'ಮೋಟೋ ಇ3' ಸ್ಮಾರ್ಟ್‌ಫೋನ್‌ ಸೆ.19 ಕ್ಕೆ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?

By Suneel
|

ಲೆನೊವೋ ಸೆಪ್ಟೆಂಬರ್‌ 19 ರಂದು ವಿಶೇಷ ಸಮಾರಂಭವನ್ನು ಭಾರತದಲ್ಲಿ ಹಮ್ಮಿಕೊಂಡಿದೆ. ವಿಶೇಷ ಸಮಾರಂಭದಲ್ಲಿ ಲೆನೊವೋ 'ಮೋಟೋ ಇ3 (Moto E3)' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಬಿಡುಗಡೆ ಮಾಡಿದ ನಂತರದಲ್ಲಿ ಇದೇ ತಿಂಗಳಲ್ಲಿ 'ಮೋಟೋ ಇ3' ಸ್ಮಾರ್ಟ್‌ಫೋನ್‌ ಮಾರಾಟಕ್ಕೆ ಬರಲಿದೆ ಎಂದು ಲೆನೊವೊ APAC ಅಧ್ಯಕ್ಷ 'ಕೆನ್‌ ವಾಂಗ್' ಹೇಳಿದ್ದಾರೆ.

'ಮೋಟೋ ಇ3' ಸ್ಮಾರ್ಟ್‌ಫೋನ್‌ ಸೆ.19 ಕ್ಕೆ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?

'ಮೋಟೋ ಇ3 (Moto E3)' ಉತ್ತಮ ಬೇಸಿಕ್ ಫೀಚರ್‌ಗಳನ್ನು ಹೊಂದಿರುವ ಬಜೆಟ್‌ ಬೆಲೆ ಸ್ಮಾರ್ಟ್‌ಫೋನ್‌. ಆಂಡ್ರಾಯ್ಡ್ 6.0.1 ಮಾರ್ಷ್‌ಮಲ್ಲೊ ಓಎಸ್‌ನಿಂದ ರನ್‌ ಆಗುತ್ತದೆ. 5 ಇಂಚಿನ HD ಐಪಿಎಸ್ ಡಿಸ್‌ಪ್ಲೇ ಫೀಚರ್‌ ಹೊಂದಿದೆ. 1.0GHz ಮೀಡಿಯಾಟೆಕ್ ಕ್ವಾಡ್‌ಕೋರ್‌ ಚಾಲಿತವಾಗಿದ್ದು, ಚಿಪ್‌ಸೆಟ್‌ ಜೊತೆಗೆ 1GB RAM, 8GB ಆಂತರಿಕ ಮೆಮೊರಿ ಹೊಂದಿದೆ. 32GB ವರೆಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಶೇಖರಣ ಸಾಮರ್ಥ್ಯ ಹೆಚ್ಚಿಸಬಹುದು.

'ಮೋಟೋ ಇ3' 8MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ ಫೀಚರ್‌ ಹೊಂದಿದೆ. ಸಂಪರ್ಕ ಫೀಚರ್‌ಗಳಲ್ಲಿ 3G, 4G, ಬ್ಲುಟೂತ್‌, ಜಿಪಿಎಸ್‌, ವೈಫೈ 802.11/b/gn ಇವೆ. 2800mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

'ಮೋಟೋ ಇ3' ಸ್ಮಾರ್ಟ್‌ಫೋನ್‌ ಸೆ.19 ಕ್ಕೆ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?

'ಮೋಟೋ ಇ3 (Moto E3)' ಸ್ಮಾರ್ಟ್‌ಫೋನ್‌ನ ಇತರೆ ಭಿನ್ನತೆ ಎಂದರೆ ''ಮೋಟೋ ಇ3 ಪವರ್‌' ಎಂದು ಕರೆಯಲಾಗುವ 'ಮೋಟೋ ಇ3 (Moto E3)'ಯನ್ನು ಭಾರತದಲ್ಲಿ ಬಿಡುಗಡೆ ಮಾಡಬೇಕು ಎಂದು ಲೆನೊವೋ ಇತ್ತೀಚೆಗೆ ತೀರ್ಮಾನ ಮಾಡಿದೆಯಂತೆ. 'ಮೋಟೋ ಇ3 ಪವರ್‌' 3500mAn ಬ್ಯಾಟರಿ ಸಾಮರ್ಥ್ಯ, 2GB RAM, 16GB ಸ್ಟೋರೇಜ್‌ ಫೀಚರ್‌ ಹೊಂದಿದ್ದು, 128GB ವರೆಗಿನ ಮೈಕ್ರೋಎಸ್‌ಡಿ ಕಾರ್ಡ್ ಸಪೋರ್ಟ್ ಮಾಡುತ್ತದೆ.

'ಮೋಟೋ ಇ3' ಸ್ಮಾರ್ಟ್‌ಫೋನ್‌ ಸೆ.19 ಕ್ಕೆ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?

ಆದರೆ ಲೆನೊವೋ ಭಾರತದಲ್ಲಿ ಸೆಪ್ಟೆಂಬರ್‌ 19 ರಂದು ನಡೆಯಲಿರುವ ಡಿವೈಸ್‌ ಬಿಡುಗಡೆ ಸಮಾರಂಭದಲ್ಲಿ 'ಮೋಟೋ ಇ3 (Moto E3)' ಮತ್ತು 'ಮೋಟೋ ಇ3 ಪವರ್‌' ಎರಡನ್ನು ಬಿಡುಗಡೆ ಮಾಡುವುದೇ ಎಂಬದರ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ವಿಶೇಷ ವೆಂದರೆ ಎರಡು ಸ್ಮಾರ್ಟ್‌ಫೋನ್‌ಗಳು ಸಹ 4G ಸಪೋರ್ಟ್ ಫೀಚರ್‌ ಹೊಂದಿವೆ. 'ಮೋಟೋ ಇ3 (Moto E3)' ಬೆಲೆ ಸುಮಾರು $177.76 (11,834 ರೂ) ಇರಬಹುದು ಎಂಬುದನ್ನು ಉನ್ನತ ಮೂಲಗಳಿಂದ ತಿಳಿಯಲಾಗಿದ್ದು, ಖಚಿತವಾಗಿ ತಿಳಿದಿಲ್ಲ.

ಲಾಲಿಪಪ್ ಆವೃತ್ತಿಯ ಮೋಟೋರೋಲಾ ಡಿವೈಸ್‌ಗಳು ಮಾರುಕಟ್ಟೆಗೆ

Best Mobiles in India

Read more about:
English summary
Moto E3 to Launch in India on September 19. Read more about this device specification in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X