Subscribe to Gizbot

ಜಿಯೋ ಫೋನ್ - ಭಾರತ್‌ 1 ಫೋನ್: ಬೆಸ್ಟ್‌ ಯಾವುದು? ವಿಶೇಷತೆಗಳೇನು.?

Written By:

ರಿಯಲನ್ಸ್ ಜಿಯೋ ಫೋನಿಗೆ ಎದುರಾಗಿ ಕಾಣಿಸಿಕೊಂಡ ಭಾರತೀಯ ಮೂಲದ ಮೈಕ್ರೋಮಾಕ್ಸ್ ಭಾರತ್ 1 ಫೋನು ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಜಿಯೋ ಫೋನ್ ಮತ್ತು ಭಾರತ್ 1 ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರನ್ನು ಸೆಳೆಯುತ್ತಿವೆ. ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಫೋನ್ ಬೇಕು ಎನ್ನುವವರಿಗೆ ಈ ಎರಡು ಪೋನ್‌ಗಳು ಉತ್ತಮ ಆಯ್ಕೆಗಳಲಾಗಿದೆ.

ಜಿಯೋ ಫೋನ್ - ಭಾರತ್‌ 1 ಫೋನ್: ಬೆಸ್ಟ್‌ ಯಾವುದು? ವಿಶೇಷತೆಗಳೇನು.?

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಇಯರ್ ಎಂಡ್ ಸೇಲ್‌: ಟಿವಿ, ಪೋನ್ ಭಾರೀ ಕಡಿಮೆ ಬೆಲೆಗೆ..!

ಈ ಹಿನ್ನಲೆಯಲ್ಲಿ ಜಿಯೋ ಫೋನ್ ಮತ್ತು ಭಾರತ್ 1 ಫೋನ್‌ಗಳ ಇತಿ-ಮಿತಿಗಳೇನು ಎನ್ನುವುದನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಎರಡು ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿದ್ದು, ಒಂದು ಮೂಲಗಳ ಪ್ರಕಾರ ಭಾರತ್ 1 ಫೋನ್ ಬೆಸ್ಟ್ ಎನ್ನಲಾಗಿದೆ. ಈ ಕುರಿತ ಸಾಕ್ಷಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Redmi 5A ದೇಶ್‌ ಕಾ ಸ್ಮಾರ್ಟ್‌ಫೋನ್ ಸೇಲ್ ಶುರು: ಇಲ್ಲಿದೇ ನೋಡಿ ಕಂಪ್ಲೀಟ್ ಡಿಟೈಲ್ಸ್..!
ಭಾರತ್ 1 ಫೋನ್ ನಲ್ಲಿ ವಾಟ್ಸ್‌ಆಪ್‌:

ಭಾರತ್ 1 ಫೋನ್ ನಲ್ಲಿ ವಾಟ್ಸ್‌ಆಪ್‌:

ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುವ ಮೈಕ್ರೋಮಾಕ್ಸ್ ಭಾರತ್ 1 ಫೋನ್‌ನಲ್ಲಿ ವಾಟ್ಸ್‌ಆಪ್ ಬಳಕೆ ಮಾಡಬಹುದಾಗಿದೆ. ಇದು ಸ್ಮಾರ್ಟ್‌ಫೋನ್ ವಾಟ್ಸ್‌ಆಪ್‌ಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ಹಿಸಲಿದೆ. ಆದರೆ ಜಿಯೋ ಫೋನಿನಲ್ಲಿ ವಾಟ್ಸ್‌ಆಪ್ ಬಳಕೆ ಸಾಧ್ಯವಿಲ್ಲ ಎನ್ನಲಾಗಿದೆ.

