Home
ಮೊಬೈಲ್

Moto G45 5G ಬಿಡುಗಡೆಗೆ ಮುಹೂರ್ತ ಫಿಕ್ಸ್.. 15 ಸಾವಿರಕ್ಕಿಂತ ಕಡಿಮೆ ಬೆಲೆ!

ನೀವು ಮೊಟೊರೊಲಾ ಪ್ರಿಯರಾಗಿದ್ದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ. ಮೊಟೊರೊಲಾ ಶೀಘ್ರದಲ್ಲೇ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯ ಮುಂಬರುವ ಫೋನ್ ಮೊಟೊ G45 5G (Moto G45 5G) ಹೆಸರಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಕಂಪನಿಯು ತನ್ನ ಪೋರ್ಟ್‌ಫೋಲಿಯೊವನ್ನು ವೇಗವಾಗಿ ವಿಸ್ತರಿಸುತ್ತಿದೆ. ಈ ಫೋನನ್ನು ಬಜೆಟ್ ವಿಭಾಗದಲ್ಲಿ ಪ್ರಾರಂಭಿಸಬಹುದು. ಇದರಲ್ಲಿ ನೀವು ಕಡಿಮೆ ಬೆಲೆಯಲ್ಲಿ ಅದ್ಭುತ ಕ್ಯಾಮೆರಾ ಸೆಟಪ್ ಪಡೆಯಬಹುದು.

ಹೌದು, ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಮೊಟೊರೊಲಾ ಇತ್ತೀಚೆಗೆ ಮೊಟೊ ಎಡ್ಜ್ 50 ಅನ್ನು ಬಿಡುಗಡೆ ಮಾಡಿತು. ಇದೀಗ, ಲೆನೋವೊ (Lenovo) ಒಡೆತನದ ಮೊಟೊರೊಲಾ (Motorola) ಮತ್ತೊಂದು ಮೊಬೈಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಮೊಟೊರೊಲಾ ಇತ್ತೀಚಿನ ದಿನಗಳಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗ ಕಂಪನಿಯು ತನ್ನ ಅಭಿಮಾನಿಗಳಿಗಾಗಿ ಹೊಸ ಸ್ಮಾರ್ಟ್‌ಫೋನ್ ಮೊಟೊ G45 5G ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

Moto G45 5G ಬಿಡುಗಡೆಗೆ ಮುಹೂರ್ತ ಫಿಕ್ಸ್.. 15 ಸಾವಿರಕ್ಕಿಂತ ಕಡಿಮೆ ಬೆಲೆ!

ಮೊಟೊ G45 5G ಫೋನಿಗೆ ಸಂಬಂಧಿಸಿದ ಸೋರಿಕೆಗಳು ಮೇಲಿಂದ ಮೇಲೆ ಹೊರಬರುತ್ತಿವೆ. ಇದೀಗ ಈ ಸ್ಮಾರ್ಟ್‌ಫೋನ್‌ನ ಭಾರತದಲ್ಲಿ ಬಿಡುಗಡೆಯನ್ನು ಖಚಿತಪಡಿಸಲಾಗಿದೆ. ಮೊಟೊರೊಲಾ ಬಜೆಟ್ ವಿಭಾಗದಲ್ಲಿ ಮೊಟೊ G45 5G ಫೊನನ್ನು ಪರಿಚಯಿಸುತ್ತದೆ. ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ ಪಡೆಯಲು ಬಯಸಿದರೆ, ನೀವು ಮುಂಬರುವ ಈ ಸ್ಮಾರ್ಟ್‌ಫೋನ್ ಆಯ್ಕೆ ಮಾಡಬಹುದು. ಈ ಫೋನಿನ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.

Moto G45 5G ಬಿಡುಗಡೆ ದಿನಾಂಕ, ಸಮಯ

ಮೊಟೊರೊಲಾ ಕಂಪನಿಯು ಮೊಟೊ G45 5G ಫೋನನ್ನು ಆಗಸ್ಟ್ 21 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಕಂಪನಿಯು ಇದನ್ನು ಅದ್ಧೂರಿಯಾಗಿ ಲಾಂಚ್ ಮಾಡಲಿದೆ. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ನೀವು ಈ ಫೋನನ್ನು ಖರೀದಿಸಬಹುದು. ಮೊಟೊರೊಲಾ ಫ್ಲಿಪ್‌ಕಾರ್ಟ್‌ನಲ್ಲಿ ಇದಕ್ಕಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಸಹ ಲೈವ್ ಮಾಡಿದೆ.

