ಮೈಕ್ರೋಮ್ಯಾಕ್ಸ್ ಆಂಡ್ರಾಯ್ಡ್ ಫೋನ್ ನಿಂಜಾ A45

By Varun
|
ಮೈಕ್ರೋಮ್ಯಾಕ್ಸ್ ಆಂಡ್ರಾಯ್ಡ್ ಫೋನ್ ನಿಂಜಾ A45

ಭಾರತದ ಖ್ಯಾತ ಮೊಬೈಲ್ ಉತ್ಪಾದಕ ಮೈಕ್ರೋಮ್ಯಾಕ್ಸ್ ಇತ್ತೀಚೆಗೆ ಐಷಾ (ಸಿರಿ ಮಾದರಿಯಲ್ಲೇ ಕೆಲಸ ಮಾಡುವ AISHA- Artificial Intelligence Speech Handset Assistant ಹೆಸರಿನ ವಾಯ್ಸ್ ರೆಕಗ್ನಿಶನ್ ತಂತ್ರಾಂಶ) ಇರುವ ನಿಂಜಾ A50 ಹೆಸರಿನ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿತ್ತು.

ಈ AISHA ದ ಮೂಲಕ ಗೂಗಲ್ ಸರ್ಚ್, ಶೇರು ಮಾರುಕಟ್ಟೆ ಮಾಹಿತಿ, ಕರೆ ಮಾಡುವುದು,ಫಿಲಂ ನ ರಿವ್ಯೂ ಕೂಡ ಮಾಡಬಹುದು. ಈಗ ಅದೇ ರೀತಿಯ ಹೆಚ್ಚಿನ ಫೀಚರುಗಳು ಇರುವ A45 ಹೆಸರಿನ ಮಾಡೆಲ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ.

ಮೈಕ್ರೋಮ್ಯಾಕ್ಸ್ ಸೂಪರ್ ಫೋನ್ ನಿಂಜಾ A45 ಹೆಸರಿನ ಈ ಸ್ಮಾರ್ಟ್ ಫೋನ್ ನ ಫೀಚರುಗಳು ಈ ರೀತಿ ಇವೆ:

  • 3.5 ಇಂಚಿನ ಡಿಸ್ಪ್ಲೇ

  • ಆಂಡ್ರಾಯ್ಡ್ 2.3 ಆಪರೇಟಿಂಗ್ ಸಿಸ್ಟಮ್

  • 650 ಮೆಗಾಹರ್ಟ್ಝ್ ಪ್ರೋಸೆಸ್ಸೋರ್

  • 256 MB ರಾಮ್

  • 32 GB ವಿಸ್ತರಿಸಬಹುದಾದ ಮೆಮೊರಿ

  • ಐಷಾ ಧ್ವನಿ ನೆರವು ಸೇವೆ

  • ಫೋನಿನೊಂದಿಗೆ ಸ್ಟೀರಿಯೋ ಬ್ಲೂಟೂತ್ ಹೆಡ್ ಬ್ಯಾಂಡ್

  • 3G ಮತ್ತು ವೈಫೈ ಸಂಪರ್ಕ.

  • ಸಾಮೀಪ್ಯ ಸಂವೇದಕವು

  • 1300 mAh ಬ್ಯಾಟರಿ

ನೀವು ಆನ್ಲೈನಿನಲ್ಲಿ ಈ ಸ್ಮಾರ್ಟ್ ನಿಂಜಾ A45 ಫೋನ್ ಅನ್ನು ಮೈಕ್ರೋಮ್ಯಕ್ಸ್ ವೆಬ್ಸೈಟ್ ನಲ್ಲಿ ಪ್ರೀ ಆರ್ಡರ್ ಮಾಡಬಹುದು, 5,499 ರೂಪಾಯಿಗೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X