Subscribe to Gizbot

ಲಾಂಚ್ ಆಯ್ತು ಮೊಟೊ G5, ಮೊಟೊ G5 ಪ್ಲಸ್: ಮಾರ್ಚ್‌ನಲ್ಲಿ ಮಾರುಕಟ್ಟೆಗೆ..!!

Written By:

ಮೊಟೊರೊಲಾ ಕಂಪನಿಯ ಬಹುನಿರೀಕ್ಷಿತ ಮೊಟೊ G5, ಮೊಟೊ G5 ಪ್ಲಸ್ ಸ್ಮಾರ್ಟ್‌ಪೋನುಗಳು ಫೆಬ್ರವರಿ 26 ರಂದು ಬಾರ್ಸಿಲೋನಾದಲ್ಲಿ ನಡೆದ ವರ್ಲ್ಡ್ ಮೊಬೈಲ್ ಕಾಂಗ್ರೆಸ್‌ನಲ್ಲಿ ಲಾಂಚ್ ಆಗಿದೆ.

ಲಾಂಚ್ ಆಯ್ತು ಮೊಟೊ G5, ಮೊಟೊ G5 ಪ್ಲಸ್: ಮಾರ್ಚ್‌ನಲ್ಲಿ ಮಾರುಕಟ್ಟೆಗೆ..!!

ಓದಿರಿ: 2 GB RAM, 8 MP ಸೆಲ್ಫಿ ಕ್ಯಾಮೆರಾ ಇರುವ ನೋಕಿಯಾ 3 ಸ್ಮಾರ್ಟ್‌ಪೋನ್‌ ಬೆಲೆ 9,800 ಮಾತ್ರ..!!

ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ. ಈ ಎರಡು ಮಾದರಿಯ ಪೋನುಗಳು ಹೊಸ ಮಾದರಿ ವಿನ್ಯಾಸವನ್ನು ಹೊಂದಿದ್ದು, ಮೆಟಲ್ ಬಾಡಿ ಮತ್ತು ಸರ್ಕಲ್ ಕ್ಯಾಮರಾ ಫ್ರೇಮ್ ಹೊಂದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ G5, ಮೊಟೊ G5 ಪ್ಲಸ್ ಬೆಲೆ:

ಮೊಟೊ G5, ಮೊಟೊ G5 ಪ್ಲಸ್ ಬೆಲೆ:

2GB RAM/ 16GB ಮೆಮೊರಿ ಹೊಂದಿರುವ ಮೊಟೊ G5 ಸರಿ ಸುಮಾರು 14,000 ರೂ.ಗಳಿಗೆ ಮಾರಾಟವಾಗಲಿದ್ದು, 2GB RAM/ 32GB ಮೆಮೊರಿ ಹೊಂದಿರುವ ಮೊಟೊ G5 ಪ್ಲಸ್ ರೂ. 15,300 ರೂಗಳಿಗೆ ಮಾರಾಟವಾಗಲಿದೆ. ಅಲ್ಲದೇ 3GB RAM and 32GB ಮೆಮೊರಿ ಹೊಂದಿರುವ ಮೊಟೊ G5 ಪ್ಲಸ್ 19,700 ರೂಗಳಿಗೆ ಮಾರಾಟವಾಗಲಿದೆ.

ಭಾರತದಲ್ಲಿ ಮೊಟೊ G5, ಮೊಟೊ G5 ಪ್ಲಸ್

ಭಾರತದಲ್ಲಿ ಮೊಟೊ G5, ಮೊಟೊ G5 ಪ್ಲಸ್

ಭಾರತದಲ್ಲಿ ಮೊಟೊ G5, ಮೊಟೊ G5 ಪ್ಲಸ್ ಮಾರ್ಚ್‌ ನಲ್ಲಿ ಲಭ್ಯವಿರಲಿದ್ದು, ಆನ್‌ಲೈನ್ ಸೇರಿದಂತೆ ಸಾಮಾನ್ಯ ಮಾರುಕಟ್ಟೆಯಲ್ಲಿಯೂ ಈ ಪೋನ್ ಲಭ್ಯವಿರಲಿದೆ ಎನ್ನಲಾಗಿದೆ. ಒಂದೇ ಸಮಯದಲ್ಲಿ ವಿಶ್ವದೆಲ್ಲೆಡೆ ಈ ಪೋನ್ ಮಾರುಕಟ್ಟೆ ಪ್ರವೇಶಿಲಿದೆ.

