ಜಿಯೋ ಫೋನ್‌ಗಿಂತಲೂ BSNL ಭಾರತ್ 1 ಬೆಸ್ಟ್: ಇಲ್ಲಿದೇ ಕಾರಣಗಳು..!
ಜಿಯೋ ಫೋನ್ ಲಾಂಚ್ ಮಾಡಿದ ಮಾದರಿಯಲ್ಲಿ BSNL ಸಹ ಮೈಕ್ರೋ ಮಾಕ್ಸ್ ನೊಂದಿಗೆ ಸೇರಿಕೊಂಡು 4G ಫೀಚರ್ ಫೋನ್ ಭಾರತ್ 1 ಅನ್ನು ಲಾಂಚ್ ಮಾಡಿದೆ. ಅಲ್ಲದೇ ಜಿಯೋ ಫೋನ್‌ಗಾಗಿ ಜಿಯೋ ನೀಡಿದ ಆಫರ್ ಮಾದರಿಯಲ್ಲಿಯೇ ತಾನು ಸಹ ಬಳಕೆದಾರರಿಗೆ ಪ್ರತ್ಯೇಕ ಆಫರ್
ಟೆಲಿಕಾಂ ವಲಯದ ದೈತ್ಯ ಕಂಪನಿಗಳಾದ ಜಿಯೋ - BSNL ದರ ಸಮರದಲ್ಲಿ ಹೆಚ್ಚು ಪ್ರತಿ ಸ್ಪರ್ಧಿಗಳಾಗಿದ್ದು, ಸರಕಾರಿ ಒಡೆತನದ BSNL ರಿಲಯನ್ಸ್ ಮಾಲೀಕತ್ವದ ಜಿಯೋಗೆ ನೇರಾ ಸವಾಲು ಹಾಕಲು ಮುಂದಾಗಿದೆ. ಕೇವಲ ಟ್ಯಾರಿಫ್ ಪ್ಲಾನ್ ಗಳಲ್ಲದೇ ಅದಕ್ಕಿಂತ ಹೆಚ್ಚಿನ ಸ್ಪರ್ಧೆಯನ್ನು ನೀಡಲು ಮುಂದಾಗಿದೆ.

ಓದಿರಿ: ಜಿಯೋ ಮಾದರಿ: ಏರ್‌ಟೆಲ್‌ನಿಂದಲೂ 100% ಕ್ಯಾಷ್ ಬ್ಯಾಕ್ ಆಫರ್
ಜಿಯೋ ಫೋನ್ ಲಾಂಚ್ ಮಾಡಿದ ಮಾದರಿಯಲ್ಲಿ BSNL ಸಹ ಮೈಕ್ರೋ ಮಾಕ್ಸ್ ನೊಂದಿಗೆ ಸೇರಿಕೊಂಡು 4G ಫೀಚರ್ ಫೋನ್ ಭಾರತ್ 1 ಅನ್ನು ಲಾಂಚ್ ಮಾಡಿದೆ. ಅಲ್ಲದೇ ಜಿಯೋ ಫೋನ್‌ಗಾಗಿ ಜಿಯೋ ನೀಡಿದ ಆಫರ್ ಮಾದರಿಯಲ್ಲಿಯೇ ತಾನು ಸಹ ಬಳಕೆದಾರರಿಗೆ ಪ್ರತ್ಯೇಕ ಆಫರ್ ಘೋಷಣೆ ಮಾಡಿದೆ.

ಭಾರತ್ 1 ವಿಶೇಷತೆ:
2.4 ಇಂಚಿನ QVGA ಡಿಸ್‌ಪ್ಲೇಯನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 205 ಪ್ರೋಸೆಸರ್ ಇದ್ದು, 512 MB RAM ಸಹ ನೀಡಲಾಗಿದೆ. ಜೊತೆಗೆ 4GB ಇಂಟರ್ನಲ್ ಮೆಮೊರಿ ಸಹ ಇದೆ. ಅಲ್ಲದೇ ಈ ಫೋನ್ ಡ್ಯುಯಲ್ ಸಿಮ್ ಕಾರ್ಡ್ ಸಪೋರ್ಟ್ ಮಾಡಲಿದೆ.

ಭಾರತ್ 1 ಕ್ಯಾಮೆರಾ:
ಭಾರತ್ 1 ಫೋನಿನ ಹಿಂಭಾಗದಲ್ಲಿ 2MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ VGA ಕ್ಯಾಮೆರಾ ನೀಡಲಾಗಿದೆ. ಒಟ್ಟು 22 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ BHIM ಆಪ್ ಹಾಗೂ BSNL ವ್ಯಾಲೆಟ್ ಜೊತೆಗೆ ಬರಲಿದೆ. ಆಂಡ್ರಾಯ್ಡ್ OSನಲ್ಲಿ ರನ್ ಆಗಲಿದೆ.

ಜಿಯೋಫೋನ್ ವಿಶೇಷತೆ:
2.4 ಇಂಚಿನ ಡಿಸ್‌ಪ್ಲೇಯನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. ಇದರಲ್ಲಿ 1.2GHz ಕ್ವಾಲ್ಕಮ್ 8905 ಚಿಪ್‌ಸೆಟ್ ಅಳವಡಿಸಿದ್ದು, 512 MB RAM ಮತ್ತು 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೊಮೊರಿ ಕಾರ್ಡ್ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಸಹ ಇದೆ.

