Subscribe to Gizbot

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ‌ ಫುಲ್‌ ಎಚ್‌ಡಿ ಸ್ಮಾರ್ಟ್‌ಫೋನ್‌ ಅಂತೆ!

Posted By:

ಮೈಕ್ರೋಮ್ಯಾಕ್ಸ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌.ಮೈಕ್ರೋಮ್ಯಾಕ್ಸ್‌ ಕಂಪೆನಿಯ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್‌ ಕ್ಯಾನ್‌ವಾಸ್‌ ಟರ್ಬೋ‌ಗೆ ಹೇಗಿರುತ್ತದೆ ಎನ್ನುವುದಕ್ಕೆಈಗ ಈ ಸ್ಮಾರ್ಟ್‌ಫೋನಿನ ಚಿತ್ರಗಳು ಟ್ವೀಟರ್‌ನಲ್ಲಿ ಪ್ರಕಟಗೊಂಡಿದೆ.

ಟ್ವೀಟರ್‌‌ನಲ್ಲಿ MMXNewscaster ಚಿತ್ರವನ್ನು ಪ್ರಕಟಿಸಿದ್ದು ಈ ಮಾಹಿತಿಯಂತೆ ಟರ್ಬೋ‌ ಸ್ಮಾರ್ಟ್‌ಫೋನ್‌ ಐದು ಇಂಚು ಹೊಂದಿದ್ದು ಫುಲ್‌ ಎಚ್‌ಡಿ ಸ್ಕ್ರೀನ್‌ನಲ್ಲಿ ಬರಲಿದೆಯಂತೆ. ಎಷ್ಟು ಪಿಕ್ಸಲ್‌ನಲ್ಲಿ ಬರಲಿದೆ ಎನ್ನುವುದರ ಬಗ್ಗೆ ಮಾಹಿತಿ ಪ್ರಕಟಿಸದಿದ್ದರೂ ಈ ಸ್ಮಾರ್ಟ್‌ಫೋನ್‌‌ ಫುಲ್‌ ಎಚ್‌ಡಿಯಲ್ಲಿ ಬಿಡುಗಡೆಯಾದರೆ, ಮೈಕ್ರೋಮ್ಯಾಕ್ಸ್‌ನ ಫುಲ್‌ ಎಚ್‌ಡಿ ಸ್ಕ್ರೀನ್‌ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಫೋನ್‌ ಎನ್ನುವ ಹೆಗ್ಗಳಿಕೆಯನ್ನು ಈ ಸ್ಮಾರ್ಟ್‌ಫೋನ್‌ ಪಡೆದುಕೊಳ್ಳಲಿದೆ.

ಈಗ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್‌‌ಫೋನ್‌‌ ಫುಲ್‌ ಎಚ್‌ಡಿ ಸ್ಕ್ರೀನ್‌,ಮುಂದುಗಡೆ 5 ಎಂಪಿ ಕ್ಯಾಮೆರಾದೊಂದಿಗೆ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಡ್ಯುಯಲ್‌ ಸಿಮ್‌,1GB ರ್‍ಯಾಮ್‌,13.0 ಎಂಪಿ ಹಿಂದುಗಡೆ ಕ್ಯಾಮೆರಾ,32GB ಆಂತರಿಕ ಮೆಮೊರಿ,ಕ್ವಾಡ್‌ ಕೋರ್‌ ಪ್ರೊಸೆಸರ್‌ ವಿಶೇಷತೆಯನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿರುತ್ತದೆ ಎನ್ನುವ ವದಂತಿಯಿದೆ.

ಮೈಕ್ರೋಮ್ಯಾಕ್ಸ್‌ ಈ ಕ್ಯಾನ್‌ವಾಸ್‌ ಟರ್ಬೋ‌ ಸ್ಮಾರ್ಟ್‌‌‌ಫೋನ್‌ಗೆ ಹಾಲಿವುಡ್‌ ನಟ ಆಸ್ಟ್ರೇಲಿಯದ ಹ್ಯೂ ಜ್ಯಾಕ್‌ಮನ್‌ರನ್ನು ಈಗಾಗಲೇ ನೇಮಿಸಿ ಜಾಹೀರಾತನ್ನು ತಯಾರಿಸಿದೆ. ಹೀಗಾಗಿ ಸದ್ಯದಲ್ಲೇ ಈ ಸ್ಮಾರ್ಟ್‌ಫೋನ್ನು ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಯಾವಾಗ ಬಿಡುಗಡೆ ಮಾಡಲಿದೆ ಎನ್ನುವುದನ್ನು ಮೈಕ್ರೋಮ್ಯಾಕ್ಸ್‌ ತಿಳಿಸಿಲ್ಲ.

ಇದನ್ನೂ ಓದಿ: ಬೆಲೆ ಇಳಿಕೆಯಾಗಿರುವ ಮೈಕ್ರೋಮ್ಯಾಕ್ಸ್‌ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ಗಳು

ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ

ಸದ್ಯದಲ್ಲೇ ಬಿಡುಗಡೆಯಾಗಲಿದೆ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ

ಕ್ಯಾನ್‌ವಾಸ್‌ ಟರ್ಬೋ‌ ವಿಶೇಷತೆಗೆ ಸಂಬಂಧಿಸಿದಂತೆ ಲೀಕ್‌ ಆಗಿರುವ ಚಿತ್ರ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ

ಸದ್ಯದಲ್ಲೇ ಬಿಡುಗಡೆಯಾಗಲಿದೆ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ

13.0 ಎಂಪಿ ಹಿಂದುಗಡೆ ಕ್ಯಾಮೆರಾ

ಕ್ಯಾನ್‌ವಾಸ್‌ ಟರ್ಬೋ

ಸದ್ಯದಲ್ಲೇ ಬಿಡುಗಡೆಯಾಗಲಿದೆ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ

13.0 ಎಂಪಿ ಹಿಂದುಗಡೆ ಕ್ಯಾಮೆರಾ

ಕ್ಯಾನ್‌ವಾಸ್‌ ಟರ್ಬೋ

ಸದ್ಯದಲ್ಲೇ ಬಿಡುಗಡೆಯಾಗಲಿದೆ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ

ಕ್ಯಾನ್‌ವಾಸ್‌ ಟರ್ಬೋ

ಸದ್ಯದಲ್ಲೇ ಬಿಡುಗಡೆಯಾಗಲಿದೆ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ


ಹ್ಯೂ ಜ್ಯಾಕ್‌ಮನ್‌ ರಾಯಭಾರಿಯಾಗಿರುವ ಜಾಹೀರಾತು ವಿಡಿಯೋ

ಸದ್ಯದಲ್ಲೇ ಬಿಡುಗಡೆಯಾಗಲಿದೆ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ


MMXNewscaster ಟ್ವೀಟರ್‌ನಲ್ಲಿ ಪ್ರಕಟಿಸಿರುವ ಚಿತ್ರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot