ಗ್ಯಾಲಕ್ಸಿ ಎಸ್6 ಗೆ ಬದ್ಧ ವೈರಿಯಾಗಲಿರುವ ಎಲ್‌ಜಿ ಜಿ4

By Shwetha
|

ಎಲ್‌ಜಿ ಮಂಗಳವಾರವಷ್ಟೇ ಗ್ಯಾಲಕ್ಸಿ ಎಸ್6 ಗೆ ಮಾರಕವಾಗಿರುವ ಜಿ4 ಅನ್ನು ಬಿಡುಗಡೆ ಮಾಡಿದೆ. ಇದೊಂದು ಅದ್ಭುತ ಫೋನ್ ಎಂದೆನಿಸಿದ್ದು ರಿಮೂವೇಬಲ್ ಬ್ಯಾಕ್ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ, ಇವೆರಡೂ ಗ್ಯಾಲಕ್ಸಿ ಎಸ್6 ನಲ್ಲಿ ಇಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.

ಓದಿರಿ: ನಂಬರ್ ಒನ್ ಸ್ಥಾನದತ್ತ ಮುನ್ನುಗ್ಗುತ್ತಿರುವ ಆಂಡ್ರಾಯ್ಡ್ ಫೋನ್ಸ್

ಕಳೆದ ವರ್ಷ ಎಲ್‌ಜಿಯು ಜಿ3 ಫೋನ್ ಅನ್ನು ಹೊರತಂದಿದ್ದು ಇದು ಹೆಚ್ಚು ರೆಸಲ್ಯೂಶನ್ 5.5 ಇಂಚಿನ ಕ್ಯುಎಚ್‌ಡಿ ಸ್ಕ್ರೀನ್ ಮತ್ತು ಪ್ಲಾಸ್ಟಿಕ್ ಬ್ಯಾಕ್ ಅನ್ನು ಹೊಂದಿತ್ತು. ಇದೀಗ ಕಂಪೆನಿ ತನ್ನ ಜಿ4 ಮೇಲೆ ಹೆಚ್ಚು ಭರವಸೆಯನ್ನು ಹೊಂದಿದ್ದು ಗ್ಯಾಲಕ್ಸಿ ಎಸ್6 ಮತ್ತು ಐಫೋನ್ 6 ಗೆ ಭರ್ಜರಿ ಪೈಪೋಟಿಯನ್ನು ನೀಡುವ ಸನ್ನಾಹದಲ್ಲಿದೆ.

ಓದಿರಿ: ದೀರ್ಘ ಬ್ಯಾಟರಿಯುಳ್ಳ ಕ್ವಾಡ್ ಎಚ್‌ಡಿ ಟಾಪ್ ಫೋನ್ಸ್

ಇಂದಿನ ಲೇಖನದಲ್ಲಿ ಜಿ4 ಕುರಿತಾದ ಆಸಕ್ತಿಕರ ಅಂಶಗಳನ್ನು ನಾವು ಇಲ್ಲಿ ನೀಡುತ್ತಿದ್ದು ಈ ಫೋನ್ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆಂಬ ನಿಮ್ಮ ತುಡಿತವನ್ನು ಈ ಅಂಶಗಳು ನೀಗಿಸಲಿವೆ.

ಎಲ್‌ಜಿ ಜಿ4: ಶಾರ್ಪ್ ಡಿಸ್‌ಪ್ಲೇ

ಎಲ್‌ಜಿ ಜಿ4: ಶಾರ್ಪ್ ಡಿಸ್‌ಪ್ಲೇ

ಎಲ್‌ಜಿ ಜಿ4, 5.5 ಇಂಚಿನ ಕ್ವಾಂಟಮ್ ಐಪಿಎಸ್ ಎಲ್‌ಸಿಡಿ ಕ್ಯುಎಚ್‌ಡಿ (2560×1440, 538ppi) ಶಾರ್ಪ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಎಲ್‌ಜಿ ಇದನ್ನು "ಕ್ವಾಂಟಮ್ ಡಿಸ್‌ಪ್ಲೇ" ಎಂದು ಕರೆದಿದೆ. ಎಲ್‌ಜಿ ಪ್ರಕಾರ ಫೋನ್ ಡಿಸ್‌ಪ್ಲೇ ಪ್ಯಾನೆಲ್ 25% ಪ್ರಕಾಶಮಾನವಾಗಿದೆ ಮತ್ತು 20% ವೈಡರ್ ಕಲರ್ ರೇಂಜ್ ಅನ್ನು ಇದು ಪಡೆದುಕೊಂಡಿದೆ.

