ಲಾಲಿಪಪ್ ಆವೃತ್ತಿಯ ಮೋಟೋರೋಲಾ ಡಿವೈಸ್‌ಗಳು ಮಾರುಕಟ್ಟೆಗೆ

By Shwetha
|

ಮೋಟೋರೋಲಾ ಎರಡು ಆವೃತ್ತಿಗಳಲ್ಲಿ ಫೋನ್ ಅನ್ನು ಹೊರತಂದಿದ್ದು, 3 ಜಿ ಮಾಡೆಲ್ ಫೋನ್ ಇವುಗಳಾಗಿವೆ ಎಂಬುದನ್ನು ಒತ್ತಿ ಹೇಳಬೇಕಾಗಿದೆ. ಮೋಟೋರೋಲಾ ಮೋಟೋ ಇ ಮತ್ತು ಮೋಟೋರೋಲಾ ಮೋಟೋ ಇ ಎಲ್‌ಟಿ ಇ ಎಂಬ ಈ ಎರಡು ಡಿವೈಸ್‌ಗಳು ರೂ 7,400 ಮತ್ತು ರೂ 9,200 ರಲ್ಲಿ ದೊರೆಯುತ್ತಿದೆ.

ನ್ಯೂ ಮೋಟೋ ಇ ಮತ್ತು ಮೋಟೋ ಇ ಎಲ್‌ಟಿಇ 50 ದೇಶಗಳಲ್ಲಿ ಬಿಡುಗಡೆಯಾಗುತ್ತಿದ್ದು, ಉತ್ತರ ಅಮೇರಿಕಾ, ಲ್ಯಾಟೀನ್ ಅಮೇರಿಕಾ, ಯುರೋಪ್ ಮತ್ತು ಏಷ್ಯಾದಲ್ಲಿ ಘೋಷಿತವಾಗಿದೆ.

ಲಾಲಿಪಪ್ ಆವೃತ್ತಿಯ ಮೋಟೋರೋಲಾ ಡಿವೈಸ್‌ಗಳು ಮಾರುಕಟ್ಟೆಗೆ

ನಾವು ನೆಕ್ಸ್ಟ್ ಜನರೇಶನ್ ಫೋನ್ ಅನ್ನು ಬಳಕೆದಾರರಿಗಾಗಿ ಪರಿಚಯಿಸುತ್ತಿದ್ದು ಇದು ಹೆಚ್ಚಿನ ಫೀಚರ್‌ಗಳು ಮತ್ತು ಫಂಕ್ಶನಾಲಿಟಿಯಿಂದ ಬಳಕೆದಾರರ ಮನವನ್ನು ಗೆಲ್ಲಲಿದೆ. ಮತ್ತು ಇದು ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೆ ದೊರೆಯಲಿದ್ದು ಬಳಕೆದಾರರಿಗೆ ಸಹಕಾರಿ ಎಂದೆನಿಸಲಿದೆ.

ನ್ಯೂ ಮೋಟೋ ಇ ಮತ್ತು ಮೋಟೋ ಇ (ಜನರೇಶನ್ 2) ಎಲ್‌ಟಿಇ ನಲ್ಲಿ ಆಂಡ್ರಾಯ್ಡ್ 5.0 ಲಾಲಿಪಪ್ ಇದ್ದು, ಸಿಂಗಲ್ ಸಿಮ್‌ಗೆ ಬೆಂಬಲವನ್ನು ಒದಗಿಸುತ್ತಿದೆ. 3ಜಿ ಆವೃತ್ತಿಯ ಮೋಟೋ ಇ (ಜನ್ 2) ಕ್ವಾಡ್ ಕೋರ್ 1.2GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಸಾಕ್ ಇದ್ದು 64 ಬಿಟ್ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಸಾಕ್ ಇದರಲ್ಲಿದೆ. 1 ಜಿಬಿ RAM ಎರಡೂ ಡಿವೈಸ್‌ಗಳಲ್ಲಿದೆ.

ಲಾಲಿಪಪ್ ಆವೃತ್ತಿಯ ಮೋಟೋರೋಲಾ ಡಿವೈಸ್‌ಗಳು ಮಾರುಕಟ್ಟೆಗೆ

ಮೋಟೋರೋಲಾ ಮೋಟೋ ಇ (ಜನ್ 2) ಮತ್ತು ಅದರ ಎಲ್‌ಟಿಇ ಆವೃತ್ತಿಯು 4.5 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು 245ಪಿಪಿಐ ಇದರಲ್ಲಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಡಿವೈಸ್‌ನಲ್ಲಿದ್ದು ಆಂಟಿ ಸ್ಮಡ್ಜ್ ಕೋಟಿಂಗ್ ಅನ್ನು ಫೋನ್‌ನಲ್ಲಿ ಕಾಣಬಹುದಾಗಿದೆ. ಇನ್ನು 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು, ವಿಜಿಎ ಶೈಲಿಯ ಮುಂಭಾಗ ಕ್ಯಾಮೆರಾವನ್ನು ಫೋನ್ ಹೊಂದಿದೆ. ಫೋನ್‌ಗಳು ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಕೂಡ ಒಳಗೊಂಡಿದೆ. ಎರಡೂ ಡಿವೈಸ್‌ಗಳು ವೈಫೈ, ಬ್ಲ್ಯೂಟೂತ್, ಎಫ್‌ಎಮ್ ರೇಡಿಯೊ, ಮೈಕ್ರೊ ಯುಎಸ್‌ಬಿಯನ್ನು ಹೊಂದಿದೆ. ಇನ್ನು ಬ್ಯಾಟರಿ 2390mAh ಆಗಿದೆ. ಹಿಂದಿನ ಡಿವೈಸ್‌ಗಿಂತಲೂ ಈ ಬ್ಯಾಟರಿ ದೊಡ್ಡದಾಗಿದೆ.

Best Mobiles in India

English summary
This article tells about Motorola Moto E (Gen 2) With Android 5.0 Lollipop and LTE Variant Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X