ದೇಶೀಯ ಮೈಕ್ರೋಮ್ಯಾಕ್ಸ್‌ ಕಂಪೆನಿಗೆ ಹಾಲಿವುಡ್‌ ನಟ ರಾಯಭಾರಿ

Posted By:

ವಿಶ್ವದ ಬಲಾಢ್ಯ ಸ್ಮಾರ್ಟ್‌ಫೋನ್‌ ತಯಾರಿಕ ಕಂಪೆನಿಗಳಿಗೆ ಭಾರತದಲ್ಲಿ ಸೆಡ್ಡು ಹೊಡೆಯುತ್ತಿರುವ ಮೈಕ್ರೋಮ್ಯಾಕ್ಸ್‌ ಕಂಪೆನಿ ಇದೀಗ ವಿಶ್ವ ಮಟ್ಟದಲ್ಲಿ ಈ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಸ್ಪರ್ಧೆ‌ ನೀಡಲು ಆರಂಭಿಸಿದೆ.ಈ ಸಂಬಂಧ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ತನ್ನ ನೂತನ ಸ್ಮಾರ್ಟ್‌ಫೋನ್‌ ಕ್ಯಾನ್‌ವಾಸ್‌ ಟರ್ಬೋ‌ಗೆ ಹಾಲಿವುಡ್‌ ನಟ, 45 ವರ್ಷದ ಆಸ್ಟ್ರೇಲಿಯದ ಹ್ಯೂ ಜ್ಯಾಕ್‌ಮನ್‌ರನ್ನು ಮೈಕ್ರೋಮ್ಯಾಕ್ಸ್‌‌ ನೂತನ ರಾಯಭಾರಿಯಾಗಿ ನೇಮಿಸಿದೆ.

ಅಂತರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ಭಾರತದ ಉತ್ಪನ್ನಗಳ ರಾಯಭಾರಿಗಳಾಗುವುದು ಹೊಸದೇನಲ್ಲ.ಈ ಹಿಂದೆ ಬ್ರಿಯಾನ್‌ ಲಾರಾ,ಸ್ಟೀವ್‌ ವೋ,ಬ್ರೆಟ್‌ಲೀ ಭಾರತದ ಕಂಪೆನಿಗಳಿಗೆ ಭಾರತದಲ್ಲಿ ಮಾತ್ರ ರಾಯಭಾರಿಗಳಾಗಿದ್ದರು. ಆದರೆ ಭಾರತದ ಕಂಪೆನಿಗೆ ಹಾಲಿವುಡ್‌ ಸೆಲೆಬ್ರಿಟಿ ರಾಯಭಾರಿಯಾಗುವುದು ಇದೇ ಮೊದಲು.

ಕ್ಯಾನ್‌ವಾಸ್‌ ಟರ್ಬೋ‌ಗೆ ರಾಯಭಾರಿಯಾಗಿ ನೇಮಕವಾದ ಬಳಿಕ ಪ್ರತಿಕ್ರಿಯಿಸಿದ ಹ್ಯೂ ಜ್ಯಾಕ್‌ಮನ್‌, ನಾನು ಭಾರತದ ದೇಶದ ಅಭಿಮಾನಿ, ಮೈಕ್ರೋಮ್ಯಾಕ್ಸ್‌ ರಾಯಭಾರಿಯಾಗಿ ನೇಮಕವಾದದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

 ದೇಶೀಯ ಮೈಕ್ರೋಮ್ಯಾಕ್ಸ್‌ ಕಂಪೆನಿಗೆ ಹಾಲಿವುಡ್‌ ನಟ ರಾಯಭಾರಿ

ಹೆಚ್ಚಾಗಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಯಶಸ್ವಿಯಾಗುತ್ತಿರುವ ಮೈಕ್ರೋಮ್ಯಾಕ್ಸ್‌, ಭಾರತದಲ್ಲಿ ಶೇ.18 ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದೆ ಎಂದು ಐಡಿಸಿ ತನ್ನ ಅಧ್ಯಯನದಲ್ಲಿ ಹೇಳಿತ್ತು.

ಇದೇ ಜನಪ್ರಿಯತೆಯ ಯಶಸ್ಸಿನಲ್ಲಿರುವ ಮೈಕ್ರೋಮ್ಯಾಕ್ಸ್‌ ಮುಂದಿನ ದಿನಗಳಲ್ಲಿ ಏಷ್ಯಾದ ರಾಷ್ಟ್ರಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದ್ದು ಈ ಕಾರಣಕ್ಕಾಗಿ ಹ್ಯೂ ಜ್ಯಾಕ್‌ಮನ್‌ರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬೆಲೆ ಇಳಿಕೆಯಾಗಿರುವ ಮೈಕ್ರೋಮ್ಯಾಕ್ಸ್‌ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ಗಳು

<center><center><center><center><center><iframe width="100%" height="360" src="http://www.youtube.com/embed/EKXMK8SyUFo?feature=player_embedded" frameborder="0" allowfullscreen></iframe></center></center></center></center></center>

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot