Home
ಮೊಬೈಲ್

ವಾರದಲ್ಲಿ ರಿಟೇಲ್‌ ಅಂಗಡಿಗೆ ಬರಲಿದೆ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್‌ ಎಚ್‌ಡಿ

By Ashwath

ಮೊಬೈಲ್‌ ಮಾರ್ಕೆಟ್‌ನಲ್ಲಿ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ ಸದ್ದು ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತದಲ್ಲಿ ಇದುವರೆಗೂ ಯಾವ ಮೊಬೈಲ್‌ ಇಲ್ಲದ ಡಿಮ್ಯಾಂಡ್‌ ಮೈಕ್ರೋಮ್ಯಾಕ್ಸ್ ಮೊಬೈಲ್‌ಗೆ ಬಂದಿದೆ.

ಕೆಲವೊಂದು ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಬೆಳಗ್ಗೆ ಲಭ್ಯವಾಗಿದ್ರೆ, ಮಧ್ಯಾಹ್ನಕ್ಕೆ ಇದು ಖಾಲಿಯಾಗಿ ಶಾಪಿಂಗ್‌ ಸೈಟ್‌ಗಳು ನೋ ಸ್ಟಾಕ್‌ ಎಂದು ಬೋರ್ಡ್‌ ಹಾಕುವ ಮೂಲಕ ಮೈಕ್ರೋಮ್ಯಾಕ್ಸ್‌ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದ್ರೆ ಮೈಕ್ರೋಮ್ಯಾಕ್ಸ್‌ ಅಭಿಮಾನಿಗಳು ಬೇಸರ ಪಡುವ ಅಗತ್ಯವಿಲ್ಲ ಮುಂದಿನ ವಾರದಲ್ಲಿ ಇದು ರಿಟೇಲ್‌ ಶಾಪ್‌ಗಳಲ್ಲಿ ಲಭ್ಯವಾಗಲಿದೆ.

ವಾರದಲ್ಲಿ ರಿಟೇಲ್‌ ಅಂಗಡಿಗೆ ಬರಲಿದೆ  ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್‌ ಎಚ್‌ಡಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್‌ ಗ್ಯಾಲರಿ

ಕ್ಯಾನ್‌ವಾಸ್‌ ಎಚ್‌ಡಿಗೆ ಭಾರೀ ಡಿಮ್ಯಾಂಡ್‌ ಹೆಚ್ಚಾಗುತ್ತಿದ್ದಂತೆ ಗಿಜ್ಬಾಟ್ ಮೈಕ್ರೋಮ್ಯಾಕ್ಸ್‌ನ ಮಾರ್ಕೆಟಿಂಗ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ಮುಂದಿನ ಒಂದು ವಾರದಲ್ಲಿ ಎಲ್ಲಾ ರಿಟೇಲ್‌ ಸ್ಟೋರ್‌ಗಳಲ್ಲಿ ಕ್ಯಾನ್‌ವಾಸ್ ಎಚ್‌ಡಿ ಲಭ್ಯವಾಗಲಿದೆ. ಉತ್ಪಾದನ ಸಂದರ್ಭದಲ್ಲಿ ಉಂಟಾದ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಇದು ಮಾರುಕಟ್ಟೆಗೆ ಬರಲು ತಡವಾಗುತ್ತಿದ್ದು,ಒಂದು ವಾರದಲ್ಲಿ ಇದು ಖಂಡಿತವಾಗಿಯೂ ಮಾರುಕಟ್ಟೆಗೆ ಬರಲಿದೆ ಎಂದು ಅಧಿಕಾರಿಗಳು ಗಿಜ್ಬಾಟ್‌ಗೆ ಆಶ್ವಾಸನೆ ನೀಡಿದ್ದಾರೆ. ಹಾಗಾಗಿ ಕ್ಯಾನ್‌ವಾಸ್‌ ಎಚ್‌ಡಿ ಖರೀದಿಸಬೇಕು ಎಂದು ಯೋಚನೆ ಮಾಡಿದವರು ಒಂದು ವಾರ ಕಾಯಬೇಕಿದೆ.

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ
ವಿಶೇಷತೆ:

5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.2GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ
ಬೆಲೆ: 13,990

ಲಿಂಕ್‌ : ಬೆಂಗಳೂರಿನಲ್ಲಿರುವ ಎಲೆಕ್ಟ್ರಾನಿಕ್ಸ್‌ ಶೋರೂಮ್‌ಗಳು ಇಲ್ಲಿವೆ ನೋಡಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+