ವಿದೇಶಾಂಗ ಇಲಾಖೆಯ ಆಪ್ ರೆಡಿ: ವೀಸಾ,ಪಾಸ್‌ಪೋರ್ಟ್ ಪ್ರಕ್ರಿಯೆ ಸುಲಭ
ವೀಸಾ ,ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆ ಇನ್ನು ಮುಂದೆ ಸುಗಮವಾಗಲಿದೆ. ಈ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಭಾರತದ ವಿದೇಶಾಂಗ ಇಲಾಖೆ ನಿರ್ಧರಿಸಿದ್ದು, ವೀಸಾ, ಪಾಸ್‌ಪೋರ್ಟ್‌ಗಾಗಿ ವಿಶೇಷ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.
ವೀಸಾ, ಪಾಸ್‌ಪೋರ್ಟ್ ಪ್ರಕ್ರಿಯೆಗಳಿಗೆ ವಿವಿಧ ಇಲಾಖೆ,ಅಧಿಕಾರಿಗಳ ಅನುಮತಿ ಅಗತ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಈ ಪ್ರಕ್ರಿಯೆ ಸುಗಮಗೊಳಿಸಲು ಈ ಎಲ್ಲಾ ಇಲಾಖೆಗಳ ಅನುಮತಿ ಪ್ರಕ್ರಿಯೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಇಲಾಖೆ ಈಗ ಅಪ್ಲಿಕೇಶನ್ ಅಭಿವೃದ್ಧಿಪಡಿಸುವುದಾಗಿ ಇಲಾಖೆ ಕಳೆದ ತಿಂಗಳು ತಿಳಿಸಿತ್ತು.ಹೀಗಾಗಿ ಮಾಧ್ಯಮಗಳಿಗೆ ತಿಳಿಸಿದಂತೆ ಒಂದು ತಿಂಗಳಿನಲ್ಲಿ ಈ ವಿದೇಶಾಂಗ ಇಲಾಖೆ ಈ ಅಪ್ಲಿಕೇಶನ್ ಸಜ್ಜುಗೊಳಿಸಿ ಬಿಡುಗಡೆಮಾಡಿದೆ.

ಅಪ್ಲಿಕೇಶನ್‌ಲ್ಲಿ ಈ ಕೆಳಕಂಡ ಮಾಹಿತಿಗಳಿವೆ:
ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ, ಹತ್ತಿರದ ಪಾಸ್‌ಪೋರ್ಟ್ ಆಫೀಸ್,ಪಾಸ್‌ಪೋರ್ಟ್ ಶುಲ್ಕದ ಮಾಹಿತಿ, ಪಾಸ್‌ಪೋರ್ಟ್ ಸಲ್ಲಿಸುವ ಅರ್ಜಿಯನ್ನು ಈ ಅಪ್ಲಿಕೇಶನ್ ಮೂಲಕ ಡೌನ್‌ಲೋಡ್ ಮಾಡಬಹುದು.
ವೀಸಾ ಹೇಗೆ ಪಡೆಯಬಹುದು ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ. ಜೊತೆಗೆ ವೀಸಾ ದಾಖಲೆಗಳನ್ನು ಹೇಗೆ ಸಲ್ಲಿಸಬೇಕು ಎನ್ನುವ ಮಾಹಿತಿ ಸಾಮಾನ್ಯ ಜನರಿಗೆ ಅರ್ಥವಾಗಲು ವೀಸಾಕ್ಕೆ ಸಂಬಂಧಿಸಿದ ಪ್ರಶ್ನೆ ಮತ್ತು ಉತ್ತರ ಈ ಅಪ್ಲಿಕೇಶನ್‌ಲ್ಲಿ ನೀಡಲಾಗಿದೆ.
ಹಜ್ ಯಾತ್ರಾರ್ಥಿಗಳಿಗಾಗಿ ,ಹಜ್ ಸೇವೆಗಳ ಮಾಹಿತಿ ವಿಮಾನ ಮತ್ತು ತಂಗುವ ಸ್ಥಳಗಳ ಮಾಹಿತಿ, ಅಮರನಾಥ ಯಾತ್ರಿಗಳಿಗಾಗಿ ಯಾತ್ರೆಯ ಸಂಪೂರ್ಣ ಮಾಹಿತಿ, ಹೆಚ್ಚಿನ ಮಾಹಿತಿಗೆ ಸಂಪರ್ಕಿಸುವ ಸಂಪರ್ಕ ವಿಳಾಸ, ಅರ್ಜಿಗಳು ಎಲ್ಲವೂ ಈ ಅಪ್ಲಿಕೇಶನ್‌ಲ್ಲಿ ಲಭ್ಯವಿದೆ.
ಮೀಡಿಯಾದವರಿಗೆ ಮಾಹಿತಿ ನೀಡಲು ಒಂದು ವಿಭಾಗವನ್ನು ತೆರೆದಿದ್ದಾರೆ. ಲೋಕಸಭಾ ಮತ್ತು ರಾಜ್ಯಸಭಾ ಕಲಾಪದ ಮಾಹಿತಿ ಸರ್ಕಾರದ ಉತ್ತರ, ಅಲ್ಲದೇ ಎರಡು ಸದನಗಳ ಪತ್ರಿಕಾ ಬಿಡುಗಡೆ ಮಾಹಿತಿ ಈ ವಿಭಾಗದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ವಿದೇಶಾಂಗ ಇಲಾಖೆಗೆ ಸಂಬಂಧಿಸಿಂತೆ ವಿವಿಧ ದೇಶಗಳ ನಡುವಿನ ಒಪ್ಪಂದಗಳ ಮಾಹಿತಿ,ಫೋಟೋ,ವೀಡಿಯೋ ಗ್ಯಾಲರಿ ಸಹ ಈ ಅಪ್ಲಿಕೇಶನ್‌ನಲ್ಲಿದೆ.
ಇನ್ನೂ ಪ್ರಧಾನಿ ಮತ್ತು ವಿದೇಶಾಂಗ ಇಲಾಖೆ ಮಂತ್ರಿಗಳು ಬೇರೆ ದೇಶಗಳಿಗೆ ಪ್ರವಾಸ ಹೋದ ಸಂದರ್ಭದಲ್ಲಿ ಅವರ ಭೇಟಿ ವಿವರಗಳನ್ನು ಈ ಅಪ್ಲಿಕೇಶನ್ ಮೂಲಕ ಸಂಪೂರ್ಣವಾಗಿ ನೋಡಬಹುದಾಗಿದೆ.
ಅಷ್ಟೇ ಅಲ್ಲದೇ ನೀವು ನೇರವಾಗಿ ಈ ಅಪ್ಲಿಕೇಶನ್ ಮೂಲಕ ವಿದೇಶಾಂಗ ಇಲಾಖೆಯ ಮಂತ್ರಿಗೆ ಪ್ರಶ್ನೆಯನ್ನು ಕೇಳವ ಆಯ್ಕೆಯನ್ನು ನೀಡಲಾಗಿದೆ.'Ask your minister option ' ವಿಭಾಗದಲ್ಲಿ ಜನರು ಮಂತ್ರಿಗೆ ನೇರವಾಗಿ ಪ್ರಶ್ನೆ ಕೇಳಬಹುದಾಗಿದೆ.
ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :ಗೂಗಲ್ ಪ್ಲೇ ಸ್ಟೋರ್
ಐಓಎಸ್ ಆಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಐಟ್ಯೂನ್ ಸ್ಟೋರ್
ಇದನ್ನೂ ಓದಿ: ಎಸ್‌ಎಂಎಸ್ ಮೂಲಕ ರೈಲ್ ಟಿಕೆಟ್ ಬುಕ್ ಮಾಡುವುದು ಹೇಗೆ?


Click it and Unblock the Notifications