ಮೊಟೊ G5, ಮೊಟೊ G5 ಪ್ಲಸ್ ವಿಶೇಷತೆಗಳು:

ಮೊಟೊ G5, ಮೊಟೊ G5 ಪ್ಲಸ್ ವಿಶೇಷತೆಗಳು:

ಈ ಎರಡು ಸ್ಮಾರ್ಟ್‌ಪೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಅದುವೇ ಮುಂಭಾಗದ ಹೋಮ್ ಬಟನ್‌ನಲ್ಲಿ. ಅಲ್ಲದೇ ಗೂಗಲ್ ಪಿಕ್ಸಲ್ ಬಿಟ್ಟು ಇದೇ ಮೊದಲ ಬಾರಿಗೆ ಮೊಟೊ G5, ಮೊಟೊ G5 ಪ್ಲಸ್ ಪೋನಿನಲ್ಲಿ ಗೂಗಲ್ ಅಸಿಸ್ಟೆಂಟ್ ನೀಡಲಾಗಿದೆ. ಅಲ್ಲದೇ ಅನೇಖ ವಿಶೇಷತೆಗಳು ಈ ಪೋನಿನಲ್ಲಿದೆ.

ಮೊಟೊ G5 ಪ್ರಮುಖ ಅಂಶಗಳು:

ಮೊಟೊ G5 ಪ್ರಮುಖ ಅಂಶಗಳು:

ಮೊಟೊ G5 5 ಇಂಚಿನ full-HD ಡಿಸ್‌ಪ್ಲೇ ಹೊಂದಿದ್ದು, 1080x1920 p ರೆಸಲ್ಯೂಷನ್‌ನಿಂದ ಕೂಡಿದೆ. 1.4GHz ಸ್ನಾಪ್‌ಡ್ರಾಗನ್ 430 ಹೊಂದಿದ್ದು, 2GB ಇಲ್ಲವೇ 3GB RAM ಮತ್ತು 16GB ಇಲ್ಲವೇ 32GB ಇಂಟರನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ. ತೆಗೆಯಬಹುದಾದ 2800mAh ಬ್ಯಾಟರಿ ಈ ಪೋನಿನಲ್ಲಿದ್ದು, LED ಫ್ಲಾಶ್ ನೊಂದಿಗೆ 13 MP ಹಿಂಬದಿ ಕ್ಯಾಮರೆ ಮತ್ತು ಮುಂಭಾದಗದಲ್ಲಿ 5MP ಕ್ಯಾಮೆರಾ ಈ ಪೋನಿನಲ್ಲಿದೆ.

ಮೊಟೊ G5 ಪ್ಲಸ್ ಪ್ರಮುಖ ಅಂಶಗಳು:

ಮೊಟೊ G5 ಪ್ಲಸ್ ಪ್ರಮುಖ ಅಂಶಗಳು:

ಮೊಟೊ G5 ಪ್ಲಸ್ 5.5 ಇಂಚಿನ full-HD ಡಿಸ್‌ಪ್ಲೇ 080x1920 p ರೆಸಲ್ಯೂಷನ್‌ನಿಂದ ಕೂಡಿದೆ. 2GHz ಸ್ನಾಪ್‌ಡ್ರಾಗನ್ 625 ಆಕ್ವಾ ಪ್ರೋಸೆಸರ್ ಇದರಲ್ಲಿದೆ. 2GB, 3GB, ಮತ್ತು 4GB RAM ಮಾದರಿಯಲ್ಲಿ ಈ ಪೋನ್ ಲಭ್ಯವಿದ್ದು, 32GB ಇಲ್ಲಬೇ 64GB ಇಂಟರ್ನಲ್ ಮೆಮೊರಿಯನ್ನು ಈ ಪೋನ್‌ ಹೊಂದಿರಲಿದೆ. 3000mAh ತೆಗೆಯಲಾಗದ ಬ್ಯಾಟರಿ ಇದರಲಿದ್ದು, 12 MP ಹಿಂಬದಿ ಕ್ಯಾಮರೆ ಹೊಂದಿದೆ.ಜೊತೆಗೆ ಡುಯಲ್ LED ಫ್ಲಾಶ್‌ಲೈಟು ಸಹ ಇದೆ. ಅಲ್ಲದೇ ವೇಗದ ಚಾರ್ಜಿಂಗ್ ಸಹ ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Motorola has launched the Moto G5 and Moto G5 Plus in Barcelona at MWC 2017. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot