Subscribe to Gizbot

ಮೈಕ್ರೋಮ್ಯಾಕ್ಸ್‌ನ ಕ್ಯಾನ್‌ವಾಸ್ ಸ್ಪಾರ್ಕ್ ರೂ 4,999 ಕ್ಕೆ

Written By:

ಮೈಕ್ರೋಮ್ಯಾಕ್ಸ್ ಇತ್ತೀಚೆಗೆ ತಾನೇ ಬಜೆಟ್ ಫೋನ್ ಆದ ಕ್ಯಾನ್‌ವಾಸ್ ಸ್ಪಾರ್ಕ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು ಸ್ನ್ಯಾಪ್‌ಡೀಲ್‌ನಲ್ಲಿ ಈ ಫೋನ್ ಲಭ್ಯವಾಗಲಿದೆ. ಮೈಕ್ರೋಮ್ಯಾಕ್ಸ್ 20,000 ಯೂನಿಟ್‌ಗಳ ಕ್ಯಾನ್‌ವಾಸ್ ಸ್ಪಾರ್ಕ್ ಫೋನ್ ಬಿಡುಗಡೆ ಮಾಡಿದ್ದು ಬೆಲೆ ರೂ 4,999 ಆಗಿದೆ ಎಂದು ಕಂಪೆನಿ ತಿಳಿಸಿದೆ.

ಮೈಕ್ರೋಮ್ಯಾಕ್ಸ್‌ನ ಕ್ಯಾನ್‌ವಾಸ್ ಸ್ಪಾರ್ಕ್ ರೂ 4,999 ಕ್ಕೆ

ಇನ್ನು ಫೋನ್ ವಿಶೇಷತೆಗಳತ್ತ ಗಮನಿಸುವುದಾದರೆ ಇದೊಂದು ಡ್ಯುಯಲ್ ಸಿಮ್ ಫೋನ್ ಆಗಿದ್ದು, ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿದೆ. 4.7 ಇಂಚಿನ ಕ್ಯುಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಡಿವೈಸ್ ಒಳಗೊಂಡಿದ್ದು ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಫೋನ್‌ಗಿದೆ. 1.3GHZ ಕ್ವಾಡ್ ಕೋರ್ ಮೀಡಿಯಾ ಟೆಕ್ MT6582M ಪ್ರೊಸೆಸರ್ ಡಿವೈಸ್‌ನಲ್ಲಿದ್ದು 1ಜಿಬಿ DDR3 RAM ಇದೆ.

ಓದಿರಿ: ಗ್ಯಾಲಕ್ಸಿ ಎಸ್6 ಗೆ ಬದ್ಧ ವೈರಿಯಾಗಲಿರುವ ಎಲ್‌ಜಿ ಜಿ4

ಕ್ಯಾನ್‌ವಾಸ್ ಸ್ಪಾರ್ಕ್ ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಫೋನ್‌ನಲ್ಲಿದೆ. ಫೋನ್‌ನ ಆಂತರಿಕ ಸಂಗ್ರಹಣೆ 8 ಜಿಬಿಯಾಗಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು. ಇನ್ನು ಫೋನ್‌ನ ಸಂಪರ್ಕ ಅಂಶಗಳೆಂದರೆ ವೈ-ಫೈ 802.11 b/g/n, ಬ್ಲ್ಯೂಟೂತ್ 4.0, GPS, ಎಫ್‌ಎಮ್ ರೇಡಿಯೊ, ಮತ್ತು 3.5mm ಆಡಿಯೊ ಜಾಕ್ ಆಗಿದೆ. ಫೋನ್ ಬ್ಯಾಟರಿ 2000mAh ಆಗಿದ್ದು 335 ಗಂಟೆಗಳ ಸ್ಟ್ಯಾಂಡ್‌ಬೈ ಅವಧಿಯನ್ನು ಇದು ಒದಗಿಸುತ್ತದೆ. ವೈಟ್ ಗೋಲ್ಡ್ ಮತ್ತು ಗ್ರೆ ಸಿಲ್ವರ್ ಬಣ್ಣದಲ್ಲಿ ಈ ಫೋನ್ ಬಂದಿದೆ.

English summary
Micromax's recently launched budget Canvas Spark smartphone will be available in its first flash sale via Snapdeal on Wednesday, commencing at 12pm IST for registered users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot