ಜಿಯೋಗೆ ರಿಚಾರ್ಜ್ ಮಾಡಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ...!
ಮತ್ತೊಮ್ಮೆ ಅಂಬಾನಿ ತಮ್ಮ ಮಾತು ಉಳಿಸಿಕೊಂಡಿದ್ದು, ಪ್ರೈಮ್ ಬಳಕೆದಾರರಿಗೆ ಮೋಸವಾಗದ ರೀತಿಯಲ್ಲಿ ಮತ್ತೊಮ್ಮೆ 12 ಅದ್ಬುತ ಆಫರ್ ಗಳನ್ನು ನೀಡಿದ್ದಾರೆ.
ಟೆಲಿಕಾಂ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಮತ್ತೊಮ್ಮೆ ಬೊಂಬಾಟ್ ಆಫರ್ ಗಳನ್ನು ತನ್ನ ನಂಬಿದ ಗ್ರಾಹಕರಿಗೆ ನೀಡಿದೆ. ಮತ್ತೊಮ್ಮೆ ಅಂಬಾನಿ ತಮ್ಮ ಮಾತು ಉಳಿಸಿಕೊಂಡಿದ್ದು, ಪ್ರೈಮ್ ಬಳಕೆದಾರರಿಗೆ ಮೋಸವಾಗದ ರೀತಿಯಲ್ಲಿ ಮತ್ತೊಮ್ಮೆ 12 ಅದ್ಬುತ ಆಫರ್ ಗಳನ್ನು ನೀಡಿದ್ದಾರೆ.

ಓದಿರಿ: ಏನೀದು ಶಿಯೋಮಿ ಬಿಗ್ ಇಸ್ ಬ್ಯಾಕ್..? ಬಿಗ್ ಫೋನ್ ಯಾವುದು..?
ಇದೇ ಜುಲೈ ತಿಂಗಳಿನಲ್ಲಿ ಧನ್ ಧನಾ ಧನ್ ಆಫರ್ ಮುಕ್ತಾಯಗೊಳ್ಳುತ್ತಿದ್ದು, ಇದಕ್ಕಾಗಿ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಡೇಟಾ ಸುಗ್ಗಿಯ ಆಫರ್ ಪ್ರಕಟಿಸಿದೆ. ಈ ಆಫರ್'ನಲ್ಲಿ ಗ್ರಾಹಕರು ವೇಗದ 4G ಡೇಟಾ ಹಾಗೂ ಆನ್ ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಪಡೆಯಬಹುದಾಗಿದೆ. ವಿವಿಧ ಆಯ್ಕೆಯ ಸ್ವಾತಂತ್ರವನ್ನು ನೀಡಲಾಗಿದೆ.

ಜುಲೈ 11 ರಿಂದ ಜಾರಿ:
ಜಿಯೋ ಹೊಸದಾಗಿ ಲಾಂಚ್ ಮಾಡಿರುವ ಪ್ಲಾನ್ ಗಳು ಜುಲೈ.11 ರಿಂದ ಜಾರಿಗೆ ಬರಲಿದ್ದು, ಈ ಹಿಂದಿನಂತೆ ಈ ಬಾರಿಯೂ ರೂ.19 ಗಳಿಂದ 9999 ರೂ.ವರೆಗೂ ಹಲವು ಆಫರ್ ಗಳನ್ನು ಗ್ರಾಹಕರಿಗೆ ನೀಡಲಾಗಿದೆ. ಅವರ ಶಕ್ತಿಗೆ ಅನುಸಾರವಾಗಿ ಪ್ಲಾನ್ ತಮ್ಮದಾಗಿಸಿಕೊಳ್ಳಬಹುದಾಗಿದೆ.

ಈ ಬಾರಿ ಆಯ್ಕೆ ಜಾಸ್ತಿ:
ಜಿಯೋ ಈ ಬಾರಿ ತನ್ನ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲು ಮುಂದಾಗಿದೆ. ವಿವಿಧ ಶ್ರೇಣಿಯ ಆಫರ್ ಗಳನ್ನು ನೀಡಿದೆ. ಕೇವಲ ಡೇಟಾ ಲಾಭದ ಆಯ್ಕೆಗಳು ಇಲ್ಲಿದೆ.