ಜಿಯೋಫೋನ್ ಕ್ಯಾಮೆರಾ:
ಜಿಯೋಫೋನಿನ ಹಿಂಭಾಗದಲ್ಲಿ 2MP ಕ್ಯಾಮೆರಾವನ್ನು ಮುಂಭಾಗದಲ್ಲಿ 0.3 MP ಕ್ಯಾಮೆರಾ ನೀಡಲಾಗಿದ್ದು, ಸಿಂಗಲ್ ಸಿಮ್ ಫೋನ್ ಇದಾಗಿದೆ. ಅಲ್ಲದೇ ಜಿಯೋ ಸಿಮ್ ನೊಂದಿಗೆ ಲಾಕ್ ಮಾಡಲಾಗಿದೆ.

ಭಾರತ್ 1 ಫೋನ್ ಟ್ಯಾರಿಫ್ ಫ್ಲಾನ್:
BSNL ಭಾರತ್ 1 ಫೋನ್‌ಗಾಗಿ ವಿಶೇಷ ಟ್ಯಾರಿಫ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ರೂ. 97ಕ್ಕೆ ಒಂದು ತಿಂಗಳ ಅವಧಿಗೆ 5 GB ಹೈಸ್ಪೀಡ್ ಡೇಟಾ ಜೊತೆಗೆ ಅನ್‌ಲಿಮಿಟೆಡ್ ಡೇಟಾ ನೀಡುತ್ತಿದ್ದು, ಅನ್‌ಲಿಮಿಟೆಡ್ ಕರೆಗಳು ಹಾಗೂ ಉಚಿತ ಮೇಸೆಜ್ ಮಾಡಬಹುದಾಗಿದೆ.


ಜಿಯೋಫೋನ್ ಟ್ಯಾರಿಫ್ ಫ್ಲಾನ್:
ಇದೇ ಮಾದರಿಯಲ್ಲಿ ಜಿಯೋ ರೂ.153ಕ್ಕೆ ಒಂದು ತಿಂಗಳ ಅವಧಿಗೆ ಪ್ರತಿ ದಿನ 500 MB ಡೇಟಾವನ್ನು ಬಳಕೆಗೆ ನೀಡಲಿದೆ. ಉಚಿತ ಕರೆ ಮತ್ತು ಮೇಸೆಜ್ ಮಾಡುವ ಅವಕಾಶವನ್ನು ನೀಡುತ್ತಿದೆ.

ಬೆಲೆ:
ಈ ಎರಡು ಪೋನ್‌ಗಳು ಕೈಗೆಟುಕುವ ಬೆಲೆಯಲ್ಲಿಯೇ ದೊರೆಯುತ್ತಿದೆ ಎನ್ನಲಾಗಿದೆ. ಜಿಯೋ ಫೋನ್ ಬೆಲೆ ರೂ. 1500 ಆಗಿದೆ. ಆದರೆ ಇದನ್ನು ಮೂರು ತಿಂಗಳ ಬಳಿಕ ವಾಪಸ್ಸು ಪಡೆಯಬಹುದಾಗಿದೆ. ಇದೇ ಮಾದರಿಯಲ್ಲಿ ಭಾರತ್ 1 ಫೋನಿನ ಬೆಲೆ ರೂ. 2,200 ಆಗಲಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

ಪ್ಲಸ್-ಮೈನಸ್ ಪಾಯಿಂಟ್:
ಭಾರತ್ 1 ಫೋನಿನಲ್ಲಿ ನೀವು ವಾಟ್ಸ್‌ಆಪ್ ಸೇರಿಂದಂತೆ ಫೇಸ್‌ಬುಕ್ ಆಪ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು. ಜಿಯೋ ಫೋನಿನಲ್ಲಿ ವಾಟ್ಸ್ಆಪ್ ಬಳಕೆಗೆ ಸಾಧ್ಯವಿಲ್ಲ. ಫೇಸ್‌ಬುಕ್ ಯೂಟ್ಯೂಬ್ ಬ್ರೌಸ್ ಮಾಡಬಹುದು. ಅಲ್ಲದೇ ಜಿಯೋ ಫೋನಿನಲ್ಲಿ ಜಿಯೋ ಆಪ್‌ಗಳ ಬಳಕೆ ಉಚಿತವಾಗಲಿದೆ. ಭಾರತ್ ಫೋನಿನಲ್ಲಿ ಈ ಆಯ್ಕೆ ಇಲ್ಲ. ಭಾರತ 1 ಫೋನಿಗೆ ಜಿಯೋ ಸಹ ಹಾಕಬಹುದು. ಆದರೆ ಜಿಯೋ ಪೋನಿಗೆ ಬೇರೆ ಸಿಮ್ ಹಾಕಿಕೊಳ್ಳಲು ಸಾಧ್ಯವೇ ಇಲ್ಲ.


Click it and Unblock the Notifications








