ಕಡಿಮೆ ಬೆಲೆಯ ಮೈಕ್ರೋಮ್ಯಾಕ್ಸ್ ಫ್ಯಾಬ್ಲೆಟ್ ಬಿಡುಗಡೆ
ಕಡಿಮೆ ಬೆಲೆಯಲ್ಲಿ ದೊಡ್ಡ ಸ್ಕ್ರೀನ್ ಫ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಮೈಕ್ರೋಮ್ಯಾಕ್ಸ್ ಗುಡ್‌ನ್ಯೂಸ್ ನೀಡಿದೆ. ಮೈಕ್ರೋಮ್ಯಾಕ್ಸ್ ಕಡಿಮೆ ಬೆಲೆಯಲ್ಲಿ ಆರು ಇಂಚಿ ಸ್ಕ್ರೀನ್ ಹೊಂದಿರುವ ಫ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಕ್ಯಾನ್‌ವಾಸ್ ಡೂಡಲ್3ಯನ್ನು ಬಿಡುಗಡೆ ಮಾಡಿದ್ದು 8,500 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
ಮೈಕ್ರೋಮ್ಯಾಕ್ಸ್ ಈ ಫ್ಯಾಬ್ಲೆಟ್ ಖರೀದಿಸಿದ ಗ್ರಾಹಕರಿಗೆ ಹೊಸ ಆಫರ್ ಪ್ರಕಟಿಸಿದೆ.ಈ ಫ್ಯಾಬ್ಲೆಟ್ ಪ್ರಿಲೊಡೆಡ್ ಆಗಿ BigFlix ಆಪ್ ಹೊಂದಿದ್ದು ಬಳಕೆದಾರರು ಆರು ತಿಂಗಳ ಕಾಲ ಉಚಿತವಾಗಿ ಆನ್‌ಲೈನಲ್ಲಿ ಚಲನಚಿತ್ರಗಳನ್ನು ನೋಡಬಹುದು ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ.
6 ಇಂಚಿನ FWVGA ಸ್ಕ್ರೀನ್,ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್,1.3 GHz ಡ್ಯುಯಲ್ ಕೋರ್ ಮೀಡಿಯಾಟೆಕ್ ಪ್ರೊಸೆಸರ್,512 MB RAM,4 ಜಿಬಿ ಆಂತರಿಕ ಮೆಮೊರಿಯನ್ನು ಫ್ಯಾಬ್ಲೆಟ್ ಒಳಗೊಂಡಿದೆ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಡೂಡಲ್ ಸರಣಿಯಲ್ಲಿ ಈಗಾಗಲೇ ಎರಡು ಫ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದೆ. 2013 ಮೇ ತಿಂಗಳಿನಲ್ಲಿ ಮೊದಲ 5.3 ಇಂಚಿನ ಡೂಡಲ್ ಫ್ಯಾಬ್ಲೆಟ್‌ನ್ನು 12,999 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ನಂತರ 2013 ಅಗಸ್ಟ್‌ನಲ್ಲಿ 5.7 ಇಂಚಿನ ಎರಡನೇ ಡೂಡಲ್ ಫ್ಯಾಬ್ಲೆಟ್‌ನ್ನು 19990 ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ ಈ ಎರಡು ಫ್ಯಾಬ್ಲೆಟ್‌ಗಳ ಬೆಲೆ ಕಡಿಮೆಯಾಗಿದ್ದು, ಡೂಡಲ್ 1ಫ್ಯಾಬ್ಲೆಟ್ 8294 ಬೆಲೆಯಲ್ಲಿ ಲಭ್ಯವಿದ್ದರೆ ಡೂಡಲ್ 2 ಫ್ಯಾಬ್ಲೆಟ್ 14,499 ರೂ.ಬೆಲೆಯಲ್ಲಿ ಲಭ್ಯವಿದೆ.
ಕ್ಯಾನ್‌ವಾಸ್ ಡೂಡಲ್ 3
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
6 ಇಂಚಿನ FWVGA ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.3 GHz ಡ್ಯುಯಲ್ ಕೋರ್ ಮೀಡಿಯಾಟೆಕ್ ಪ್ರೊಸೆಸರ್
512 MB RAM
4 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್,ಜಿಪಿಎಸ್
2500mAh ಬ್ಯಾಟರಿ
ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ ಟಾಪ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ


Click it and Unblock the Notifications








