Just In
- 1 hr ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 2 hrs ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 4 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 4 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Movies
ಶ್ಯಾಮನಾಗಿ ಮತ್ತೆ ಬಂದ ಪಲ್ಲಿ ವಿಕ್ರಂ ಸೂರಿಯ ಜರ್ನಿ
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಶಿಯೋಮಿ ಮಿ ಎ3' v/s 'ರಿಯಲ್ ಮಿ 5 ಪ್ರೊ' : ವ್ಯತ್ಯಾಸಗಳೇನು?..ಬೆಲೆ ಎಷ್ಟು?
ಬಹುತೇಕ ಸ್ಮಾರ್ಟ್‌ಫೋನ್ ಕಂಪೆನಿಗಳು ಪ್ರಸ್ತುತ ಮಾರುಕಟ್ಟೆಗೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನೇ ಹೆಚ್ಚಾಗಿ ಲಾಂಚ್ ಮಾಡುತ್ತಿವೆ. ಆ ಪೈಕಿ ಚೀನಾ ಮೂಲಕದ ಕಂಪೆನಿಗಳೆ ಅಧಿಕವಾಗಿವೆ. ಶಿಯೋಮಿ ಅಗಷ್ಟ್ 21ರಂದು 'ಮಿ ಎ3' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಹಾಗೆಯೇ ಅಗಷ್ಟ್ 20ರಂದು ರಿಯಲ್ ಮಿ ಸಂಸ್ಥೆಯು 'ರಿಯಲ್ ಮಿ 5 ಪ್ರೊ' ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಎರಡು ಫೋನ್‌ಗಳ ಫೀಚರ್ಸ್‌ಗಳಲ್ಲಿ ಸಾಮ್ಯತೆ ಇದ್ದು, ನೇರವಾಗಿ ಮಾರುಕಟ್ಟೆಯ ಅಖಾಡಕ್ಕೆ ಇಳಿದಿವೆ.

ಹೌದು, ಶಿಯೋಮಿ ಮತ್ತು ರಿಯಲ್ ಮಿ ಎರಡು ಚೀನಾ ಮೂಲದ ಕಂಪೆನಿಗಳೆ ಆಗಿದ್ದರೂ ಅವುಗಳ ನಡುವೆ ಪೈಪೋಟಿ ಇದೆ. 'ಶಿಯೋಮಿ ಮಿ ಎ3' ಮತ್ತು 'ರಿಯಲ್ ಮಿ 5 ಪ್ರೊ' ಸ್ಮಾರ್ಟ್‌ಫೋನ್‌ಗಳೆರಡು ಬಜೆಟ್ ಬೆಲೆಯಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಆದರೆ ಬಜೆಟ್ ಪ್ರೈಸ್‌ನಲ್ಲಿ 48ಎಂಪಿ ಕ್ಯಾಮೆರಾ ಫೋನ್ ಖರೀದಿಸುವ ಗ್ರಾಹಕರಿಗೆ, ಇವೆರಡರಲ್ಲಿ ಯಾವ ಫೋನ್ ಉತ್ತಮ ಎನ್ನುವ ಗೊಂದಲ ಮೂಡುವುದಂತು ನಿಜ ಅಲ್ಲವೇ. ಹಾಗಾಗಿ ಇಂದಿನ ಈ ಲೇಖನದಲ್ಲಿ ಶಿಯೋಮಿ ಮಿ ಎ3 ಮತ್ತು ರಿಯಲ್ ಮಿ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಮುಖ್ಯ ಫೀಚರ್ಸ್‌ಗಳ ವ್ಯತ್ಯಾಸಗಳೆನು ಎಂಬುದರ ಬಗ್ಗೆ ತಿಳಿಯೋಣ.

ಡಿಸ್‌ಪ್ಲೇಯಲ್ಲಿ ಭಿನ್ನತೆ
ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 1560x720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.08 ಇಂಚಿನ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ 'ರಿಯಲ್ ಮಿ 5 ಪ್ರೊ' ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.30 ಇಂಚಿನ ಫುಲ್ ಹೆಚ್‌ಡಿ ಪ್ಲಸ್ LCD ಡಿಸ್‌ಪ್ಲೇಯನ್ನು ಹೊಂದಿದೆ. ಇವುಗಳಲ್ಲಿ ರಿಯಲ್ ಮಿ 5 ಪ್ರೊ ಹೆಚ್ಚಿನ ಪಿಕ್ಸಲ್ ರೆಸಲ್ಯೂಶನ್ ಒಳಗೊಂಡಿದೆ.

ಪ್ರೊಸೆಸರ್ ಬಲ ಹೇಗಿದೆ
'ರಿಯಲ್ ಮಿ 5 ಪ್ರೊ' ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 SoC ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9 ಮತ್ತು ಕಲರ್ ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ 9 ಪೈ ಮತ್ತು ಆಂಡ್ರಾಯ್ಡ್ ಒನ್ ಬೆಂಬಲದಲ್ಲಿ ಕಾರ್ಯನಿರ್ವಹಿಸಲಿದೆ. ಎರಡು ಆಂಡ್ರಾಯ್ಡ್ 9 ಪೈ ಓಎಸ್ ಇದೆ ಆದರೆ ಪ್ರೊಸೆಸರ್ ಬಲದಲ್ಲಿ ಬದಲಾವಣೆ ಇದೆ.

ಮೆಮೊರಿ ಆಯ್ಕೆಗಳು
ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 4GB RAM + 64GB ಮತ್ತು 6GB RAM + 128GB ಸಾಮರ್ಥ್ಯದ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಆದ್ರೆ ರಿಯಲ್ ಮಿ 5 ಪ್ರೊ ಸ್ಮಾರ್ಟ್‌ಫೋನ್ 4GB RAM + 64GB, 6GB + 64GB ಮತ್ತು 8GB + 128GB ಸಾಮರ್ಥ್ಯದ ಮೂರು ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ ಹೈಲೈಟ್ಸ್
ರಿಯಲ್ ಮಿ 5 ಪ್ರೊ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು 8ಎಂಪಿ + 2ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಹಾಗೆಯೇ ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ ಸಹ ಮೂರು ಕ್ಯಾಮೆರಾಗಳ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು ಕ್ರಮವಾಗಿ 8ಎಂಪಿ + 2ಎಂಪಿ ಸೆನ್ಸಾರ ಹೊಂದಿವೆ. ಆದ್ರೆ ಸೆಲ್ಫಿ ಕ್ಯಾಮೆರಾ ನೋಡುವುದಾದರೇ ಶಿಯೋಮಿ ಮಿ ಎ3 ಫೋನ್ 32ಎಂಪಿ ಸೆನ್ಸಾರ್‌ನಲ್ಲಿದೆ ಮತ್ತು ರಿಯಲ್ ಮಿ 5 ಪ್ರೊ 16ಎಂಪಿ ಸೆನ್ಸಾರ್ ಹೊಂದಿದೆ.

ಬ್ಯಾಟರಿ ಪವರ್ ಭಿನ್ನತೆ
ರಿಯಲ್ ಮಿ 5 ಪ್ರೊ ಸ್ಮಾರ್ಟ್‌ಫೋನ್ 4,035mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಜೊತೆಗೆ VOOC 3.0 ತಂತ್ರಜ್ಞಾನದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 4,030mAh ಬ್ಯಾಟರಿ ಪವರ್‌ನೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಬ್ಯವನ್ನು ಒಳಗೊಂಡಿದೆ. ಬ್ಯಾಟರಿ ಬಲದಲ್ಲಿ ಹೆಚ್ಚಿನ ಬದಲಾವಣೆ ಇಲ್ಲವಾದರೂ, ಚಾರ್ಜಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470