Subscribe to Gizbot

ಮೋಡಿ ಮಾಡಲು ಬಂದಿದೆ ಮೊಟೊ E4 ಪ್ಲಸ್: ಏನೀದೆ ಅಂತಹ ವಿಶೇಷತೆ..?

Written By:

ಲಿನೊವೊ ಒಡೆತನಕ್ಕೆ ಸೇರಿರುವ ಮೊಟೊರೊಲಾ ಭಾರತೀಯ ಮಾರುಕಟ್ಟೆಯಲ್ಲಿ ಮೊಟೊ E4 ಪ್ಲಸ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಫ್ಲಿಪ್ ಕಾರ್ಟ್ ನಲ್ಲಿ ಮಾತ್ರವೇ ದೊರೆಯಲಿರುವ ಈ ಸ್ಮಾರ್ಟ್‌ಫೋನ್ ಎಲ್ಲಾ ವಿಧದಲ್ಲಿಯೂ ಫರ್ಫೆಟ್ ಎನ್ನುವ ಹಾಗಿದೆ. ಉತ್ತಮ ಬ್ಯಾಟರಿ, ಉತ್ತಮ ಪ್ರೋಸೆಸರ್ ಹಾಗೂ ಉತ್ತಮ ವಿನ್ಯಾಸವನ್ನು ಕಾಣಬಹುದಾಗಿದೆ.

ಮೋಡಿ ಮಾಡಲು ಬಂದಿದೆ ಮೊಟೊ E4 ಪ್ಲಸ್: ಏನೀದೆ ಅಂತಹ ವಿಶೇಷತೆ..?

ಓದಿರಿ: ಜಿಯೋಗೆ ರಿಚಾರ್ಜ್ ಮಾಡಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ...!

ಮೊಟೊ E4 ಪ್ಲಸ್ ರೂ. 9,999ಕ್ಕೆ ಲಾಂಚ್ ಆಗಿದ್ದು, ಈ ಬೆಲೆಯಲ್ಲಿ ಸಾಕಷ್ಟು ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಹ ಮೊಟೊ E4 ಪ್ಲಸ್ ವಿಭಿನ್ನವಾಗಿ ನಿಲ್ಲಲಿದೆ ಎನ್ನಲಾಗಿದೆ. ಇದು ನೇರವಾಗಿ ರೆಡ್‌ಮಿ ನೋಟ್ 4 ಮತ್ತು ನೋಕಿಯಾ 3 ಸ್ಮಾರ್ಟ್‌ಫೋನಿಗೆ ಸ್ಪರ್ಧೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಹೇಗಿದೆ..?

ಡಿಸ್‌ಪ್ಲೇ ಹೇಗಿದೆ..?

ಮೊಟೊ E4 ಪ್ಲಸ್ ಸ್ಮಾರ್ಟ್‌ಪೋನಿನಲ್ಲಿ 5.5 ಇಂಚಿನ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ಹೊಂದಿದೆ. ಇಲ್ಲದೇ ವೇಗದ ಕಾರ್ಯಚರಣೆಗೆ 1.4GHz ಮಿಡಿಯಾ ಟೆಕ್ ಪ್ರೋಸೆಸರ್ ಅಳವಡಿಸಲಾಗಿದೆ,

3GB RAM ಇದೆ:

3GB RAM ಇದೆ:

ಮೊಟೊ E4 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 3GB RAM ಅಳವಡಿಸಲಾಗಿದ್ದು, ಇದರೊಂದಿಗೆ 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಮೊಟೊ E4 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 13MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಕಾಣಬಹುದಾಗಿದೆ. ಇದರೊಂದಿಗೆ LED ಫ್ಲಾಷ್ ಸಹ ಇದೆ. ಮುಂಭಾಗದಲ್ಲಿ 5MP ಕ್ಯಾಮೆರಾ ಇದ್ದು, LED ಫ್ಲಾಷ್ ಲೈಟ್ ಹೊಂದಿದೆ. FHD ವಿಡಿಯೋ ರೇಕಾರ್ಡಿಂಗ್ ಮಾಡಬಹುದಾಗಿದೆ.

ಸಾಫ್ಟ್‌ವೇರ್:

ಸಾಫ್ಟ್‌ವೇರ್:

ಮೊಟೊ E4 ಪ್ಲಸ್ ಆಂಡ್ರಾಯ್ಡ್ 7.1 ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, 4G VoLTE ಸಪೋರ್ಟ್ ಮಾಡಲಿದೆ. ಜೊತೆಗೆ ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದೆ.

ಬ್ಯಾಟರಿ:

ಬ್ಯಾಟರಿ:

ಮೊಟೊ E4 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 5000mAh ಬ್ಯಾಟರಿ ಕಾಣಬಹುದಾಗಿದೆ. ಸ್ಮಾರ್ಟ್‌ಫೋನ್ ಒಂದೇ ಚಾರ್ಜಿನಲ್ಲಿ ಎರಡು ದಿನಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಇದೇ ಈ ಪೋನಿನ ಹೈಲೈಟ್ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
As assured, Lenovo's brand Moto has announced the Moto E4 Plus in India at an event today. The bigger variant of the Moto E4 that went official sometime earlier this month is priced at Rs. 9,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot