಮೀಜು ಜೀರೊ ಕಂಪನಿ ಮಾಡುತ್ತಿದ್ದು, ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಈ ವರ್ಷದ ಮೊದಲಾರಂಭದಲ್ಲಿಯೇ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೇ, ಯಾವುದೇ ಬಟನ್ಸ್ ಇಲ್ಲದೇ ಈ ಸ್ಮಾರ್ಟ್‌ಫೋನ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಆ ಸ್ಮಾರ್ಟ್‌ಫೋನಿನಲ್ಲಿ ಏನೆಲ್ಲಾ ಹೊಚ್ಚ ಹೊಸ ಫೀಚರ್ಸ್‌ಗಳು ಇರಬಹುದು ಎಂದು ತಿಳಿಯಲು ಸ್ಕ್ರೋಲ್ ಮಾಡಿ ಓದಿ.

ಬಟನ್‌ಗಳಿಲ್ಲದೇ ಹೇಗೆ ಕಾರ್ಯನಿರ್ವಹಿಸುತ್ತದೆ.?

ಬಟನ್‌ಗಳಿಲ್ಲದೇ ಹೇಗೆ ಕಾರ್ಯನಿರ್ವಹಿಸುತ್ತದೆ.?

ಮೀಜು ಜೀರೊ ಕಂಪನಿ ತನ್ನ ಸ್ಮಾರ್ಟ್‌ಫೋನ್‌ಗಳು ಯಾವುದೇ ಬಟನ್ ಇಲ್ಲದೇ ಕಾರ್ಯನಿರ್ವಹಿಸಲು ಯಾವುದೋ ಹೊಸ ತಂತ್ರಜ್ಞಾನವನ್ನೇನೂ ಬಳಸುತ್ತಿಲ್ಲ. ಆದರೆ ಬಟನ್ ರಹಿತವಾಗಿ ಎಲ್ಲ ಕಾರ್ಯಗಳು ಡಿಸ್‌ಪ್ಲೇಯಲ್ಲಿ ನೀಡಿರುವ ಫಿಂಗರ್‌ಸೆನ್ಸಾರ್ ಮೂಲಕ ನಡೆಯುತ್ತವೆ. ವೈಯರ್ ಲೆಸ್‌ ಚಾರ್ಜಿಂಗ್ ವ್ಯೆವಸ್ಥೆ ನೀಡಲಿದ್ದು, ಧ್ವನಿ ಮತ್ತು ಪವರ್ ಬಟನ್‌ಗಳ ಬದಲಾಗಿ ವರ್ಚುಲ್ ಬಟನ್ಸ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ.

ರಚನೆ

ರಚನೆ

ಬಾಹ್ಯವಾಗಿ ಯಾವುದೇ ಬಟನ್ ಗಳಿಲ್ಲದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಮೀಜು ಜೀರೊ ಸ್ಮಾರ್ಟ್‌ಫೋನ್ ಭಾಜನವಾಗುವುದು. ಈ ಸ್ಮಾರ್ಟ್‌ಫೋನ್‌ ಸಂಪೂರ್ಣ ಗ್ಲಾಸಿ ನೋಟವನ್ನು ಹೊಂದಿರಲಿದ್ದು, ಇದರೊಂದಿಗೆ ಸೆರಾಮಿಕ್ ಮಾದರಿಯ ಬಾಹ್ಯರಚನೆ ಹೊಂದಿರುವುದು ಎಂದು ತಿಳಿದು ಬಂದಿದೆ. ಗ್ರಾಹಕರ ಕಣ್ಮನ್ ಸೆಳೆಯುವ ಆಕರ್ಷಕ ಡಿಸೈನ್ ಇರಲಿದೆ. ಇದರೊಂದಿಗೆ ಸಿಮ್ ಬದಲು ಇ-ಸಿಮ್ ಸೌಲಭ್ಯ ಮತ್ತು ಸ್ಪೀಕರ್ ಬದಲಾಗಿ ಡಿಸ್‌ಪ್ಲೇ ನಲ್ಲಿಯೇ 'mಸೌಂಡ್ 2.0' ನೀಡಲಾಗುವುದು ಎನ್ನಲಾಗುತ್ತಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

5.99 ಇಂಚಿನ ಅಂಚು ರಹಿತ OLED ಡಿಸ್‌ಪ್ಲೇಯನ್ನು ಹೊಂದಿರಲಿದ್ದು, 19:5:9 ರ ಅನುಪಾತದೊಂದಿಗೆ 1080 x 2340 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರುವುದು ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಡಿಸ್‌ಪ್ಲೇ ಪ್ರಧಾನ ಪಾತ್ರ ವಹಿಸಲಿದೆ ಏಕೆಂದರೇ ಡಿಸ್‌ಪ್ಲೇನಲ್ಲಿಯೇ ಫಿಂಗರ್ ಸೆನ್ಸಾರ್ ನೀಡಲಾಗುವುದು ಎಂದು ತಿಳಿದು ಬಂದಿದೆ.

