ಮೈಕ್ರೋಮ್ಯಾಕ್ಸ್‌ನಿಂದ 3000mAh ಬ್ಯಾಟರಿ ಸ್ಮಾರ್ಟ್‌ಫೋನ್ ಬಿಡುಗಡೆ
ಕಡಿಮೆ ಬೆಲೆಯಲ್ಲೇ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಕ್ಲಿಕ್ ಆಗುತ್ತಿರುವ ದೇಶೀಯ ಕಂಪೆನಿ ಮೈಕ್ರೋಮ್ಯಾಕ್ಸ್ ಕಡಿಮೆ ಬೆಲೆಯಲ್ಲೇ ಶಕ್ತಿಶಾಲಿ 3000mAh ಬ್ಯಾಟರಿ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜ್ಯೂಸ್ ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು 7999 ಬೆಲೆಯಲ್ಲಿ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಬಹುದು. 150.5 x 76.2 x 10.2 ಮಿ.ಮೀ ಗಾತ್ರ. 100.5 ಗ್ರಾಂ ತೂಕವನ್ನು ಸ್ಮಾರ್ಟ್‌ಫೋನ್ ಹೊಂದಿದ್ದು, ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್,1.3GHz ಡ್ಯುಯಲ್ ಕೋರ್ ಪ್ರೊಸೆಸರ್,1GB ರ್‍ಯಾಮ್,4GB ಆಂತರಿಕ ಮೆಮೊರಿಯನ್ನು ಒಳಗೊಂಡಿದೆ.
ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜ್ಯೂಸ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಸ್ಕ್ರೀನ್(854 x 480 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.3GHz ಡ್ಯುಯಲ್ ಕೋರ್ ಪ್ರೊಸೆಸರ್
1GB ರ್‍ಯಾಮ್
4GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3000mAh ಬ್ಯಾಟರಿ
ಇದನ್ನೂ ಓದಿ: ನೆಕ್ಸಸ್5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ


Click it and Unblock the Notifications