ಒಂದು ದಿನದಿಂದ 390 ದಿನದ ಆಫರ್:
ಈ ಬಾರಿ ಜಿಯೋ ತನ್ನ ಗ್ರಾಹಕರಿಗೆ ಒಂದು ದಿನದಿಂದ ಹಿಡಿದು 390 ದಿನಗಳ ಅವಧಿಯ ಬೊಂಬಾಟ್ ಆಫರ್ ಗಳನ್ನು ನೀಡಿದೆ. ಗ್ರಾಹಕರು ತಮಗೆ ಬೇಕಾದ ಆಫರ್ ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಆಫರ್ ಒಂದು:
19 ರೂ.ಗೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು ಒಂದು ದಿನದ ಅವಧಿಗೆ 200 MB, ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಎರಡು:
49 ರೂ.ಕ್ಕೆ ದೊರೆಯುವ ಈ ಆಪರ್ ನಲ್ಲಿ ಗ್ರಾಹಕರು ಮೂರು ದಿನಗಳ ಅವಧಿಗೆ 600 MB ಡೇಟಾವನ್ನು ಪಡೆಯುವುದಲ್ಲದೇ. ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಮೂರು:
ರೂ.99 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು ಒಂದು ವಾರದ ಅವಧಿಗೆ 7 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ನಾಲ್ಕು:
ರೂ.149 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 28 ದಿನಗಳ ಅವಧಿಗೆ 2 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ 100 SMS ಉಚಿತ ಹಾಗೂ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಐದು:
ರೂ.309 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 56ದಿನದ ಅವಧಿಗೆ 56 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಆರು:
ರೂ.349 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 28 ದಿನದ ಅವಧಿಗೆ 10+10 GB ಡೇಟಾವನ್ನು ಪಡೆಯಲಿದ್ದಾರೆ. ಇದರಲ್ಲಿ 10 GB ಡೇಟಾವನ್ನು ಯಾವಾಗ ಬೇಕಾದರು ಬಳಕೆ ಮಾಡಿಕೊಳ್ಳಬಹುದು ಉಳಿದ 10 GB ಡೇಟಾವನ್ನು 28 ದಿನಗಳ ಅವಧಿಗೆ ಬಳಕೆ ಮಾಡಿಕೊಳ್ಳಬಹುದು.

ಆಫರ್ ಏಳು:
ರೂ.399 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 84 ದಿನದ ಅವಧಿಗೆ 84 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಎಂಟು:
ರೂ.509 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 56 ದಿನದ ಅವಧಿಗೆ 112 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಒಂಭತ್ತು:
ರೂ.999 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 90 ದಿನದ ಅವಧಿಗೆ 90 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಹತ್ತು:
ರೂ.1999 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 120 ದಿನದ ಅವಧಿಗೆ 155 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಹನ್ನೊಂದು:
ರೂ.4999 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 210 ದಿನದ ಅವಧಿಗೆ 380 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.

ಆಫರ್ ಹನ್ನೇರಡು:
ರೂ.9999 ಕ್ಕೆ ದೊರೆಯಲಿರುವ ಈ ಆಫರ್ ನಲ್ಲಿ ಗ್ರಾಹಕರು 390 ದಿನದ ಅವಧಿಗೆ 780 GB ಡೇಟಾವನ್ನು ಪಡೆಯಲಿದ್ದಾರೆ. ಅಲ್ಲದೇ ಉಚಿತ ಜಿಯೋ ಸೇವೆಗಳನ್ನು ಬಳಸಿಕೊಳ್ಳಬಹುದು. ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದು.
ತಂತ್ರಜ್ಞಾನ ಮಾಹಿತಿ ತಕ್ಷಣವೇ ಪಡೆಯಲು ಮರೆಯದೇ ನಮ್ಮ ಫೇಸ್‌ಬುಕ್ ಪೇಜ್ ಲೈಕ್ ಮಾಡಿ!!


Click it and Unblock the Notifications








