Subscribe to Gizbot

ಮೈಕ್ರೋಮ್ಯಾಕ್ಸ್‌ನ ಕ್ಯಾನ್‌ವಾಸ್ XL2 A109 ಮಾರುಕಟ್ಟೆಗೆ

Written By:

ಕೆಲವು ದಿನಗಳ ಹಿಂದೆಯಷ್ಟೇ, ಭಾರತದ ಅತ್ಯತ್ತಮ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್ ಕ್ಯಾಮಿಯೋ A290 ಹೆಸರಿನ ಸೆಟ್ ಅನ್ನು ಲಾಂಚ್ ಮಾಡಿದೆ. ಇದರ ಬೆನ್ನಿಗೇನೇ ಕಂಪೆನಿ ನೋಕಿಯಾದ ಫೀಚರ್ ಪೋನ್ ಅನ್ನು ಸೋಲಿಸುವ ನಿಟ್ಟಿನಲ್ಲಿ ಇನ್ನೊಂದು ಡಿವೈಸ್ ಅನ್ನು ಲಾಂಚ್ ಮಾಡಿದೆ ಫೋನ್ ಹೆಸರು ಕ್ಯಾನ್‌ವಾಸ್ XL2 A109 ಆಗಿದ್ದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು ಪಟ್ಟಿಮಾಡಿದೆ.

ಇದುವೆರೆಗೆ ಕಂಪೆನಿ ಸೆಟ್ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ ಇದರ ಬೆಲೆ ಮತ್ತು ಲಭ್ಯತೆಯ ಕುರಿತು ಇನ್ನೂ ಮಾಹಿತಿಗಾಗಿ ಮೈಕ್ರೋಮ್ಯಾಕ್ಸ್ ಪ್ರೇಮಿಗಳು ಕಾಯಬೇಕಾಗಿದೆ.

ಮೈಕ್ರೋಮ್ಯಾಕ್ಸ್‌ನಿಂದ ಕ್ಯಾನ್‌ವಾಸ್ XL2 A109 ಭರ್ಜರಿ ಲಾಂಚ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ XL2 A109 ವಿಶೇಷತೆಗಳನ್ನು ನೋಡುವುದಾದರೆ ಇದು 5.5 ಇಂಚಿನ ಟಚ್ ಸ್ಕ್ರೀನ್ IPS ಡಿಸ್‌ಪ್ಲೇಯನ್ನು ಒದಗಿಸುತ್ತಿದ್ದು ಇದರ ರೆಸಲ್ಯೂಶನ್ 960×540 ಪಿಕ್ಸೆಲ್‌ಗಳಾಗಿವೆ. ಫೋನ್ 1.2 GHz ಕ್ವಾಡ್ ಕೋರ್ MediaTek MT6592M ಪ್ರೊಸೆಸರ್ ಜೊತೆಗೆ Mali 400 GPU ಅನ್ನು ಒಳಗೊಂಡಿದೆ ಇದರ RAM 1 ಜಿಬಿಯದಾಗಿದೆ. ಡಿವೈಸ್ ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್ ಅನ್ನು ಚಾಲನೆ ಮಾಡುತ್ತಿದ್ದು ಇದರ ರಿಯರ್ ಕ್ಯಾಮೆರಾ 5MP ಆಗಿದೆ ಮತ್ತು ಮುಂಭಾಗ ಕ್ಯಾಮೆರಾ 0.3MPಯದಾಗಿದೆ.

ಇದು ಡ್ಯುಯೆಲ್ ಸಿಮ್‌ನೊಂದಿಗೆ ಡ್ಯುಯಲ್ ಸ್ಟ್ಯಾಂಡ್‌ಬೈ ಅನ್ನು ಒಳಗೊಂಡಿದ್ದು ಇದರ ಆಂತರಿಕ ಮೆಮೊರಿ 4 ಜಿಬಿಯದಾಗಿದೆ ಇದನ್ನು ನಿಮಗೆ 32 ಜಿಬಿಗೆ ವಿಸ್ತರಿಸಬಹುದಾಗಿದೆ. ಫೋನ್‌ನಲ್ಲಿರುವ ಸಂಪರ್ಕ ಅಂಶಗಳೆಂದರೆ ಮೈಕ್ರೋಎಸ್‌ಡಿ, 3 ಜಿ, ವೈಫೈ, ಬ್ಲ್ಯೂಟೂತ್ 4.0, A2DP, GPS / aGPS ಹಾಗೂ ಬ್ಯಾಟರಿ 2500mAh ಆಗಿದೆ.

ಕ್ಯಾನ್‌ವಾಸ್ ನೈಟ್ ಕ್ಯಾಮಿಯೋ A290 ರೀಟೈಲ್ ತಾಣಗಳಲ್ಲಿ

English summary
This article tells about Micromax Canvas XL2 A109 With 5.5-inch Display Gets Listed On Official Company Website.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot