'ಮೊಟೊ ಜಿ ಪ್ಲೇ' 4G ಸ್ಮಾರ್ಟ್‌ಫೋನ್ ಬಜೆಟ್ ಬೆಲೆ ರೂ.8,999 ಕ್ಕೆ ಭಾರತದಲ್ಲಿ ಲಾಂಚ್
ಅಮೆರಿಕ ಟೆಕ್ನಾಲಜಿ ಸಂಸ್ಥೆ 'ಮೊಟೊರೊಲಾ(ಲೆನೊವೋ ಬ್ರ್ಯಾಂಡ್)' ಬಜೆಟ್ ಬೆಲೆಯ, ಎಲ್ಲರ ಕೈಗೆಟಕುವ 'ಮೊಟೊ ಜಿ ಪ್ಲೇ' ಸ್ಮಾರ್ಟ್‌ಫೋನ್ ಅನ್ನು ಬೆಲೆ ರೂ.8.999 ಕ್ಕೆ ಭಾರತದಲ್ಲಿ ಲಾಂಚ್ ಮಾಡಿದೆ.

'ಮೊಟೊ ಜಿ ಪ್ಲೇ' 5 ಇಂಚಿನ HD ಡಿಸ್‌ಪ್ಲೇ, ಕ್ವಾಲ್ಕಂ ಸ್ನಾಪ್‌ಡ್ರಾಗನ್ 410 ಕ್ವಾಡ್ ಕೋರ್ ಪ್ರೊಸೆಸರ್ಸ್ ಜೊತೆಗೆ 2GB RAM ಪೀಚರ್ಸ್ ಹೊಂದಿದೆ. ಆಂಡ್ರಾಯ್ಡ್ 6.0.1 ಮಾರ್ಷ್‌ಮಲ್ಲೊ ಆಪರೇಟಿಂಗ್ ಸಿಸ್ಟಮ್ ಚಾಲಿತವಾಗಿದೆ.
ಡಿವೈಸ್ 8MP ಹಿಂಭಾಗ ಕ್ಯಾಮೆರಾ ಜೊತೆಗೆ 5MP ಸೆಲ್ಫಿ ಕ್ಯಾಮೆರಾ ಸಪೋರ್ಟ್ ಮಾಡುತ್ತದೆ. 2,800mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 'ಮೊಟೊ ಜಿ ಪ್ಲೇ' 10W ಕ್ವಿಕ್ ಚಾರ್ಚರ್ ಹೊಂದಿದ್ದು, ಕೇವಲ 15 ನಿಮಿಷ ಚಾರ್ಜ್ ಮಾಡುವುದರಿಂದ 5 ಗಂಟೆಗಳ ಕಾಲ ಪವರ್ ನೀಡುತ್ತದೆ. ಸಂಪರ್ಕ ವ್ಯವಸ್ಥೆಯಲ್ಲಿ '4GLTE, ವೈಫೈ, ಬ್ಲೂಟೂತ್ ಮತ್ತು ಇತರೆ'.

ಬಳಕೆದಾರರಿಗೆ yatra.com ನಿಂದ ಯಾತ್ರಾ ಇ-ಕ್ಯಾಶ್ ಆಫರ್ ಲಭ್ಯವಿದ್ದು, ಮೊಟೊ ಪಲ್ಸ್ 2 ಹೆಡ್‌ಫೋನ್ ಮೇಲೆ 300 ರೂ ಕ್ಯಾಶ್‌ಬ್ಯಾಕ್ ಆಫರ್ ಇದೆ. ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್.ಇನ್'ನಲ್ಲಿ ವಿಶೇಷ ಆಫರ್‌ಗಳಲ್ಲಿ ಸೆಪ್ಟೆಂಬರ್ 13 ರ ವರೆಗೆ ಖರೀದಿಸಬಹುದಾಗಿದೆ.
ಮೊಟೊ ಜೆಡ್ ಪ್ಲೇ ಮೊಟೊ ಮೊಡ್ಸ್ ನೊಂದಿಗೆ ಘೋಷಿಸಿದೆ: ಇಲ್ಲಿವೆ 10 ಮೆಚ್ಚುವ ಫೀಚರ್‍ಗಳು


Click it and Unblock the Notifications