ಪ್ರೊಸೆಸರ್

ಪ್ರೊಸೆಸರ್

ಬಟನ್ ರಹಿತ ಮೀಜು ಜೀರೊ ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 845 ಚಿಪ್‌ಸೆಟ್‌ನೊಂದಿಗೆ ಆಕ್ಟಾಕೋರ್ ಪ್ರೊಸೆಸರ್ ಹೊಂದಿರಲಿದ್ದು, ಈ ಸ್ಮಾರ್ಟ್‌ಫೋನ್ ಅಪ್‌ಡೇಟೆಡ್ ಆಂಡ್ರಾಯ್ಡ್ ವರ್ಷನ್ 9.1 ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ. 4/6 GB RAM ಮತ್ತು 64/128 GB ಆಂತರಿಕ ಶೇಖರಣಾ ಸಾಮರ್ಥ್ಯದ ಆಯ್ಕೆಗಳಲ್ಲಿ ಲಭ್ಯ ಆಗಲಿವೆ.

ಕ್ಯಾಮೆರಾ

ಕ್ಯಾಮೆರಾ

ಅಂಚು ರಹಿತ ಸ್ಮಾರ್ಟ್‌ಫೋನ್‌ನಿನ ಹಿಂಭಾಗದಲ್ಲಿ 20 ಮೆಗಾಪಿಕ್ಸಲ್ ಮತ್ತು 12 ಮೆಗಾಪಿಕ್ಸಲ್ ವೈಲ್ಡ್ ಲೆನ್ಸ್ ಸಾಮರ್ಥ್ಯ ಹೊಂದಿರುವ ಎರಡು ಕ್ಯಾಮೆರಾಗಳನ್ನು ನೀಡಲಿದ್ದು, ಸೆಲ್ಫೀ ಪ್ರಿಯರಿಗಾಗಿ ಮುಂಬಾಗದಲ್ಲಿ 20 ಮೆಗಾಪಿಕ್ಸಲ್ ಕ್ಯಾಮೆರಾ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದರೊಟ್ಟಿಗೆ ಎರಡು ಎಲ್‌ಯಿಡಿ ಸಹ ಹೊಂದಿರಲಿದೆ ಎನ್ನಲಾಗುತ್ತಿದೆ.

ಬ್ಯಾಟರಿ

ಬ್ಯಾಟರಿ

ಮೊದಲೆ ಹೇಳಿದಂತೆ ಮೀಜು ಜೀರೊ ಯಾವುದೇ ಪೊರ್ಟ್‌ ಹೊಂದಿರದ ಸ್ಮಾರ್ಟ್‌ಫೋನ್ ಆಗಿರಲಿದ್ದು, ಹೀಗಾಗಿ ಚಾರ್ಜಿಂಗ್‌ಗೆ ಪೊರ್ಟ್ ವ್ಯೆವಸ್ಥೆ ಹೊಂದಿರುವುದಿಲ್ಲ ಬದಲಾಗಿ 18W ನ ವೈಯರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.

ನ್ಯೂ ಸ್ಪೀಕರ್

ನ್ಯೂ ಸ್ಪೀಕರ್

ಮೀಜು ಜೀರೊ ಕಂಪನಿಯ ಸ್ಮಾರ್ಟ್‌ಫೋನ್‌ ಯಾವುದೇ ಸ್ಪೀಕರ್‌ ರಂಧ್ರಗಳನ್ನು ಹೊಂದಿಲ್ಲ ಆದರೂ ನಿಮಗೆ ಸೌಂಡ್ ಕೇಳಿಸಲಿದೆ.! ಹೌದು ಈ ಸ್ಮಾರ್ಟ್‌ಫೋನಿನಲ್ಲಿ mಸೌಂಡ್ 2.0' ಎಂಬ ಹೊಸ ಪ್ರಯತ್ನವನ್ನು ಪರಿಚಯಿಸಲಿದ್ದು, ಡಿಸ್‌ಪ್ಲೇ ಮೂಲಕವೇ ಸೌಂಡ್ ಕೇಳಿಸುವ ವ್ಯೆವಸ್ಥೆ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಇತರೆ ಫೀಚರ್ಸ್

ಇತರೆ ಫೀಚರ್ಸ್

ಹಲವು ವಿಶೇಷಗಳನ್ನು ಒಳಗೊಂಡು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿರುವ ಮೀಜು ಜೀರೊ ಸ್ಮಾರ್ಟ್‌ಫೋನ್‌ ಫಿಂಗರ್ ಸೆನ್ಸಾರ್, ಉತ್ತಮ 5.0 ಬ್ಲೂಟೂತ್, ಜಿಪಿಎಸ್, ಇ-ಸಿಮ್, ಕಂಪಾಸ್ ಮತ್ತು ಲೌಡ್ ಸ್ಪೀಕರ್ ಸೌಲಭ್ಯಗಳನ್ನು ಹೊಂದಿರುವದು ಎಂದು ತಿಳಿದುಬಂದಿದೆ. ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸ ನಿರೀಕ್ಷೆ ಹುಟ್ಟು ಹಾಕಿರುವ ಮೀಜು ಜೀರೊ ಸ್ಮಾರ್ಟ್‌ಫೋನ್ ಈ ವರ್ಷದ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಬರುವುದು ಎಂದು ಹೇಳಲಾಗಿದ್ದು, ಈ ಸ್ಮಾರ್ಟ್‌ಫೋನಿನ ಬೆಲೆಯ ಬಗ್ಗೆ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮೀಜು ಜೀರೊ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಲಾಂಚ್ ಆಗಲಿವೆ ಎನ್ನಲಾಗುತ್ತಿದೆ.

Best Mobiles in India

English summary
Meizu is taking this to the extreme with the Meizu Zero, a device void of buttons and ports.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X