ಆನ್‌ಲೈನ್‌ಲ್ಲಿ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೋ ಸ್ಮಾರ್ಟ್‌ಫೋನ್ ಖರೀದಿಸಿ
ಮೈಕ್ರೋಮ್ಯಾಕ್ಸ್ ಕಂಪೆನಿಯ ಮೊದಲ ಫುಲ್ ಎಚ್‌ಡಿ ಸ್ಕ್ರೀನ್,2 GB ರ್‍ಯಾಮ್ ಹೊಂದಿರುವ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಕ್ಯಾನ್‌ವಾಸ್ ಟರ್ಬೋ ಈಗ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.
ಸ್ಮಾರ್ಟ್‌ಫೋನ್ 1080x1920 ಪಿಕ್ಸೆಲ್ ರೆಸೂಲೂಶನ್ ಹೊಂದಿರುವ 5 ಇಂಚಿನ ಫುಲ್ ಎಚ್‌ಡಿ ಸಿಸಿಎಸ್(Continuous Grain Silicon) ಸ್ಕ್ರೀನ್,ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್,1.5 Ghz ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದೆ.16GB ಆಂತರಿಕ ಮೆಮೊರಿ ಹೊಂದಿದ್ದು, ಸ್ಮಾರ್ಟ್‌ಫೋನಿಗೆ ಅತ್ಯಧಿಕ ಆಂತರಿಕ ಮೆಮೊರಿ ನೀಡಿರುವುದರಿಂದ ಹೆಚ್ಚುವರಿಯಾಗಿ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್ ನೀಡಿಲ್ಲ.
ಅಲ್ಯುಮಿನಿಯಂ ದೇಹ ಹೊಂದಿರುವ ಸ್ಮಾರ್ಟ್‌ಫೋನ್ ನೀಲಿ,ಮತ್ತು ಬಿಳಿ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.ಕ್ಯಾನ್‌ವಾಸ್ ಟರ್ಬೋ ಸ್ಮಾರ್ಟ್‌ಫೋನಿನಲ್ಲಿ ಲೈಟ್ ಸೆನ್ಸರ್,ಮೋಷನ್ ಸೆನ್ಸರ್,ಪ್ರಾಕ್ಸಿಮಿಟಿ ಸೆನ್ಸರ್,ಮ್ಯಾಗ್ನಟಿಕ್ ಸೆನ್ಸರ್,ಗೈರೋ ಸೆನ್ಸರ್‌ಗಳಿವೆ.
ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಹಾಲಿವುಡ್ ನಟ ಆಸ್ಟ್ರೇಲಿಯದ ಹ್ಯೂ ಜ್ಯಾಕ್‌ಮನ್ ರಾಯಭಾರಿಯಾಗಿರುವ ಈ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿರುವ ಗ್ರಾಹಕರಿಗಾಗಿ ಗಿಝ್‌ಬಾಟ್ ಇಂದು ಹತ್ತು ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ. ನಂತರ ಇಷ್ಟವಾದ ತಾಣದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೋ
ವಿಶೇಷತೆ:
ಡ್ಯುಯಲ್ ಸಿಮ್( ಸಿಮ್+ ಮೈಕ್ರೋ ಸಿಮ್)
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920*1080 ಪಿಕ್ಸೆಲ್)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
1.5 Ghz ಕ್ವಾಡ್ ಕೋರ್ ಪ್ರೊಸೆಸರ್
2 GB ರ್‍ಯಾಮ್
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
2000 mAh ಬ್ಯಾಟರಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೋ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

flipkart.com

infibeam.com

saholic.com

snapdeal

yebhi.

thephonestore.in

bigcmobiles

next.co.in

tradus



Click it and Unblock the Notifications