ವಾಯ್ಡ್‌ ಅಸಿಸ್ಟೆಂಟ್ ಇದೆ:

ವಾಯ್ಡ್‌ ಅಸಿಸ್ಟೆಂಟ್ ಇದೆ:

ಜಿಯೋ ಫೋನ್ ನಲ್ಲಿ ವಾಯ್ಡ್ ಅಸಿಸ್ಟೆಂಟ್ ಬಳೆಕೆ ಮಾಡಿಕೊಳ್ಳುವ ಅವಕಾಶವಿದೆ. ಅಲ್ಲದೇ ಶೀಘ್ರವೇ ಗೂಗಲ್ ಅಸಿಸ್ಟೆಂಟ್ ಅನ್ನು ಜಿಯೋ ಫೋನಿನಲ್ಲಿ ನೀಡುವ ಸಾಧ್ಯತೆ ಇದೆ. ಆದರೆ ಮೈಕ್ರೋಮಾಕ್ಸ್ ಭಾರತ್ 1 ಫೋನಿನಲ್ಲಿ ಈ ಆಯ್ಕೆ ಇಲ್ಲ ಎನ್ನಲಾಗಿದೆ.

ಯೂಟ್ಯೂಬ್-ಫೇಸ್ಬುಕ್ ಆಪ್ ಲಭ್ಯವಿದೆ:

ಯೂಟ್ಯೂಬ್-ಫೇಸ್ಬುಕ್ ಆಪ್ ಲಭ್ಯವಿದೆ:

ಜಿಯೋ ಫೋನಿನಲ್ಲಿ ಯೂಟ್ಯೂಬ್-ಫೇಸ್ಬುಕ್ ಬಳಕೆ ಮಾಡಿಕೊಳ್ಳಬಹುದು ಆದರೆ ಆಪ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳುವ ಅವಕಾಶವು ಇಲ್ಲ ಎನ್ನಲಾಗಿದೆ. ಹಾಗೆಯೇ ಭಾರತ್ 1 ಫೋನ್‌ನಲ್ಲಿ ಯೂಟ್ಯೂಬ್-ಫೇಸ್ಬುಕ್ ಆಪ್ ಗಳನ್ನು ಹಾಕಿಕೊಂಡು ಬಳಕೆ ಮಾಡುವ ಅವಕಾಶವು ಇದೆ.

ಬೇರೆ ಬೇರೆ ಸಿಮ್‌ ಹಾಕುವ ಅವಕಾಶ:

ಬೇರೆ ಬೇರೆ ಸಿಮ್‌ ಹಾಕುವ ಅವಕಾಶ:

ಭಾರತ್ 1 ಫೋನ್‌ನಲ್ಲಿ ಬೇರೆ ಬೇರೆ ಸಿಮ್‌ಗಳನ್ನು ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಆದರೆ ಜಿಯೋ ಫೋನಿನಲ್ಲಿ ಜಿಯೋ ಸಿಮ್‌ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾತ್ರವೇ ಇದೆ. ಬೇರೆ ಸಿಮ್‌ಗಳನ್ನು ಹಾಕಿಕೊಳ್ಳುವ ಅವಕಾಶವನ್ನು ನಿರಾಕರಿಸಲಾಗಿದೆ.

ಬೆಲೆಯಲ್ಲಿ ಜಿಯೋ ಫೋನ್ ಬೆಸ್ಟ್:

ಬೆಲೆಯಲ್ಲಿ ಜಿಯೋ ಫೋನ್ ಬೆಸ್ಟ್:

ಭಾರತ್ 1 ಫೋನ್‌ ಬೆಲೆಯಲ್ಲಿ ಕೊಂಚ ಹೆಚ್ಚಾಗಿದೆ ಎನ್ನಲಾಗಿದೆ. ಭಾರತ್ 1 ಫೋನ್ ರೂ. 2,200ಕ್ಕೆ ದೊರೆಯಲಿದೆ, ಇದೇ ಮಾದರಿಯಲ್ಲಿ ಜಿಯೋ ಫೋನ್ ರೂ.1500ಕ್ಕೆ ಲಭ್ಯವಿದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಔಟ್ ಆಫ್ ಸ್ಟಾಕ್ ಆಗಿದೆ. ಆದರೆ ಭಾರತ್ 1 ಮಾರುಕಟ್ಟೆಯಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Micromax Bharat 1 can run WhatsApp. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot