ಮಾರುಕಟ್ಟೆಯತ್ತ ಮುಖ ಮಾಡಿರುವ ಮೈಕ್ರೋಮ್ಯಾಕ್ಸ್ 'ಯು'

By Shwetha
|

ಸ್ಥಳೀಯ ಸ್ಮಾರ್ಟ್‌ಫೋನ್ ವ್ಯವಹಾರದಲ್ಲಿ ಮೈಕ್ರೋಮ್ಯಾಕ್ಸ್ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಕಂಪೆನಿಯಾಗಿದ್ದು ಭಾರತದಲ್ಲಿ ಮಾತ್ರವಲ್ಲದೆ ರಷ್ಯಾ ಮತ್ತು ರೊಮೇನಿಯಾದಲ್ಲೂ ತನ್ನ ವ್ಯವಹಾರವನ್ನು ಕುದುರಿಸುವ ನಿಟ್ಟಿನಲ್ಲಿ ಇದು ಕಾರ್ಯನಿರತವಾಗಿದೆ.

ಇದನ್ನೂ ಓದಿ: ಮನ ಕದಿಯುವ ಕಿಟ್‌ಕ್ಯಾಟ್ ಫೋನ್ಸ್ ರೂ 3,000 ಕ್ಕೆ

ಇನ್ನು ಕಂಪೆನಿ ಹೊಸ ಬ್ರ್ಯಾಂಡ್ ಹೆಸರಾದ 'ಯು' ಅಡಿಯಲ್ಲಿ ಹೊಸ ಶ್ರೇಣಿಯ ಫೋನ್‌ಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿದ್ದು ಡಿಸೆಂಬರ್ 2014 ರಿಂದ ವಿಶೇಷವಾಗಿ ಆನ್‌ಲೈನ್‌ನಲ್ಲಿ ಈ ಫೋನ್‌ಗಳ ಮಾರಾಟವನ್ನು ನಿಮಗೆ ಕಾಣಬಹುದು. ಇನ್ನು ಮೈಕ್ರೋಮ್ಯಾಕ್ಸ್‌ನ ಯು ಬ್ರ್ಯಾಂಡ್ ಸುತ್ತ ಹೆಚ್ಚಿನ ನಿರೀಕ್ಷೆಗಳು ಗಿರಕಿ ಹೊಡೆಯುತ್ತಿವೆ ಎಂದೇ ಹೇಳಬಹುದು.

ಮೈಕ್ರೋಮ್ಯಾಕ್ಸ್ 'ಯು' ಏನಿದು ಗೊತ್ತೇ?

ನೀವು ಇದುವರೆಗೆ ಕಂಡರಿಯದ ಕೇಳರಿಯದ ಹೊಸ ಹೊಸ ವಿಶೇಷತೆಗಳನ್ನು ಈ ಬ್ರ್ಯಾಂಡ್ ಅಡಿಯಲ್ಲಿ ಪಡೆಯಬಹುದಾಗಿದ್ದು ನಿಜಕ್ಕೂ ಇದು ದಂಗುಬಡಿಸುವ ನಿಟ್ಟಿನಲ್ಲಿದೆ ಎಂಬುದನ್ನು ಹೆಸರಿನಿಂದಲೇ ನಮಗೆ ಅರಿಯಬಹುದಾಗಿದೆ. ಹಾಗಿದ್ದರೆ ಈ ಹೊಸ ಬ್ರ್ಯಾಂಡ್ ಬಗ್ಗೆ ಇಂದಿನ ಲೇಖನದಲ್ಲಿ ಐದು ವಿಶೇಷತೆಗಳನ್ನು ನಾವು ನೀಡಹೊರಟಿದ್ದು ಇದು ಖಂಡಿತ ನಿಮ್ಮಲ್ಲಿ ಕುತೂಹಲವನ್ನು ಹೆಚ್ಚಿಸಲಿದೆ.

ಇದು ಬರಿಯ ಪ್ರಾರಂಭ, ವೈಶಿಷ್ಟ್ಯವಲ್ಲ
ಈ ವರ್ಷದಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಒನ್ ಮೂಲಕ ಮಾಡಿರುವ ಪ್ರಾರಂಭವನ್ನು ನೀವು ಮರೆತಿರಲಾರಿರಿ ಇದೇ ಬಗೆಯಲ್ಲಿ ಮೈಕ್ರೋಮ್ಯಾಕ್ಸ್ 'ಯು' ಬ್ರ್ಯಾಂಡ್ ಅಡಿಯಲ್ಲಿ ಫೋನ್‌ಗಳನ್ನು ಲಾಂಚ್ ಮಾಡುತ್ತಿದ್ದು ಮೈಕ್ರೋಮ್ಯಾಕ್ಸ್ ಹೆಸರು ಹಾಗೆಯೇ ಉಳಿಯಲಿದೆ. ಕಂಪೆನಿಯ ಪ್ರಾರಂಭ ಹೆಜ್ಜೆಯಾಗಿ ಇದನ್ನು ನಮಗೆ ಪರಿಗಣಿಸಬಹುದು.