ಮೊಟೊರೊಲಾ ಇನ್ನೂ ಈ ಫೋನಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ, ಕಂಪನಿಯು ಸುಮಾರು 15 ಸಾವಿರ ರೂ.ಗಳಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊಟೊ G45 5G ಫೋನ್ ಮೂರು ಬಣ್ಣ ಆಯ್ಕೆಗಳನ್ನು ಪಡೆಯಬಹುದು. ಕೆಂಪು, ನೀಲಿ ಮತ್ತು ಹಸಿರು ಬಣ್ಣದಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಲೆದರ್ ಬ್ಯಾಕ್‌ಪನೆಲ್‌ನೊಂದಿಗೆ ಮಾರುಕಟ್ಟೆಗೆ ಬರಬಹುದು.

ಮೊಟೊ ಜಿ45 5G ನಿರೀಕ್ಷಿತ ವೈಶಿಷ್ಟ್ಯಗಳು

ಡಿಸ್ಲ್ಪೇ: ಮೊಟೊರೊಲಾದ ಹೊಸ ಸ್ಮಾರ್ಟ್‌ಫೋನ್‌ 6.5 ಇಂಚಿನ ದೊಡ್ಡ ಡಿಸ್ಲ್ಪೇಯನ್ನು ಹೊಂದಿರಲಿದೆ. ಇದರಲ್ಲಿ ನೀವು 120Hz ನ ರಿಫ್ರೆಶ್ ದರವನ್ನು ಪಡೆಯಬಹುದು. ಕಂಪನಿಯು ಈ ಬಜೆಟ್ ಫೋನ್‌ನಲ್ಲಿ 1600 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಹೊಂದಿರುವ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಒದಗಿಸಬಹುದು.

ಪ್ರೊಸೆಸರ್: ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6s Gen 3 ಪ್ರೊಸೆಸರ್ ಅನ್ನು ಒದಗಿಸಬಹುದು. ತನ್ನ ಪೋರ್ಟ್‌ಫೋಲಿಯೊದಲ್ಲಿ ಮೊಟೊ G45 ಅತ್ಯಂತ ವೇಗದ 5G ಫೋನ್ ಆಗಿರುತ್ತದೆ ಎಂದು ಮೊಟೊರೊಲಾ ಹೇಳಿದೆ. ಫೋನ್ 13 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ: ಬರ್ತಿದೆ ಹೊಸ Samsung ಫೋನ್! ಬಿಡುಗಡೆ ಟೈಮ್‌ಲೈನ್ ಬಹಿರಂಗ; ವಿಶೇಷತೆಗಳೇನು?

ಸ್ಟೋರೇಜ್: ಮೊಟೊ G45 5G ಫೋನ್ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬರುವ ಸಾಧ್ಯತೆಯಿದೆ.

ಕ್ಯಾಮೆರಾ: ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. 50MP ಕ್ವಾಡ್ಪಿಕ್ಸೆಲ್ ಮುಖ್ಯ ಕ್ಯಾಮೆರಾ, ಸೆಕೆಂಡರಿ ಕ್ಯಾಮೆರಾ 2MP ಡೆಪ್ತ್ ಸೆನ್ಸಾರ್ ಎಂದು ಹೇಳಲಾಗಿದೆ.

ಬ್ಯಾಟರಿ: ಮೊಟೊ G45 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ.

ಇತರೆ ಫೀಚರ್ಸ್: ಈ ಫೋನ್ ಡಾಲ್ಬಿ ಅಟ್ಮಾಸ್, ಹೈ-ಫೈ ಆಡಿಯೋ ಮತ್ತು ಸ್ಮಾರ್ಟ್ ಕನೆಕ್ಟ್ ಅನ್ನು ಹೊಂದಿರುತ್ತದೆ. ಇದು ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್, ಫೇಸ್ ಅನ್‌ಲಾಕ್, ವಾಟರ್ ರೆಸಿಸ್ಟೆನ್ಸ್, ಬಾಕ್ಸ್‌ನಲ್ಲಿ ಟೆಂಪರ್ಡ್ ಗ್ಲಾಸ್ ಮತ್ತು ಬಿಲ್ಟ್-ಇನ್ ಸೆಕ್ಯುರಿಟಿ ಸ್ಕ್ಯಾನ್ ವೈಶಿಷ್ಟ್ಯವನ್ನು ಹೊಂದಿರುತ್ತದೆ.

Best Mobiles in India

English summary
Motorola Set to Launch Moto G45 Smartphone soon in India: Know Expected Specs, Price and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+