ಎಲ್‌ಜಿ ಜಿ4: ಕ್ಯಾಮೆರಾ ವಿಶೇಷತೆ

ಎಲ್‌ಜಿ ಜಿ4: ಕ್ಯಾಮೆರಾ ವಿಶೇಷತೆ

ಜಿ4 ಕ್ಯಾಮೆರಾ ಸಾಮರ್ಥ್ಯ ನಿಜಕ್ಕೂ ಅದ್ಭುತ ಎಂದೆನಿಸಿದ್ದು 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಇದು ಹೊಂದಿದೆ. ಸೆಲ್ಫಿಗೆ ಹೇಳಿ ಮಾಡಿಸಿರುವ ಡಿವೈಸ್ ಇದಾಗಿದ್ದು ಇದು ಉತ್ತಮ ಫೋಟೋಗಳನ್ನು ತೆಗೆಯಲು ಅನುಕೂಲಕರವಾಗಿದೆ. ಇನ್ನು ಫೋನ್ ರಿಯರ್ ಕ್ಯಾಮೆರಾ ಡಿಎಸ್‌ಎಲ್ಆರ್ ಗುಣಮಟ್ಟದಲ್ಲಿದೆ.

ಎಲ್‌ಜಿ ಜಿ4: ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್

ಎಲ್‌ಜಿ ಜಿ4: ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್

ಗ್ಯಾಲಕ್ಸಿ ಎಸ್‌6 ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಒದಗಿಸಿಲ್ಲ. ಆದರೆ ಜಿ4 ನಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ನೀವು ಕಾಣಬಹುದಾಗಿದ್ದು ಇದುವೇ ಜಿ4 ನ ವಿಶೇಷತೆಯಾಗಿದೆ.

ಎಲ್‌ಜಿ ಜಿ4: ದೊಡ್ಡ ಬ್ಯಾಟರಿ

ಎಲ್‌ಜಿ ಜಿ4: ದೊಡ್ಡ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 2600 mAh ಬ್ಯಾಟರಿಯನ್ನು ಹೊಂದಿದ್ದು ಎಲ್‌ಜಿ ಜಿ4 ನಲ್ಲಿ 3,000mAh ಬ್ಯಾಟರಿಯನ್ನು ನಿಮಗೆ ಕಾಣಬಹುದಾಗಿದೆ.

ಎಲ್‌ಜಿ ಜಿ4: ಕರ್ವ್ ಸ್ಕ್ರೀನ್

ಎಲ್‌ಜಿ ಜಿ4: ಕರ್ವ್ ಸ್ಕ್ರೀನ್

ಸ್ಮಾರ್ಟ್‌ಫೋನ್ ಸ್ಕ್ರೀನ್‌ನಲ್ಲಿ ಕರ್ವ್ ಇದೆ ಎಂದಾದಲ್ಲಿ ಇದು ಡ್ಯುರೇಬಿಲಿಟಿಗೆ ಸಹಾಯ ಮಾಡುತ್ತದೆ ಎಂದಾಗಿದೆ. ಪರದೆಗೆ ಇದು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಎಂಬುದು ಎಲ್‌ಜಿಯ ಅಭಿಪ್ರಾಯವಾಗಿದೆ.

ಎಲ್‌ಜಿ ಜಿ4: ರಿಮೂವೇಬಲ್ ಬ್ಯಾಕ್ ಕವರ್

ಎಲ್‌ಜಿ ಜಿ4: ರಿಮೂವೇಬಲ್ ಬ್ಯಾಕ್ ಕವರ್

ಎಲ್‌ಜಿಯ ದಕ್ಷಿಣ ಕೊರಿಯಾ ವೈರಿ ಸ್ಯಾಮ್‌ಸಂಗ್‌ಗೆ ಹೋಲಿಸಿದಾಗ ಜಿ4 ಅತ್ಯದ್ಭುತ ಅಂಶಗಳನ್ನು ಒಳಗೊಂಡು ಬಂದಿದೆ. ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಇದು ರಿಮೂವೇಬಲ್ ಕವರ್ ಅನ್ನು ಒದಗಿಸಿದ್ದು, ಇದು ಫೋನ್ ಹೈಲೈಟ್ ಎಂದೆನಿಸಿದೆ.

ಎಲ್‌ಜಿ ಜಿ4: 8 ಎಮ್‌ಪಿ ಮುಂಭಾಗ ಕ್ಯಾಮೆರಾ

ಎಲ್‌ಜಿ ಜಿ4: 8 ಎಮ್‌ಪಿ ಮುಂಭಾಗ ಕ್ಯಾಮೆರಾ

ಫೋನ್ ಮುಂಭಾಗದಲ್ಲಿ 8 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು, ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್‌ನಲ್ಲಿ 5 ಎಮ್‌ಪಿ ಸೆಲ್ಫಿ ಶೂಟರ್ ಅನ್ನು ಒಳಗೊಂಡಿದೆ.

Best Mobiles in India

English summary
LG on Tuesday unravelled the Galaxy S6 Killer - the G4. The G4 is a high-end flagship smartphone with a removable back and a microSD card slot - both features missing in the Galaxy S6.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X