ಮೈಕ್ರೋಮ್ಯಾಕ್ಸ್ 'ಯು' ಏನಿದು ಗೊತ್ತೇ?

ಹೊಸ ಫೋನ್‌ಗಳ ಲಭ್ಯತೆ
ಮೈಕ್ರೋಮ್ಯಾಕ್ಸ್ 'ಯು' ಬ್ರ್ಯಾಂಡ್ ಮೂಲಕ ಬರಿಯ ಫೋನ್ ಅನ್ನು ಮಾತ್ರವಲ್ಲದೆ ಗ್ರಾಹಕರಿಗೆ ಅಪ್ಯಾಯಮಾನವಾದುದನ್ನು ನೀಡಲಿದೆ. ನಿಜಕ್ಕೂ ಕಂಪೆನಿಯ ಹೊಸ ಹೆಜ್ಜೆಯಾಗಿ ಇದನ್ನು ಪರಿಗಣಿಸಬಹುದಾಗಿದೆ.

ಮೈಕ್ರೋಮ್ಯಾಕ್ಸ್ 'ಯು' ಏನಿದು ಗೊತ್ತೇ?

ಸಿನೋಜೆನ್ ಪವರ್
ಹೆಚ್ಚು ಸುಧಾರಿತ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ ಸಿನೋಜೆನ್. ಅಧಿಕೃತ ಆಂಡ್ರಾಯ್ಡ್ ಆಧಾರಿತ ಫರ್ಮ್‌ವೇರ್‌ಗಳಲ್ಲಿ ಇಲ್ಲದ ವಿಶೇಷತೆಗಳನ್ನು ಈ ಆಪರೇಟಿಂಗ್ ಸಿಸ್ಟಮ್ ನಿಮಗೆ ಒದಗಿಸುತ್ತದೆ.

ಮೈಕ್ರೋಮ್ಯಾಕ್ಸ್ 'ಯು' ಏನಿದು ಗೊತ್ತೇ?

ಸಿನೋಜೆನ್ ಥೀಮ್ಸ್
ಸಿನೋಜೆನ್ ತನ್ನ ಮುಂಬರಲಿರುವ ಥೀಮ್ಸ್ ಅಪ್ಲಿಕೇಶನ್ ಅನ್ನು ಈಗಾಗಲೇ ಘೋಷಿಸಿದ್ದು ಇದು ಸಿನೋಜೆನ್ ಓಎಸ್ ಬಳಕೆದಾರರಿಗೆ ಉಚಿತವಾಗಿ ಬ್ರೌಸ್ ಮಾಡಲು ಮತ್ತು ಡೌನ್‌ಲೋಡ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.

ಮೈಕ್ರೋಮ್ಯಾಕ್ಸ್ 'ಯು' ಏನಿದು ಗೊತ್ತೇ?

ಹೊಸ ಸಿಒಒ
ಮೈಕ್ರೋಮ್ಯಾಕ್ಸ್ 'ಯು ' ಶೀಘ್ರದಲ್ಲೇ ಬರುತ್ತಿದ್ದು ಕಂಪೆನಿಯು ಅದ್ಭುತ ಸಾಧನೆಯನ್ನು ಸಾಧಿಸುವುದು ನಿಜವಾಗಿದೆ. ಇನ್ನು ಪ್ರಾರಂಭಿಕರಿಗಾಗಿ, ಕಂಪೆನಿಯು ಈಗಾಗಲೇ ಅಮೃಂದರ್ ಎಸ್ ದಲಿವಾಲ್‌ರನ್ನು ನಿಯೋಜಿಸಿದ್ದು ಹೊಸ ಇಂಟರ್ನೆಟ್ ಬ್ರ್ಯಾಂಡ್‌ನ ಮುಖ್ಯ ಆಪರೇಟಿಂಗ್ ಅಧಿಕಾರಿಯಾಗಿ ಇವರು ಕಾರ್ಯನಿರ್ವಹಿಸಲಿದ್ದಾರೆ.

ಮೈಕ್ರೋಮ್ಯಾಕ್ಸ್ 'ಯು' ಏನಿದು ಗೊತ್ತೇ?
Best Mobiles in India

English summary
This article tells about Micromax is one of the growing names as far as native smartphone business is concerned. The company has been around in the scene for quite some time, and it still manages to carry on its business in not only India, but in markets such as Russia and Romania as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X